ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತ ಸಾಧಕಿ ಕವಿತಾ ಮಿಶ್ರ ಅವರಿಗೆ "ಕಾರಂತ ಹುಟ್ಟೂರ" ಪ್ರಶಸ್ತಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 11: ಸಾಧಕಿ ರೈತ ಮಹಿಳೆ ಕವಿತಾ ಮಿಶ್ರ ಅವರಿಗೆ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರು ಪ್ರತಿಷ್ಠಾನ ನೀಡುವ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಶಾಲ ಹೃದಯದ ಮಹೋನ್ನತ ವ್ಯಕ್ತಿ ಶಿವರಾಮ ಕಾರಂತವಿಶಾಲ ಹೃದಯದ ಮಹೋನ್ನತ ವ್ಯಕ್ತಿ ಶಿವರಾಮ ಕಾರಂತ

ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಡಾ.ಕೋಟ ಶಿವರಾಮ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕವಿತಾ ಮಿಶ್ರ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಪ್ರತೀ ವರ್ಷ ಕೋಟತಟ್ಟು ಗ್ರಾಮ ಪಂಚಾಯತಿ, ಕಾರಂತ ಹುಟ್ಟೂರ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾರಂತ ಹೆಸರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಹುಟ್ಟೂರ ಪ್ರಶಸ್ತಿ ನೀಡಲಾಗುತ್ತಿದೆ.

Kavitha Mishra Honored With Karantha Hutturu Award

ಇದುವರೆಗೆ ವೀರಪ್ಪ ಮೊಯಿಲಿ, ರವಿ ಬೆಳಗೆರೆ, ಜಸ್ಟೀಸ್ ವೆಂಕಟಾಚಲ, ಬಿ.ಜಯಶ್ರೀ, ಪ್ರಕಾಶ್ ರೈ, ಗಿರೀಶ್ ಕಾಸರವಳ್ಳಿ, ಸಾಲುಮರದ ತಿಮ್ಮಕ್ಕ ಮೊದಲಾದ ಖ್ಯಾತ ನಾಮರು ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

English summary
Farmer Kavitha Mishra honored with "Karantha Hutturu award" which was given by Dr.Kota Shivarama Karanth Hutturu pratistana in udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X