ಮತದಾನ; ಉಡುಪಿಯಲ್ಲಿ 1111 ಮತಗಟ್ಟೆ, 10,41,915 ಮತದಾರರು
ಉಡುಪಿ, ಮೇ 09; ಕರ್ನಾಟಕ ವಿಧಾನಸಭೆ ಚುಣಾವಣೆ 2023ರ ಮತದಾನ ರಾಜ್ಯ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಮತದಾನಕ್ಕಾಗಿ ಒಟ್ಟು 1111 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 243 ಮಂದಿ ಸೇವಾ ಮತದಾರರು ಸೇರಿದಂತೆ ಒಟ್ಟು 10,41,915 ಮಂದಿ ಮತದಾನಕ್ಕೆ ಅರ್ಹರು.
ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 5,02,836 ಪುರುಷ, 5,38,823 ಮಹಿಳಾ ಮತದಾರರು, 13 ಇತರ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಬೈಂದೂರು, ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ವಿಧಾನಸಭಾ ಕ್ಷೇತ್ರಗಳಿವೆ.

ಎಲ್ಲಾ ಅರ್ಹ ಮತದಾರರು ಬುಧವಾರ ಮತಗಟ್ಟೆಗೆ ಬರುವಾಗ ಮನೆ-ಮನೆಗೆ ಈಗಾಗಲೇ ತಲುಪಿಸಿರುವ ಓಟರ್ ಸ್ಲಿಪ್ ಜೊತೆಗೆ ಗುರುತಿಗಾಗಿ ಮತದಾರ ಪತ್ರ (ಎಪಿಕ್ ಕಾರ್ಡ್) ಅನ್ನು ತರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಎಪಿಕ್ ಕಾರ್ಡ್ ಇಲ್ಲದವರು ಇತರ 12 ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶವಿದೆ.
ಕ್ಷೇತ್ರವಾರು ಮತದಾರರು; ಉಡುಪಿ ಜಿಲ್ಲೆಯ ಕ್ಷೇತ್ರವಾರು ಮತದಾರರ ವಿವರ ಹೀಗಿದೆ. ಬೈಂದೂರು ಕ್ಷೇತ್ರದಲ್ಲಿ 1,15,346 ಪುರುಷ, 1,20,319 ಮಹಿಳೆ, 3 ಇತರ ಹಾಗೂ 48 ಸೇವಾ ಮತದಾರರು ಸೇರಿದಂತೆ ಒಟ್ಟು 2,35,716. ಕುಂದಾಪುರ ಕ್ಷೇತ್ರದಲ್ಲಿ 1,00,751 ಪುರುಷ, 1,08,784 ಮಹಿಳಾ, 2 ಇತರ ಹಾಗೂ 55 ಸೇವಾ ಮತದಾರರು ಸೇರಿ ಒಟ್ಟು 2,09,592 ಮತದಾರು ಇದ್ದಾರೆ.

ಉಡುಪಿ ಕ್ಷೇತ್ರದಲ್ಲಿ 1,04,787 ಪುರುಷ, 1,12,148 ಮಹಿಳೆ, 3 ಇತರ ಹಾಗೂ 51 ಸೇವಾ ಮತದಾರರು ಸೇರಿ ಒಟ್ಟು 2,16,989 ಮತದಾರರು ಇದ್ದಾರೆ. ಕಾಪು ಕ್ಷೇತ್ರದಲ್ಲಿ 90,517 ಪುರುಷ, 98,430 ಮಹಿಳೆ, 5 ಇತರೆ, 55 ಸೇವಾ ಮತದಾರರು ಸೇರಿ ಒಟ್ಟು 1,89,007 ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು.
ಇನ್ನೂ ಕಾರ್ಕಳ ಕ್ಷೇತ್ರದಲ್ಲಿ 91,435 ಪುರುಷ, 99,142 ಮಹಿಳೆ, 34 ಸೇವಾ ಮತದಾರರು ಸೇರಿ ಒಟ್ಟು 1,90,611 ಮತದಾರರಿದ್ದಾರೆ. ಎಲ್ಲಾ ಅರ್ಹ ಮತದಾರರು ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ.
ಜಿಲ್ಲೆಯಲ್ಲಿ ಮತದಾನಕ್ಕಾಗಿ ಒಟ್ಟು 1,111 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರವಾರು ಬೈಂದೂರಿನಲ್ಲಿ 246, ಕುಂದಾಪುರದಲ್ಲಿ 222, ಉಡುಪಿಯಲ್ಲಿ 226, ಕಾಪುವಿನಲ್ಲಿ 208 ಹಾಗೂ ಕಾರ್ಕಳದಲ್ಲಿ 209 ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ಈ ಬಾರಿಯ ಚುನಾವಣೆಗಾಗಿ ಮಹಿಳೆಯರೇ ನಡೆಸುವ ಸಖೀ ಮತಗಟ್ಟೆ, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸುವ ಪಿಡಬ್ಲ್ಯುಡಿ ಮತಗಟ್ಟೆ ಹಾಗೂ ಎಥಿನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಐದರಂತೆ ಒಟ್ಟು 25 ಸಖಿ ಮತಗಟ್ಟೆಗಳೊಂದಿಗೆ ಕ್ಷೇತ್ರಕ್ಕೆ ತಲಾ ಒಂದರಂತೆ ಒಟ್ಟು 5 ಪಿಡಬ್ಲ್ಯುಜಿ ಮತಗಟ್ಟೆ, 5 ಯುವ ಮತದಾರರ ಮತಗಟ್ಟೆ, 5 ಥೀಮ್ ಆಧಾರಿತ ಮತಗಟ್ಟೆ ಹಾಗೂ ಕುಂದಾಪುರ ತಾಲೂಕಿನ ಸೌಡದಲ್ಲಿ ಕೊರಗ ಸಂಸ್ಕೃತಿ ಸಾರುವ ಎಥಿನಿಕ್ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಉಡುಪಿ ಜಿಲ್ಲಾಡಳಿತ ಹೇಳಿದೆ.












Click it and Unblock the Notifications