Get Updates
Get notified of breaking news, exclusive insights, and must-see stories!

ಉಸೇನ್ ಬೋಲ್ಟ್ ಅನ್ನು ಮೀರಿಸಿದ ಕಂಬಳ ವೀರ ಶ್ರೀನಿವಾಸ್ ಗೌಡ

ಉಡುಪಿ, ಫೆಬ್ರವರಿ 13: ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಉಸೇನ್ ಬೋಲ್ಟ್ ಅನ್ನೇ ಮೀರಿಸುವ ವೇಗದ ಓಟವನ್ನು ಮಾಡಿದ್ದಾರೆ ದಕ್ಷಿಣ ಕನ್ನಡದ ಕಂಬಳ ವೀರ ಶ್ರೀನಿವಾಸ್ ಗೌಡ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸ್ ಗೌಡ ಅವರು, ಇತ್ತೀಚೆಗೆ ಐಕಳದಲ್ಲಿ ನಡೆದ ನೇಗಿಲು ಹಿರಿಯ ಕಂಬಳದಲ್ಲಿ 145 ಮೀಟರ್ ಓಟವನ್ನು ಕೇವಲ 13.61 ಸೆಕೆಂಡ್‌ನಲ್ಲಿ ಓಡಿದ್ದಾರೆ. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ 100 ಮೀಟರ್ ದೂರವನ್ನು 9.58 ಸೆಕೆಂಡ್‌ಗಳಲ್ಲಿ ಓಡಿದ್ದರು.

ಶ್ರೀನಿವಾಸ್ ಗೌಡ ಅವರು 145 ಮೀಟರ್ ಓಟವನ್ನು 13.61 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ. ಅವರ ಓಡಿರುವ ವೇಗದ ಲೆಕ್ಕಾ ಹಾಕಿದರೆ ಶ್ರೀನಿವಾಸ್ ಗೌಡ ಅವರು 100 ಮೀಟರ್ ಅನ್ನು ಕೇವಲ 9.55 ಸೆಕೆಂಡ್‌ಗಳಲ್ಲಿ ಓಡಿದ್ದಾರೆ.

Kambala Runner Breaks Record Of Usain Bolt

ಶ್ರೀನಿವಾಸ್ ಗೌಡ ಅವರು ಕಂಬಳದಲ್ಲಿ ಓಡಿದ ವಿಡಿಯೋವನ್ನು ಹಲವರು ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದು, ಉಸೇನ್ ಬೋಲ್ಟ್‌ ಗೆ ಹೋಲಿಸಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಶ್ರೀನಿವಾಸ್ ಗೌಡ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ವಿಡಿಯೋಗಳನ್ನು ಹಲವರು ಹಂಚಿಕೊಂಡು ಅಭಿನಂದಿಸಿದ್ದಾರೆ, ಇದು ಸಂತಸ ತಂದಿದೆ, ನನ್ನ ಗೆಲುವಿನ ಹಿಂದೆ ಕೋಣಗಳ ಶ್ರಮವೂ ಇದೆ' ಎಂದು ಕಂಬಳದಲ್ಲಿ ಓಡಿದ ತಾಟೆ ಹಾಗೂ ಮೋಡ ಜೋಡಿ ಕೋಣಗಳನ್ನು ನೆನಪಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+