ಪಕ್ಷಗಳಿಂದ ಆಹ್ವಾನ, ಯಾರ ಪಾಲಾಗಲಿದ್ದಾರೆ ಶೀರೂರು ಶ್ರೀ?

Posted By: Shreyas K
Subscribe to Oneindia Kannada

ಉಡುಪಿ, ಮಾರ್ಚ್ 13: ಶ್ರೀಕೃಷ್ಣನಿಗೆ ಪೂಜೆಗೈಯುತ್ತಿರುವ ಶೀರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ರಾಜಕೀಯಕ್ಕೆ ಪ್ರವೇಶ ಪಡೆಯುತ್ತಿರುವುದು ಈಗ ಹಳೆ ಸುದ್ದಿ. ಇದೀಗ ಅವರಿಗೆ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನಗಳು ಬರುತ್ತಿವೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ತಮ್ಮ ಚಿನ್ಹೆಯಡಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆಗೆ ಇಳಿಯುವಂತೆ ಸ್ವಾಮೀಜಿಗೆ ಜೆಡಿಯು ಪಕ್ಷ ಆಹ್ವಾನ ನೀಡಿದೆ. ಶ್ರೀರೂರು ಶ್ರೀಗಳು ರಾಜಕೀಯಕ್ಕೆ ಇಳಿಯಲಿದ್ದೇನೆ ಎಂದು ಹೇಳುತ್ತಿದ್ದಂತೆ ಟಿಕೆಟ್ ನೀಡುವುದಾಗಿ ಜೆಡಿಯು ಪಕ್ಷದ ಕಡೆಯಿಂದ ಪತ್ರ ಬರೆಯಲಾಗಿದೆ.

ಕರಾವಳಿ ಚುನಾವಣಾ ಅಖಾಡದಲ್ಲಿನ್ನು 'ಯೋಗಿ ಮಾದರಿ' ರಾಜಕೀಯ

ಜೆಡಿಎಸ್ ಮತ್ತು ಜೆಡಿಯು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಭರವಸೆಯನ್ನು ಪತ್ರದ ಮೂಲಕ ತಿಳಿಸಲಾಗಿದೆ. "ಈ ಭಾರಿ ಸ್ವಾಮೀಜಿ ರಾಜಕೀಯಕ್ಕೆ ಬಂದರೆ ಹಲವು ಬದಲಾವಣೆಗಳು ಸಾಧ್ಯವಾಗಲಿದೆ. ಸ್ವಾಮೀಜಿಗಳಿಂದ ಮಾತ್ರ ಉಡುಪಿ ಜಿಲ್ಲೆಯ ಅಭಿವೃದ್ದಿ ಸಾಧ್ಯ. ಈ ಕುರಿತು ಸ್ವಾಮೀಜಿ ಧನಾತ್ಮಕವಾಗಿ ನಿರ್ಧರಿಸಬೇಕು," ಎಂದು ಜೆಡಿಯು ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್ ಪತ್ರದಲ್ಲಿ ಒತ್ತಾಯಸಿದ್ದಾರೆ.

JDU has invited Shiroor Swamiji to contest from the party

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವ ಇಂಗಿತವನ್ನು ಸ್ವಾಮೀಜಿಗಳು ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶೀರೂರು ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದೆಂಬ ಉಲ್ಲೇಖವಿದೆಯೇ?: ಶೀರೂರು ಶ್ರೀ ಸಂದರ್ಶನ

ಇದೀಗ ಸ್ವಾಮೀಜಿ ಜೆಡಿಯು ಪಕ್ಷದಿಂದ ಸ್ಪರ್ಧೆಗೆ ಒಲವು ತೋರಿಸುತ್ತಾರಾ ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: JDU has invited Udupi Shiroor Swamiji to contest from their party in Udupi assembly constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ