ಮನೆಕೆಲಸಕ್ಕೆ ಸೇರಿಸಿಕೊಂಡು ಸೌದೆಯಿಂದ ಹೊಡೆದರು, ಬೆನ್ನಿಗೆ ಬೆಂಕಿ ಇಟ್ಟರು
ಉಡುಪಿ, ನವೆಂಬರ್ 4: ಮನೆಗೆಲಸದಾಕೆ ಮೇಲೆ ಅಕಾರಣವಾಗಿ ಮನೆ ಒಡತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆ ಉದ್ಯಾವರ ಗ್ರಾಮದ ಬೋಳಾರ್ ಗುಡ್ಡೆಯಲ್ಲಿ ನಡೆದಿದೆ. ಸರಸ್ವತಿ ಹಲ್ಲೆಗೊಳಗಾದ ಯುವತಿ.
ಶಿರಸಿ ಮೂಲದ ಸರಸ್ವತಿ ಎರಡು ತಿಂಗಳಿನ ಹಿಂದೆ ಬಂದು ಇಲ್ಲಿ ಮನೆ ಕೆಲಸಕ್ಕಿದ್ದಳು. ದುಡಿಮೆಗೆ ಮನೆಯ ಒಡತಿ ನಯಾಪೈಸೆ ಸಂಬಳವನ್ನೂ ನೀಡಿರಲಿಲ್ಲ. ಕಾರಣವೇ ಇಲ್ಲದೇ ಮನೆ ಕೆಲಸದಾಕೆಗೆ ಸೌದೆಯಿಂದ ಹಲ್ಲೆ ಮಾಡಿ ಕೈ, ಕಾಲಿಗೆ ಗಾಯ ಮಾಡಿದ್ದಾಳೆ. ಇದೂ ಸಾಲದೆಂಬಂತೆ ಬೆನ್ನಿಗೆ ಬೆಂಕಿ ತಾಗಿಸಿ ಘಾಸಿ ಮಾಡಿದ್ದಾಳೆ. ಮನೆ ಕೆಲಸದ ಸರಸ್ವತಿ, ಸೌಮ್ಯ ಮನೆಯಲ್ಲಿ ಮಗುವಿನ ಲಾಲನೆ ಮತ್ತು ಮನೆಗೆಲಸಕ್ಕೆಂದು ಉಡುಪಿಗೆ ಬಂದಿದ್ದಳು. ಮನೆಯೊಡತಿಯ ದೌರ್ಜನ್ಯದಿಂದ ಗಾಯಗಳಾಗಿದ್ದು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕಾಪು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications