ದುಬೈನಿಂದ ಉಡುಪಿಗೆ ಬಂದಿದ್ದ ಐವರಲ್ಲೀಗ ಕೊರೊನಾ
ಉಡುಪಿ, ಮೇ 15: ದುಬೈನಿಂದ ಉಡುಪಿಗೆ ವಾಪಸ್ಸಾಗಿರುವವರ ಪೈಕಿ ಐವರಲ್ಲಿ ಕೊರೊನಾ ಸೋಂಕು ಇರುವುದು ಇಂದು ಪತ್ತೆಯಾಗಿದೆ.
52, 31, 37 ವರ್ಷದ ಮೂವರು ಪುರುಷರು ಹಾಗೂ 33, 38 ವರ್ಷದ ಮಹಿಳೆಯರಲ್ಲಿ ಸೋಂಕು ಇರುವುದು ಇಂದು ದೃಢಪಟ್ಟಿದೆ. ದುಬೈನಿಂದ ಉಡುಪಿಗೆ ಮೇ 12ರಂದು ಒಟ್ಟು 52 ಜನರು ವಾಪಸ್ಸಾಗಿದ್ದರು. ಇವರೆಲ್ಲರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದಿದ್ದರು. ದುಬೈನಿಂದ ಬಂದ ಇವರೆಲ್ಲರನ್ನೂ ಉಡುಪಿಯ ವಿವಿಧ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಜೊತೆಗೆ ಈ ಎಲ್ಲರ ಗಂಟಲ ದ್ರವ ತೆಗೆದು ಪರೀಕ್ಷೆಗೆ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಐವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ.












Click it and Unblock the Notifications