ಬೆರಗುಗೊಳಿಸಿದ ಎಂಡೋ ಸಲ್ಫಾನ್ ಬಾಲೆಯ ನೃತ್ಯ

ಉಡುಪಿ, ಅಕ್ಟೋಬರ್ 23: ಈಕೆ ಮಾರಕ ಎಂಡೋ ಸಲ್ಫಾನ್ ಬಾಧಿತ ಬಾಲಕಿ. ಆದರೆ ತನ್ನ ನ್ಯೂನತೆಯನ್ನು ಬದಿಗೊತ್ತಿ ಈಕೆ ಮಾಡಿರುವ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಈಕೆ ಕಾಸರಗೋಡು ಜಿಲ್ಲೆ ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತೃಷಾಲಕ್ಷ್ಮೀ. ನಿನ್ನೆ ಮೊನ್ನೆವರೆಗೂ ಈಕೆ ಯಾರೆಂದೇ ಜನರಿಗೆ ತಿಳಿದಿರಲಿಲ್ಲ. ಆದರೆ ಈಗ ಈ ಬಾಲಕಿ ಎಲ್ಲರ ಕಣ್ಮಣಿ. ತೃಷಾಲಕ್ಷ್ಮೀ ತುಳುಗೀತೆವೊಮದಕ್ಕೆ ನೃತ್ಯ ಮಾಡಿರುವುದು ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ.

ಕಡು ಬಡತನ, ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಈಕೆಯ ಎರಡೂ ಪಾದಗಳು ಊನಗೊಂಡಿವೆ. ದಿನ ನಿತ್ಯದ ತುತ್ತಿಗೆ ಬವಣೆ ಪಡುತ್ತಿದ್ದ ಕುಟುಂಬ ಇವರದ್ದು. ಅಂಗವಿಕಲರಿಗೆ ಇರುವ ನೆರವು ಹೊರತುಪಡಿಸಿ ಸರ್ಕಾರದ ಯಾವುದೇ ಸೌಲಭ್ಯಗಳೂ ಲಭಿಸಿಲ್ಲ. ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತರ ಯಾದಿಯಲ್ಲೂ ಈಕೆಯ ಹೆಸರು ಸೇರ್ಪಡೆಯಾಗಿಲ್ಲ.

Endosulfon Affected Girl From Udupi Dance Video Is Going Viral

ಬೇರಿಕುಂಜೆ ನಿವಾಸಿ ಅಪ್ಪಣ್ಣನಾಯ್ಕ ಹಾಗೂ ಸೀತಾ ದಂಪತಿಯ ಮಗಳಾದ ಈ ಬಾಲಕಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಲೆಂದು ಶಾಲಾ ಕಲೋತ್ಸವದ ವೇದಿಕೆಯೇರಿದ್ದಳು. ಅಲ್ಲಿ ಈಕೆ ಮಾಡಿರುವ ನೃತ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಎಲ್ಲರ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+