'ಮೋದಿ' ಭಾವಚಿತ್ರವಿರುವ ಸೀರೆ ಮಾರಾಟ:ಉಡುಪಿ ಜವಳಿ ಅಂಗಡಿ ಮೇಲೆ ಚುನಾವಣಾ ಆಯೋಗ ದಾಳಿ

ಉಡುಪಿ, ಏಪ್ರಿಲ್ 03:ಉಡುಪಿಯ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಜವಳಿ ಅಂಗಡಿ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿದೆ. ನೀತಿ ಸಂಹಿತೆ ಉಲ್ಲಂಘಿಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ದಾಳಿ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ಆಯೋಗದ ಸಿಬ್ಬಂದಿ ದಾಳಿ ಸಂದರ್ಭದಲ್ಲಿ ನರೇಂದ್ರ ಮೋದಿ ಚಿತ್ರವಿರುವ ಎರಡು ಸೀರೆ ವಶಪಡಿಸಿಕೊಂಡಿದೆ. ಎಚ್ಚರಿಕೆಯ ಹೊರತಾಗಿಯೂ ಜಯಲಕ್ಷ್ಮಿ ಜವಳಿ ಅಂಗಡಿಯಲ್ಲಿ ಬಾಲಕೋಟ್ ಮತ್ತು ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದರು ಎನ್ನಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Election Commission raided Jayalakshmi textile shop in Udyavara

ಜಯಲಕ್ಷ್ಮಿ ಜವಳಿ ಅಂಗಡಿ ಉಡುಪಿಯ ಉದ್ಯಾವರದಲ್ಲಿರುವ ಜನಪ್ರಿಯ ಮಳಿಗೆಯಾಗಿದ್ದು, ಇಲ್ಲಿ ಮೋದಿ ಭಾವಚಿತ್ರವಿರುವ ಸೀರೆ ಮಾರಾಟ ಕುರಿತು ಈ ಮೊದಲೇ ಆಯೋಗಕ್ಕೆ ಮಾಹಿತಿ ದೊರೆತಿತ್ತು. ಆಗ ಆಯೋಗ ಎಚ್ಚರಿಕೆ ಕೊಟ್ಟಿದೆ. ಆದರೂ ಮಾಲೀಕರು ಸೀರೆಗಳನ್ನು ಮಾರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ (ಏಪ್ರಿಲ್.02) ದಾಳಿ ನಡೆಸಲಾಗಿದೆ.

Election Commission raided Jayalakshmi textile shop in Udyavara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+