ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Udupi: ಅಂದು ಪೇಜಾವರ ಶ್ರೀ, ಇಂದು ಪುತ್ತಿಗೆ: ಖಟ್ಟರ್ ಹಿಂದುತ್ವವಾದಿಗಳ ಕೆಂಗಣ್ಣು

ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಇದಾದ ನಂತರ ವಾದಿರಾಜ ಗುರುಗಳು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲನೆಗೊಂಡು ಬರುತ್ತಿರುವ ಅಷ್ಟಮಠಗಳ ಪೈಕಿ ಒಂದಾದ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಸುಗುಣೇಂದ್ರ ತೀರ್ಥರ ಹಳೆಯ ಚಿತ್ರವೊಂದು ಭಾರೀ ಸದ್ದನ್ನು ಮಾಡುತ್ತಿದೆ.

|
Google Oneindia Kannada News

ಪಂಕ್ತಿ ಭೋಜನ, ಮಡಿ, ಆಚಾರ ವಿಚಾರ, ಸಂಪ್ರದಾಯ ಪಾಲನೆಯ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ನಾಡಿನ ಪ್ರಮುಖ ಮಾಧ್ವಪೀಠಗಳಾದ ಉಡುಪಿ ಅಷ್ಟಮಠ ಈಗ ಮತ್ತೆ ಸುದ್ದಿಯಲ್ಲಿದೆ ಮತ್ತು ಖಟ್ಟರ್ ಹಿಂದುತ್ವವಾದಿಗಳ ಕೆಂಗಣ್ಣಿಗೂ ಗುರಿಯಾಗಿದೆ.

ಎಂಟು ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಇದಾದ ನಂತರ ವಾದಿರಾಜ ಗುರುಗಳು ಹಾಕಿಕೊಟ್ಟ ಸಂಪ್ರದಾಯವನ್ನು ಪಾಲನೆಗೊಂಡು ಬರುತ್ತಿರುವ ಅಷ್ಟಮಠಗಳ ಪೈಕಿ ಒಂದಾದ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಸುಗುಣೇಂದ್ರ ತೀರ್ಥರ ಹಳೆಯ ಚಿತ್ರವೊಂದು ಭಾರೀ ಸದ್ದನ್ನು ಮಾಡುತ್ತಿದೆ.

ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಪುತ್ತಿಗೆ ಶ್ರೀಗಳು ಪರ್ಯಾಯ ಪೂರ್ವಭಾವಿ ಸಂಚಾರವನ್ನು ನಡೆಸುತ್ತಿದ್ದಾರೆ. ಮುಂದಿನ ವರ್ಷದ (2024) ಜನವರಿ ಹದಿನೆಂಟರಂದು ಪುತ್ತಿಗೆ ಶ್ರೀಗಳು ಪರ್ಯಾಯ ಸರ್ವಜ್ಞ ಪೀಠವನ್ನು ಏರಲಿದ್ದಾರೆ.

ಕೃಷ್ಣೈಕ್ಯರಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರಿಗಳ ಪರ್ಯಾಯದ ಅವಧಿಯಲ್ಲೂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ವಿಚಾರ ನಾಡಿನೆಲ್ಲಡೆ ಚರ್ಚೆಯ ವಿಷಯವಾಗಿತ್ತು. ಈಗ, ಅಂತದ್ದೇ ವಿಚಾರವೊಂದು ಪುತ್ತಿಗೆ ಶ್ರೀಗಳ ಸುತ್ತ ಗಿರಿಗಿಟ್ಲೆ ಹೊಡೆಯಲಾರಂಭಿಸಿದೆ.

 ರಂಜಾನ್ ಉಪವಾಸದ ವೇಳೆ ಇಫ್ತಾರ್ ಕೂಟಕ್ಕೆ ಅನುಮತಿ

ರಂಜಾನ್ ಉಪವಾಸದ ವೇಳೆ ಇಫ್ತಾರ್ ಕೂಟಕ್ಕೆ ಅನುಮತಿ

ಪೇಜಾವರ ಶ್ರೀಗಳ ಪಂಚಮ ಪರ್ಯಾಯದ ವೇಳೆ ಕೃಷ್ಣಮಠದ ಆವರಣದಲ್ಲಿ ರಂಜಾನ್ ಉಪವಾಸದ ವೇಳೆ ಇಫ್ತಾರ್ ಕೂಟಕ್ಕೆ ಅನುಮತಿಯನ್ನು ನೀಡಿದ್ದರು. ಖುದ್ದು ಶ್ರೀಗಳೇ ಮುಸ್ಲಿಂ ಬಾಂಧವರ ಬಳಿ ತೆರಳಿ ಕರ್ಜೂರವನ್ನು ನೀಡಿ ಸತ್ಕರಿಸಿದ್ದರು. ಇದು ದೇಶಾದಾದ್ಯಂತ ಭಾರೀ ಚರ್ಚೆ, ವಾದವಿವಾದಕ್ಕೆ ಕಾರಣವಾಗಿತ್ತು. ಬಲಪಂಥೀಯ ಸಂಘಟನೆಗಳು ಶ್ರೀಗಳ ವಿರುದ್ದ ಭಾರೀ ಆಕ್ರೋಶವನ್ನು ಹೊರಹಾಕಿದ್ದವು. ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಮುಖಂಡರು ಖುದ್ದು ಪೇಜಾವರ ಮಠಕ್ಕೆ ತೆರಳಿ ಶ್ರೀಗಳ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

 ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಶ್ರೀ

ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಶ್ರೀ

ಹಿಂದೂ-ಮುಸ್ಲಿಂ ಭಾವೈಕ್ಯತೆಯ ವಿಚಾರದಲ್ಲಿ ಪೇಜಾವರ ಶ್ರೀಗಳ ನಡೆ ವ್ಯಾಪಕ ಪ್ರಶಂಸೆಗೂ ಪಾತ್ರವಾಗಿತ್ತು. ಈಗ, ಮುಂದಿನ ವರ್ಷ ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಶ್ರೀಗಳ ವಿರುದ್ದ ಎಂಟು ವರ್ಷದ ಹಿಂದೆ ನಡೆದ ಘಟನೆಯೊಂದು ಬಲಪಂಥೀಯ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದ ಬಗ್ಗೆ ಪುತ್ತಿಗೆ ಮಠ ಸ್ಪಷ್ಟನೆಯನ್ನು ನೀಡಿದೆ. ಇದೊಂದು ಅನಗತ್ಯ ವಿವಾದ, ವಿಕೃತ ಮನಸ್ಸಿನವರ ಕೆಲಸ ಎಂದು ಮಠ ಹೇಳಿದ್ದರೂ, ಶ್ರೀರಾಮಸೇನೆಯ ಮುಖಂಡರೂ ಸೇರಿದಂತೆ ಹಲವು ಮುಖಂಡರು ವೈರಲ್ ಆಗಿರುವ ಫೋಟೋದ ಬಗ್ಗೆ ಕಿಡಿಕಾರಿದ್ದಾರೆ.

 'ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ'ಎನ್ನುವ ಕನ್ನಡ ಪುಸ್ತಕ

'ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ'ಎನ್ನುವ ಕನ್ನಡ ಪುಸ್ತಕ

ಹತ್ತು ವರ್ಷಗಳ ಹಿಂದೆ ಉಡುಪಿಯ ಪುರಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ'ಎನ್ನುವ ಕನ್ನಡ ಪುಸ್ತಕವನ್ನು ಪುತ್ತಿಗೆ ಶ್ರೀಗಳು ಬಿಡುಗಡೆ ಮಾಡಿದ್ದರು. ಶ್ರೀಗಳು ಬಿಡುಗಡೆ ಮಾಡಿದ್ದ ಅಂದಿನ ಫೋಟೋ ಈಗ ಮುನ್ನಲೆಗೆ ಬಂದಿರುವುದೇ ಈ ಅನಗತ್ಯ ವಿವಾದಕ್ಕೆ ಕಾರಣವಾಗಿದೆ. ಶಾಂತಿ ಪ್ರಕಾಶನ ಹೊರ ತಂದಿರುವ ಈ ಪುಸ್ತಕದ ಲೇಖಕರು ಸ್ವಾಮೀ ಲಕ್ಷ್ಮೀ ಶಂಕರಾಚಾರ್ಯರು. 2015ರಲ್ಲಿ ಈ ಪುಸ್ತಕವು ಬಿಡುಗಡೆಯಾಗಿತ್ತು ಮತ್ತು ಐದು ಎಡಿಷನ್ ನಲ್ಲಿ ಮುದ್ರಣಗೊಂಡಿತ್ತು.

 ಪುತ್ತಿಗೆ ಮಠದಿಂದ ಸ್ಪಷ್ಟನೆ

ಪುತ್ತಿಗೆ ಮಠದಿಂದ ಸ್ಪಷ್ಟನೆ

"ಸನಾತನ ಧರ್ಮದ ಮೊದಲ ಆದ್ಯತೆ ಶಾಂತಿ ಸೌಹಾರ್ದತೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲ ವಿಕೃತ ಮನಸ್ಸಿನವರು ಹೀಗೆ ಮಾಡಿದ್ದಾರೆ. 'ಇಸ್ಲಾಂ ಆತಂಕ್ ಯಾ ಆದರ್ಶ್' ಎನ್ನುವ ಪುಸ್ತಕವನ್ನು ಕನ್ನಡಕ್ಕೆ ಅದ್ವೈತ ಆಚಾರ್ಯರು ಕನ್ನಡಕ್ಕೆ ಅನುವಾದವನ್ನು ಮಾಡಿದ್ದರು. ಶ್ರೀಗಳು ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ರಿಲಿಜಸ್ ಫಾರ್ ಪೀಸ್ ನ ಅಂತರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಶ್ರೀಗಳು ಹಿಂದಿನಿಂದಲೂ ಭಯೋತ್ಪಾದನೆಯನ್ನು ಖಂಡಿಸುತ್ತಾ ಬಂದಿದ್ದಾರೆ. ಈಗಿನ ವಿದ್ಯಮಾನ ಇದೊಂದು ಷಡ್ಯಂತ್ರ" ಎಂದು ಮಠದ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ.

 ಶ್ರೀಗಳೇ.. ಯಾವ ಪುಸ್ತಕವನ್ನು ಬಿಡುಗಡೆ ಮಾಡಿದ್ದೀರಿ ಶ್ರೀಗಳೇ? ಮುತಾಲಿಕ್

ಶ್ರೀಗಳೇ.. ಯಾವ ಪುಸ್ತಕವನ್ನು ಬಿಡುಗಡೆ ಮಾಡಿದ್ದೀರಿ ಶ್ರೀಗಳೇ? ಮುತಾಲಿಕ್

ಈ ಸಂಬಂಧ ಮಾತನಾಡಿದ ಪ್ರಮೋದ್ ಮುತಾಲಿಕ್, "ಶ್ರೀಗಳೇ.. ಯಾವ ಪುಸ್ತಕವನ್ನು ಬಿಡುಗಡೆ ಮಾಡಿದ್ದೀರಿ ಎನ್ನುವ ಅರಿವು ನಿಮಗಿದೆಯೇ? ನೀವು ಹಿಂದೂ ಧರ್ಮದ ಪ್ರತಿಪಾದಕರೇ? ನಿಮ್ಮಂತವರ ಇಂತಹ ಪ್ರವೃತ್ತಿಯಿಂದಲೇ ಇಸ್ಲಾಂ ಬೆಳೆಯುತ್ತಿರುವುದು, ಹಿಂದೂ ಧರ್ಮ ನಾಶವಾಗುತ್ತಿರುವುದು. ಇಸ್ಲಾಂ ಇಂದು ವಿಶ್ವದಲ್ಲಿ ನಡೆದುಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನೀವು ಈ ಕೂಡಲೇ ಕ್ಷಮೆಯನ್ನು ಯಾಚಿಸಬೇಕು, ಇಲ್ಲದಿದ್ದರೆ ಮಠದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ"ಎಂದು ಮುತಾಲಿಕ್ ಎಚ್ಚರಿಕೆಯನ್ನು ನೀಡಿದ್ದಾರೆ

English summary
Eight Year Old Udupi Puttige Mutt Seer Photo Viral: Pro-Hindu Organization Angry. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X