ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರಮೋದ್ ಮುತಾಲಿಕ್ ವಿರೋಧ
ಉಡುಪಿ, ಫೆಬ್ರವರಿ 10: ಪ್ರೇಮಿಗಳ ದಿನಕ್ಕೆ (ಫೆಬ್ರವರಿ 14) ದಿನಗಣನೆ ಆರಂಭವಾಗಿತ್ತಿದೆ. ಈ ನಡುವೆ ವ್ಯಾಲೆಂಟೈನ್ಸ್ ಡೇ ಆಚರಿಸಬೇಡಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ರಿಶ್ಚಿಯನ್ನರ 'ಡೇ' ಸಂಸ್ಕೃತಿ ನಮಗೆ ಬೇಡ. ಪ್ರೇಮಿಗಳ ದಿನಾಚರಣೆ ಬದಲು ತಂದೆ ತಾಯಿಯನ್ನು ಪೂಜಿಸಿ ಎಂದಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ನೀಡ್ತೇವೆ. ವ್ಯಾಲೆಂಡೈನ್ಸ್ ಡೇ ಗೆ ಅವಕಾಶ ಬೇಡ ಎಂದು ಮನವಿ ಮಾಡ್ತೇವೆ.ಪ್ರೇಮಿಗಳ ದಿನದ ಬಗ್ಗೆ ದುರ್ಗಾಸೇನೆ ಮೂಲಕ ಜಾಗೃತಿ ಮೂಡಿಸ್ತೇವೆ ಎಂದು ತಿಳಿಸಿದ್ದಾರೆ.

ಪ್ರೇಮಿಗಳ ದಿನಾಚರಣೆಯಂದು ಪೊಲೀಸರೊಂದಿಗೆ ಕೈ ಜೋಡಿಸ್ತೇವೆ. ಪಾರ್ಕ್, ರಸ್ತೆಗಳಲ್ಲಿ ಯಾವುದೇ ಕುಕೃತ್ಯ ಕಂಡರೆ ಪೊಲೀಸರಿಗೆ ಮಾಹಿತಿ ನೀಡ್ತೇವೆ. ಅಸಹ್ಯ, ಅಶ್ಲೀಲ, ಅಸಭ್ಯತೆ ಕಂಡರೆ ಪೊಲೀಸರಿಗೆ ಮಾಹಿತಿ ನೀಡ್ತೇವೆ. ಆದರೆ ಕಾನೂನು ಕೈಗೆ ತಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications