DK Shivakumar: ಡಿಕೆ ಶಿವಕುಮಾರ್ ಇಂದು ಉಡುಪಿ ಜಿಲ್ಲಾ ಪ್ರವಾಸ

ಡಿಕೆ ಶಿವಕುಮಾರ್ ರಾಜ್ಯ ರಾಜಕೀಯದಲ್ಲಿ ಸೆಂಟ್ರ ಅಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಅವರ ನುಡಿ ಅವರ ನಡೆ ಅವರ ಹಾವ ಭಾವ ಎಲ್ಲವೂ ಕುತೂಹಲಕ್ಕೆ ಕಾರಣವಾಗಿದೆ. ಸಾಫ್ಟ್ ಹಿಂದುತ್ವದ ಜಪದ ಬೆನ್ನಲ್ಲೆ ಈಗ ಮತ್ತೊಮ್ಮೆ ತಮ್ಮ ದೇಗುಲ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.

'ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ' ಎಂದು ಹೇಳಿದ ಡಿಸಿಎಂ ಡಿಕೆ ಶಿವಕುಮಾರ್ ಇಂದು ಉಡುಪಿ ಕಾಪು ಮಾರಿಗುಡಿ ಗದ್ದುಗೆ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಬೆಳಗ್ಗೆ 11:30ಕ್ಕೆ ಮಾರಿಗುಡಿ ಕಾರ್ಯಕ್ರಮ ನಡೆಯಲಿದೆ. ಮಹಾ ಕುಂಭ ಮೇಳ, ಟಿ, ನರಸೀಪುರ ಕುಂಭಮೇಳ, ಈಶಾ ಶಿವರಾತ್ರಿ ಬಳಿಕ ಮಾರುಗುಡಿಗೆ ಡಿಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ.

DK Shivakumar Udupi district tour today Possibility of giving message of Hindutva

ಡಿಕೆ ಶಿವಕುಮಾರ್ ಅವರ ಸಾಫ್ಟ್ ಹಿಂದುತ್ವದ ಚರ್ಚೆ ನಡುವೆಯೇ ಟೆಂಪಲ್ ರನ್ ಶುರು ಮಾಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಡಿಕೆ ಶಿವಕುಮಾರ್ ನಡೆ ಸ್ವಪಕ್ಷ, ವಿಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೇಳಿ ಕೇಳಿ ಡಿಕೆ ಶಿವಕುಮಾರ್ ಒಬ್ಬ ದೈವ ಭಕ್ತರಾಗಿದ್ದಾರೆ. ಹಲವಾರು ವರ್ಷಗಳಿಂದಲೂ ಕೂಡ ದೇವಸ್ಥಾನಗಳಿಗೆ ಭೇಟಿ ನೀಡುವುದು, ಪೂಜೆ ಸಲ್ಲಿಸುವುದು ಹಾಗೂ ಯಾಗಗಳನ್ನು ನಡೆಸಿಕೊಂಡು ಬಂದವರು.

ಆದರೀಗ ಅಮಿತ್ ಶಾ ಅವರೊಂದಿಗೆ ಅವರು ವೇದಿಕೆ ಹಂಚಿಕೊಂಡ ಬಳಿಕ ಅವರು ಹಿಂದೂ ಆಗಿ ಹುಟ್ಟಿ ಹಿಂದೂ ಆಗಿ ಸಾಯುತ್ತೇನೆ ಎಂದು ಹೇಳಿಕೆ ನೀಡಿದ ಬಳಿಕ ಅವರು ಎಲ್ಲಿಗೇ ಹೋದರೂ ಕೂಡ ಅಲ್ಲಿ ಒಂದು ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ. ಅಥವಾ ಯಾವುದೋ ಒಂದು ಬೆಳವಣಿಗೆ ಆಗುತ್ತವೆ ಅನ್ನೋ ನಿರೀಕ್ಷೆ ಹುಟ್ಟಿಸುತ್ತಿದ್ದಾರೆ.

ಇಂದು ಡಿಕೆ ಶಿವಕುಮಾರ್ ಅವರು ಕರಾವಳಿ ಭಾಗಗಕ್ಕೆ ಭೇಟಿ ನೀಡುತ್ತಿದ್ದಾರೆ. ಉಡುಪಿಯಲ್ಲಿ ನಾಲ್ಕು ಕಾರ್ಯಕ್ರಮ ಆಯ್ಕೆ ಮಾಡಿಕೊಂಡಿದ್ದಾರೆ. ಉಡುಪಿಯ ಹೊಸ ಮಾರಿ ಗುಡಿ ದೇವಸ್ಥಾನ ಸಂಪೂರ್ಣವಾಗಿ ಜೀರ್ಣೋದ್ಧಾರ ಆಗಿದೆ. 30 ಕೋಟಿ ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಇದರ ಪ್ರತಿಷ್ಠಾ ಮಹೋತ್ಸವದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.

ನಂತರ ಎರಡು ಪಕ್ಷದ ಕಾರ್ಯಕ್ರಮಗಳು ಇವೆ. ಈ ಕಾರ್ಯಕ್ರಮಗಳಲ್ಲಿ ಡಿಕೆ ಶಿವಕುಮಾರ್ ಭಾಗಿಯಾದ ನಂತರ ಮತ್ತೆ ಧಾರ್ಮಿಕ ಕಾರ್ಯಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಹೀಗೆ ದೊಡ್ಡ ಧಾರ್ಮಿಕ ಕಾರ್ಯಕ್ರಮಕ್ಕೆ ಬರುತ್ತಿರುವ ಡಿಕೆ ಶಿವಕುಮಾರ್ ಒಂದು ದೊಡ್ಡ ಸಂದೇಶವನ್ನು ರವಾನಿಸಲಿದ್ದಾರೆ ಎನ್ನಲಾಗುತ್ತಿದೆ.

ಇದೇ ವೇಳೆ ಮಾಜಿ ಸಚಿವ ಸುನೀಲ್ ಕುಮಾರ್ ಅವರು ಒಂದು ಹೇಳಿಕೆಯನ್ನು ನೀಡಿದ್ದರು. ಗಂಡು ಮೆಟ್ಟಿದ ನಾಡು ಹಿಂದುತ್ವದ ಜಿಲ್ಲೆಗೆ ನೀವು ಬರುತ್ತೀದ್ದೀರಾ ಹಾಗಾಗಿ ಅಭಿವೃದ್ಧಿಯನ್ನೂ ಹೊತ್ತು ತನ್ನಿ ಎಂದು ಸವಾಲು ಹಾಕಿದ್ದಾರೆ. ಈ ವಿಚಾರ ಸಂಬಂಧ ಪಟ್ಟಂತೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+