ಉಡುಪಿ: ಶೀರೂರು ಮೂಲಮಠದಲ್ಲಿದ್ದದ್ದು ವಿಷದ ಬಾಟಲಿಯೇ ?
ಉಡುಪಿ, ಜುಲೈ.22: ಶೀರೂರು ಸ್ವಾಮೀಜಿ ಅನುಮಾನಾಸ್ಪದ ಸಾವು ಪ್ರಕರಣ ದಿನೇ ದಿನೇ ತಿರುವು ಪಡೆದುಕೊಳ್ಳುತ್ತಲೇ ಇದೆ. ಶಿರೂರು ಮೂಲ ಮಠದಲ್ಲಿ ಸಿಕ್ಕ ಬಾಟಲಿಯೊಂದು ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಶಿರೂರು ಮೂಲ ಮಠದಲ್ಲಿ ಸಿಕ್ಕ ಈ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿಗಳು ಈಗ ಹರಿದಾಡತೊಡಗಿವೆ.
ಈ ಬಾಟಲಿಯಲ್ಲಿದ್ದ ದ್ರವವನ್ನು ಗೋಡಂಬಿ ಜ್ಯೂಸ್ ಎಂದು ಸ್ವಾಮೀಜಿಯ ಆಪ್ತ ಮಹಿಳೆ ಕುಡಿಸಿದ್ದಾಳೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. Morinzhi ಎಂಬ ಹೆಸರಿನ ಡ್ರಿಂಕ್ ಬಾಟಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಇದು ಆರೋಗ್ಯ ವೃದ್ದಿ ಪಾನೀಯದ ಬಾಟಲು ಎನ್ನಲಾಗ್ತಾ ಇದೆ.
ಇದನ್ನೇ ಗೋಡಂಬಿ ಜ್ಯೂಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಲಾಗುತ್ತಿದೆ. ಆದ್ರೆ ವಾಸ್ತವದಲ್ಲಿ ಆ ಹೆಸರಿನ ಶಕ್ತಿವರ್ಧಕ ಪಾನೀಯವೂ ಇವೆ. ಸ್ವಾಮೀಜಿಯೇ ತಮ್ಮ ಆಪ್ತ ಮಹಿಳೆಯಿಂದ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ದರೇ? ಆಕೆಯೇ ತಂದು ಕುಡಿಸಿದರೇ ?ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇನ್ನು ಶೀರೂರು ಸ್ವಾಮೀಜಿ ಆಪ್ತರು ನೀಡಿರುವ ಮಾಹಿತಿ ಪ್ರಕಾರ ,ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೂ ಈ ಮಹಿಳೆ ಬಂದಿರಲಿಲ್ಲ. ಅನಾರೋಗ್ಯಕ್ಕೀಡಾದಾಗಲೂ ಆಸ್ಪತ್ರೆಗೆ ಬಂದಿರಲಿಲ್ಲ. ಹಾಗಾದ್ರೆ ಸ್ವಾಮೀಜಿ ಜೊತೆ ಕೊನೆ ಗಳಿಗೆಯಲ್ಲಿ ಆಪ್ತೆ ಎನಿಸಿಕೊಂಡಿದ್ದ ಈಕೆ ಮುನಿಸಿಕೊಂಡಿರಬಹುದೇ ಎಂಬ ಸಂಶಯವೂ ಕಾಡುತ್ತಿದೆ.












Click it and Unblock the Notifications