ದನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಕೊಲೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಉಡುಪಿ, ಆಗಸ್ಟ್ 18: ಟೆಂಪೊವೊಂದರಲ್ಲಿ ತಡ ರಾತ್ರಿ ಎರಡು ದನವನ್ನು ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ ಪೂಜಾರಿಯನ್ನು ಬಜರಂಗ ದಳ ಹಾಗೂ ವಿಎಚ್‌ಪಿ ಕಾರ್ಯಕರ್ತರು ಹಲ್ಲೆ ಮಾಡಿ, ಕೊಲೆಗೈದಿದ್ದಾರೆ.

ಉಡುಪಿಯ ಟೆಂಪೊವೊಂದರಲ್ಲಿ ಎರಡು ದನವನ್ನು ಸಂತೆಕಟ್ಟಿ ಬಳಿ ತಡ ರಾತ್ರಿ ಬಿಜೆಪಿ ಕಾರ್ಯಕರ್ತರಾದ ಪ್ರವೀಣ ಪೂಜಾರಿ (28), ಆತನ ಸ್ನೇಹಿತ ಅಕ್ಷಯ್ ದೇವಾಡಿಗ (20) ಸಾಗಿಸುತ್ತಿದ್ದರು. ಅವರ ಮೇಲೆ ಬಜರಂಗ ದಳ ಮತ್ತು ವಿಎಚ್ ಪಿ ಕಾರ್ಯಕರ್ತರು ಎನ್ನಲಾದ ನಲವತ್ತರಷ್ಟಿದ್ದ ಯುವಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

BJP party worker murdered while cattle trafficking

ಪ್ರವೀಣ್ ಸಾವಪ್ಪಿದ್ದು, ಅಕ್ಷಯ್ ನನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೆಟ್ರೋಲ್ ಬಂಕ್ ಹೊಂದಿರುವ ವಿಎಚ್‌ಪಿ ಸದಸ್ಯ ಅರವಿಂದ ಸೇರೆಗಾರ ಎಂಬಾತ ತನ್ನ ಸಹಚರ ಪ್ರಕಾಶ್ ಎಂಬಾತನೊಂದಿಗೆ ಸೇರಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹೆಬ್ರಿ ಪೊಲೀಸರು ಪ್ರಕರಣದ ಸಂಬಂಧ 17 ಮಂದಿಯನ್ನು ಬಂಧಿಸಿದ್ದು, ಉಳಿದವರಿಗೆ ಶೋಧ ನಡೆದಿದೆ. ಪ್ರಕರಣದ ತನಿಖೆಯನ್ನು ಬ್ರಹ್ಮಾವರ ಪೊಲೀಸರು ಮುಂದುವರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP party worker Praveen pujari murdered by Bajarang dal and VHP members in Udupi. Praveen pujari engagaed in cattle trafficking. VHP member Aravinda seregara and others attacked and murdered Praveen.
Please Wait while comments are loading...