ಉಡುಪಿಯಲ್ಲಿ ಮತ್ತೆ 170 ಮಂದಿಗೆ ಕೊರೊನಾ ಸೋಂಕು, ಇಬ್ಬರು ಬಲಿ
ಉಡುಪಿ, ಜುಲೈ 26: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕೂಡಾ ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟಿದ್ದು, ಈ ಮಹಾಮಾರಿಗೆ ಇಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನ 170 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
Recommended Video
Sonu Sood gifts tractor for Andhra Pradesh farmer | Oneindia Kannada
ಉಡುಪಿ-87, ಕುಂದಾಪುರ-31, ಕಾರ್ಕಳ-52 ಮಂದಿಗೆ ಸೋಂಕು ತಗುಲಿದ್ದು, ಸದ್ಯ ಜಿಲ್ಲೆಯಲ್ಲಿ 1241 ಸಕ್ರಿಯ ಪ್ರಕರಣಗಳು ಇವೆ. ಇವತ್ತು ಇಬ್ಬರು ಹಿರಿಯ ನಾಗರೀಕರು ಬಲಿಯಾಗಿದ್ದಾರೆ. ಈ ಪೈಕಿ ಒಬ್ಬರು ಉಡುಪಿ ನಗರದವರಾದರೆ ಮತ್ತೊಬ್ಬರು ಬೈಂದೂರಿನವರು.

ಇವರಿಬ್ಬರು ವಿವಿಧ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಮೃತಪಟ್ಟವರಲ್ಲಿ ಒಬ್ಬರು ಮಹಿಳೆಯಾದರೆ, ಮತ್ತೊಬ್ಪರು ಪುರುಷರು. ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರಿಗೆ ಕೊರೊನಾ ಸೋಂಕು ದೃಢಗೊಂಡಿತ್ತು. ಕೋವಿಡ್ ಮಾರ್ಗಸೂಚಿಯಂತೆ ಇವರಿಬ್ಬರ ಅಂತ್ಯಕ್ರಿಯೆಯನ್ನು ಇಂದು ನಡೆಸಲಾಯಿತು.












Click it and Unblock the Notifications