Divya Vasantha Arrest: ಕೇರಳದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯ ವಸಂತ ಬಂಧನ

ಬೆಂಗಳೂರು, ಜುಲೈ. 11: ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ, 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋ ಸ್ಪರ್ಧಿ ದಿವ್ಯಾ ವಸಂತ ಅವರನ್ನು ಜುಲೈ 11ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನೆರೆ ರಾಜ್ಯ ಕೇರಳದಲ್ಲಿ ಇದ್ದ ಅವರನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದು, ನಗರಕ್ಕೆ ಕರೆ ತಂದಿದ್ದಾರೆ.

ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ. 'ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ' ಎಂದು ನಟಿಯೊಬ್ಬರ ಖಾಸಗಿ ವಿಷಯವನ್ನು ಸುದ್ದಿ ಮಾಡಿ ತಾವೇ ಸುದ್ದಿಯಾಗಿದ್ದ ದಿವ್ಯ ವಸಂತ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

TV Anchor Divya Vasantha arrested by Bengaluru police in Kerala

ಖುಷಿ ಸುದ್ದಿಕೊಟ್ಟು ವೈರಲ್ ಸುದ್ದಿಯಾದ ದಿವ್ಯ ವಸಂತ

ಇಂದಿರಾನಗರದ ಬಳಿಯ ಸ್ಪಾ ಮ್ಯಾನೇಜರ್‌ಗೆ ಬೆದರಿಕೆ ಹಾಕಿ ಸುಲಿಗೆ ಯತ್ನ ನಡೆಸಿದ ಆರೋಪದಲ್ಲಿ ಆ್ಯಂಕರ್ ದಿವ್ಯಾ ವಸಂತ ಅವರ ತಮ್ಮನನ್ನು ಬಂಧಿಸಿದ್ದ ಬೆನ್ನಲೆ ನೆರೆಯ ತಮಿಳುನಾಡಿಗೆ ಪರಾರಿಯಾಗಿದ್ದರು ಬಳಿಕ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎಂಬ ಮಾಹಿತಿಯಿದೆ. ಈಗ ಪೊಲೀಸರು ಆರೋಪಿಯನ್ನು ಕೇರಳದಲ್ಲಿಯೇ ಬಂಧಿಸಿದ್ದಾರೆ.

ಇಂದಿರಾನಗರ ಠಾಣೆ ಪೊಲೀಸರು ರಾಜ್ ನ್ಯೂಸ್ ಕಾರ್ಯನಿರ್ವಾಹಕ ರಾಜಾನುಕುಂಟೆ ವೆಂಕಟೇಶ್ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇವರೆಲ್ಲಾ ಸ್ಪಾ ಮ್ಯಾನೇಜರ್‌ನಿಂದ 15 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಈಗ ಕೇರಳದಲ್ಲಿ ಗಿಚ್ಚಿ ಗಿಲಿಗಿಲಿ ಸ್ಪರ್ಧಿಯ ಬಂಧನವಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ವೆಂಕಟೇಶ್ ಮತ್ತು ದಿವ್ಯ ವಸಂತ ಅವರು 'ಸೈ ರಿಸರ್ಚ್ ಟೀಮ್' ಹೆಸರಿನ ವಾಟ್ಸಾಪ್ ಗುಂಪನ್ನು ರಚಿಸಿಕೊಂಡು ಇದರ ಮೂಲಕ ಪ್ಲಾನಿಂಗ್ ಮಾಡುತ್ತಿದ್ದರು. ಸದ್ಯ ಕೇರಳದಿಂದ ದಿವ್ಯ ವಸಂತ ಅವರನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+