Get Updates
Get notified of breaking news, exclusive insights, and must-see stories!

ಸಿದ್ದಗಂಗಾಶ್ರೀಗಳ ನಿಧನವಾರ್ತೆ ತಡವಾಗಿ ಘೋಷಿಸಿದ ಕಾರಣ ಬಹಿರಂಗ!

Recommended Video

      Siddaganga Swamiji : ಡಾ ಶಿವಕುಮಾರ ಸ್ವಾಮೀಜಿಗಳ ನಿಧನದ ಸುದ್ದಿ ವಿಳಂಬವಾದ ಹಿನ್ನೆಲೆ ಕಾರಣ ಬಹಿರಂಗ

      ಬೆಂಗಳೂರು, ಜನವರಿ 21 : ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಸಮಯ ಹಾಗೂ ನಿಧನದ ವಾರ್ತೆಯನ್ನು ತಡವಾಗಿ ಘೋಷಿಸಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಇದೀಗ ನಿಧನ ವಾರ್ತೆ ತಡವಾಗಿ ಪ್ರಕಟಿಸಿದ ಕಾರಣ ಬಹಿರಂಗವಾಗಿದೆ. ಇದು ಶಿವಕುಮಾರ ಸ್ವಾಮೀಜಿಗಳ ಕೊನೆಆಸೆ ಕೂಡಾ ಆಗಿತ್ತು ಎಂಬುದು ಹುಬ್ಬೇರಿಸುವ ವಿಚಾರ.

      ಸೋಮವಾರ ಜನವರಿ 21ರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಮಧ್ಯಾಹ್ನ 1.56ಕ್ಕೆ ಅಧಿಕೃತವಾಗಿ ಘೋಷಿಸಲಾಗಿದೆ. ಅದರೆ, ನಿಧನ ವಾರ್ತೆಯನ್ನು ವಿಳಂಬವಾಗಿ ಪ್ರಕಟಿಸಲು ಶ್ರೀಗಳ ಅಂತಿಮ ಇಚ್ಛೆಯೇ ಕಾರಣವೆಂದು ಹೇಳಲಾಗಿದೆ.

      ಮಂಗಳವಾರ ಮಧ್ಯಾಹ್ನ 3 ಗಂಟೆ ತನಕ ಸಾರ್ವಜನಿಕ ದರ್ಶನಕ್ಕಾಗಿ ಸಿದ್ದಗಂಗಾ ಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರದಂದೇ ವಿರಕ್ತ ಮಠದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ.

      Why Siddaganga mutt delayed announcing Shivakumara swami death news

      ಅನ್ನದಾಸೋಹಕ್ಕೆ ಅಡ್ಡಿಯಾಗಬಾರದು: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಲವು ದಶಕಗಳಿಂದ ನಿತ್ಯ ದಾಸೋಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಊಟದ ಸಮಯಕ್ಕೂ ಮುನ್ನ ಶ್ರೀಗಳ ನಿಧನದ ಸುದ್ದಿ ತಿಳಿದು ಬಂದಿದೆ.

      ಆದರೆ, ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಮಠಕ್ಕೆ ಹಸಿದು ಬಂದವರಿಗೆ ಮೊದಲಿಗೆ ಅನ್ನವನ್ನು ನೀಡಿ, ಅನ್ನ ದಾಸೋಹ ನೆರವೇರಿದ ಬಳಿಕವೇ ಲಿಂಗೈಕ್ಯರಾದ ಸುದ್ದಿಯನ್ನು ಬಹಿರಂಗಪಡಿಸಲಾಗಿದೆ. ಈ ಬಗ್ಗೆ ಶ್ರೀಗಳು ಮುಂಚಿತವಾಗಿ ಕಿರಿಯ ಸ್ವಾಮೀಜಿಗಳಾದ ಸಿದ್ದಲಿಂಗ ಸ್ವಾಮೀಜಿಗಳಿಗೆ ತಿಳಿಸಿದ್ದರಂತೆ, ಮಠಕ್ಕೆ ಬರುವ ಭಕ್ತರು ಹಸಿದುಕೊಂಡಿರಬಾರದು, ತಾವು ಲಿಂಗೈಕ್ಯರಾದರೂ ನಿತ್ಯ ಕಾಯಕಕ್ಕೆ ಅಡ್ಡಿಯುಂಟಾಗಬಾರದು ಎಂದು ಸೂಚನೆ ನೀಡಿದ್ದರಂತೆ. ಹೀಗಾಗಿ, ಶ್ರೀಗಳ ನಿಧನದ ವಾರ್ತೆಯನ್ನು ತಡವಾಗಿ ಘೋಷಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+