ತುಮಕೂರು ಎಚ್‌ಎಂಟಿ ಘಟಕಕ್ಕೆ ಮರುಜೀವ?

ಬೆಂಗಳೂರು, ಅ.28 : ನಷ್ಟದ ಹಾದಿಯಲ್ಲಿ ಸಾಗುತ್ತಿರುವ ಎಚ್ಎಂಟಿ ವಾಚ್ ಕಂಪನಿಗೆ ಕೇಂದ್ರ ಸರ್ಕಾರ ಬೀಗ ಜಡಿಯಲು ಮುಂದಾಗಿದೆ. ಈ ಸುದ್ದಿ ಕೇಳಿದ ಜನರು ವಾಚ್ ಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಒಂದು ಘಟಕವನ್ನು ಉಳಿಸಿಕೊಳ್ಳಲು ಚಿಂತನೆ ನಡೆಸಿದೆ. ಇದರಿಂದಾಗಿ ತುಮಕೂರು ಘಟಕಕ್ಕೆ ಜೀವದಾನ ಸಿಗುವ ಸಾಧ್ಯತೆ ಇದೆ.

ಎಚ್‌ಎಂಟಿ ಕಂಪನಿ ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರ ಹೊರಬಿದ್ದ ಬಳಿಕ ಜನರು ವಾಚ್‌ಗಳನ್ನು ಕೊಂಡು, ಸಂಗ್ರಹಿಸಿಟ್ಟುಕೊಳ್ಳಲು ಮುಂದಾದರು. ಇದರಿಂದ ದೇಶಾದ್ಯಂತ ಎಚ್‌ಎಂಟಿ ವಾಚ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಕಂಪನಿಯ ಎಲ್ಲಾ ಘಕಟಗಳನ್ನು ಮುಚ್ಚುವ ನಿರ್ಧಾರವನ್ನು ಪುನರ್‌ ಪರಿಶೀಲಿಸಲು ಮುಂದಾಗಿದೆ.

HMT Watches

1961ರಲ್ಲಿ ಜಪಾನ್‌ನ ಸಿಟಿಜನ್‌ ವಾಚ್‌ ಕಂಪನಿಯ ಸಹಯೋಗದಲ್ಲಿ ಆರಂಭವಾದ ಎಚ್‌ಎಂಟಿ ವಾಚಸ್‌ ಕಂಪನಿಯು ದೇಶದಲ್ಲಿ ಒಟ್ಟು ಆರು ಉತ್ಪಾದನಾ ಘಟಕಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ತುಮಕೂರಿನಲ್ಲಿ ಉತ್ಪಾದನಾ ಘಟಕಗಳಿವೆ. [ಹೆಮ್ಮೆಯ ಎಚ್ಎಂಟಿ ಕಂಪನಿಗೆ ಬೀಳಲಿದೆ ಬೀಗ]

ಸದ್ಯ ವಾಚ್‌ಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತುಮಕೂರು ಘಟಕವನ್ನು ಉಳಿಸಿಕೊಂಡು ಉಳಿದ ಘಟಕಗಳನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸಿದೆ. ತುಮಕೂರು ಘಟಕ ವಾಚ್‌ಗೆ ದೇಶದಲ್ಲಿ ಇರುವ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮುಂದುವರೆಸಲಿದೆ.

ತುಮಕೂರು ಘಟಕವನ್ನು ಉಳಿಸಿಕೊಂಡು ಅದನ್ನು ಎಚ್‌ಎಂಟಿಯ ಬೇರೆ ಸಮೂಹದೊಂದಿಗೆ ವಿಲೀನಗೊಳಿಸಲು ಕೈಗಾರಿಕಾ ಸಚಿವಾಲಯ ನಿರ್ಧರಿಸಿದೆ. ಈ ಕುರಿತ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇಡಲು ಸಚಿವಾಲಯ ತೀರ್ಮಾನ ಕೈಗೊಂಡಿದೆ.

2000ದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಾ ಬಂದ ಎಚ್‌ಎಂಟಿ ನೌಕರರಿಗೂ ಸಂಬಳ ನೀಡಲು ಕಷ್ಟಪಡುತ್ತಿತ್ತು. ಆದ್ದರಿಂದ ಸಾರ್ವಜನಿಕ ಉದ್ದಿಮೆಗಳ ಪುನಾರಚನಾ ಮಂಡಳಿಯು ಎಚ್‌ಎಂಟಿ ವಾಚಸ್‌ ಕಂಪನಿ ಮುಚ್ಚುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಅಂದಹಾಗೆ ತುಮಕೂರು ಘಟಕದಲ್ಲಿ 60 ನೌಕರರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+