Tumkur-Davanagere Train: ತುಮಕೂರು-ದಾವಣಗೆರೆ ರೈಲು ಮಾರ್ಗ ಕಾಮಗಾರಿ ಅಪ್‌ಡೇಟ್‌

ತುಮಕೂರು - ಚಿತ್ರದುರ್ಗ - ದಾವಣಗೆರೆ ನಡುವಿನ ನೇರ ರೈಲು ಮಾರ್ಗ ಕಾಮಗಾರಿ ಆರಂಭವಾಗಿ ದಶಕಗಳೇ ಕಳೆದರೂ ಇನ್ನೂ ಪೂರ್ಣವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ, ಕೋವಿಡ್ ಸಾಂಕ್ರಾಮಿಕ ಸೇರಿದಂತೆ ಹಲವು ಕಾರಣಗಳಿಂದ ಕಾಮಗಾರಿ ತಡವಾಗುತ್ತಲೇ ಬಂದಿದೆ. ಈಗ ಕಾಮಗಾರಿಗೆ ತಕ್ಕಮಟ್ಟಿನ ವೇಗ ಸಿಕ್ಕಿದ್ದು, ಇನ್ನು ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯುವ ನಿರೀಕ್ಷೆ ಮಾಡಲಾಗಿದೆ.

ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ, 2027ರ ಜನವರಿ ವೇಳೆಗೆ ಮುಗಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು ಈಗಾಗಲೇ ಊರುಕೆರೆ ರೈಲು ನಿಲ್ದಾಣ ನಿರ್ಮಾಕ ಕೆಲಸ ಕೂಡ ನಡೆಯುತ್ತಿದೆ.

Tumakuru chitradurga davanagere railway project update

ದಾವಣಗೆರೆ-ಭರಮಸಾಗರ-ಚಿತ್ರದುರ್ಗ ಮಧ್ಯದಲ್ಲಿ ಭುಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆದಿದ್ದ ಕಾರಣ ಬೆಳೆ ಕಟಾವಿನ ಬಳಿಕ ಕಾಮಗಾರಿ ಆರಂಭಿಸಲು ವಿ. ಸೋಮಣ್ಣ ಸೂಚನೆ ಕೊಟ್ಟಿದ್ದರು. ಈಗ ಬೆಳೆ ಕಟಾವು ಮಾಡಿಕೊಂಡಿದ್ದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.

ಶಿರಾ, ಹಿರಿಯೂರಿಗೆ ರೈಲು

ಶಿರಾ, ಹಿರಿಯೂರು ತಾಲೂಕಿಗೆ ರೈಲು ಸೇವೆ ಬೇಕೆನ್ನುವುದು ಹಲವು ದಶಕಗಳ ಕನಸು. ಈ ಭಾಗದ ಜನರ ದಶಕಗಳ ಹೋರಾಟದ ಫಲವಾಗಿ 2014ರಲ್ಲಿ ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. 2140 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇನ್ನೆರಡು ವರ್ಷದಲ್ಲಿ ಶಿರಾ, ಹಿರಿಯೂರು ತಾಲೂಕಿನ ಜನತೆಗೆ ರೈಲಿನಲ್ಲಿ ಓಡಾಡುವ ಅವಕಾಶ ಲಭ್ಯವಾಗಲಿದೆ.

ತುಮಕೂರು ಶಿರಾ ನಡುವೆ ಊರುಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾದಲ್ಲಿ ರೈಲು ನಿಲ್ದಾಣಗಳು ಬರಲಿವೆ. ಶಿರಾ ಹಿರಿಯೂರು ನಡುವೆ ತಾವರೆಕೆರೆ, ಆನೆಸಿದ್ರಿಯಲ್ಲಿ ರೈಲು ನಿಲ್ದಾಣ ನಿರ್ಮಾಣವಾಗಲಿವೆ. ಮೇಟಿಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವ್ವನಹಳ್ಳಿ, ಚಿತ್ರದುರ್ಗ, ಸಿರಿಗೆರೆ ಕ್ರಾಸ್, ಭರಮಸಾಗರ, ಹೆಬ್ಬಾಳು, ಆನಗೋಡು, ತೋಳಹುಣಸೆ, ದಾವಣಗೆರೆ ರೈಲ್ವೆ ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ. ತುಮಕೂರು, ಚಿತ್ರದುರ್ಗ, ತೋಳಹುಣಸೆ ಮತ್ತು ದಾವಣಗೆರೆಯಲ್ಲಿ ಈಗಾಗಲೇ ರೈಲ್ವೆ ನಿಲ್ದಾಣಗಳು ಇದ್ದು, ಉಳಿದ 16 ರೈಲ್ವೆ ನಿಲ್ದಾಣಗಳನ್ನು ಹೊಸದಾಗಿ ನಿರ್ಮಿಸಲಾಗುತ್ತದೆ.

ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್, ಮುಂಬೈ - ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಈ ರೈಲು ಮಾರ್ಗ ಮತ್ತಷ್ಟು ಉತ್ತೇಜನ ನೀಡಲಿದೆ. ದಾವಣಗೆರೆ - ಚಿತ್ರದುರ್ಗ- ಬೆಂಗಳೂರು ನಡುವೆ ರೈಲು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ತುಮಕೂರು ಜಿಲ್ಲೆಯ ವಸಂತನರಾಸಪುರ ಕೈಗಾರಿಕಾ ಪ್ರದೇಶಕ್ಕೆ ಈ ರೈಲು ಮಾರ್ಗ ಯೋಜನೆ ಮತ್ತಷ್ಟು ಉತ್ತೇಜನ ನೀಡಲಿದೆ. ಶಿರಾ, ಹಿರಿಯೂರು ತಾಲೂಕಿನಲ್ಲೂ ಕೈಗಾರಿಕಾ ಯೋಜನೆಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆ ಹೊಂದಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+