• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡ ಪರ ಸಿದ್ದರಾಮಯ್ಯ ಮತಯಾಚನೆ: ಮೋದಿ ವಿರುದ್ಧ ವಾಗ್ದಾಳಿ

|

ತುಮಕೂರು, ಏಪ್ರಿಲ್ 10: ಹಳೆಯ ಗುರು, ಹಿರಿಯ ಸ್ನೇಹಿತ ದೇವೇಗೌಡ ಅವರ ಪರವಾಗಿ ಇಂದು ತುಮಕೂರಿನಲ್ಲಿ ಸಿದ್ದರಾಮಯ್ಯ ಮತಯಾಚನೆ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಚಾರ ಭಾಷಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ದೇವೇಗೌಡ ಅವರ ಬಗ್ಗೆ ವಿಶೇಷವಾಗಿ ಮಾತನಾಡಲಿಲ್ಲ. ಆದರೆ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾನ್ ಸುಳ್ಳುಗಾರ ಮೋದಿ, ಸುಳ್ಳು ಹೇಳುವುದೇ ಸಾಧನೆ : ಸಿದ್ದರಾಮಯ್ಯ

ಮೋದಿಗೆ ಅಟಲ್ ಬಿಹಾರಿ ವಾಜಪೇಯಿಗೆ ಆದ ಗತಿಯೇ ಆಗುತ್ತದೆ ಎಂದ ಸಿದ್ದರಾಮಯ್ಯ, ಮೋದಿ ಗೆದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಹೇಳಿದರು.

ಬಿಜೆಪಿ ಪ್ರಣಾಳಿಕೆ ಜನಸಂಘ ಹುಟ್ಟಿದಾಗಿನಿಂದಲೂ ಹೇಳುತ್ತಿರುವ ಘೋಷಣೆ. ಅಂದಿನಿಂದ ಈಗಲೂ ಅದೇ ರಾಮಮಂದಿರ, ಅದೇ 370 ವಿಧಿ. ರಾಮಮಂದಿರ ನಿರ್ಮಾಣವನ್ನ ಚುನಾವಣಾ ವಿಷಯ ಮಾಡಿಕೊಂಡು ಜನರನ್ನ ಮರಳು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಕಾಪಿ ಕ್ಯಾಟ್ ಮೋದಿ' ಎಂದು ಬಿಜೆಪಿ ಪ್ರಣಾಳಿಕೆ ಲೇವಡಿ ಮಾಡಿದ ಸಿದ್ದರಾಮಯ್ಯ

ನಿನ್ನೆ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡ ಅವರು ಜಂಟಿಯಾಗಿ ಸ್ಪರ್ಧೆ ಮಾಡಿದ್ದಾರೆ. ಇಂದು ತುಮಕೂರಿನಲ್ಲಿ ಪ್ರಚಾರ ನಡೆಸಿದ್ದಾರೆ. ತುಮಕೂರಿನಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಆಗಿ ದೇವೇಗೌಡ ಅವರು ಸ್ಪರ್ಧಿಸಿದ್ದಾರೆ.

English summary
Congress leader Siddaramaiah campaign for Deve Gowda in Tumkur today. He said Modi also loose this election just like Atal Bihar Vajpeyee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X