ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರದಲ್ಲಿ ತಾಳ್ಮೆ ಅಗತ್ಯ: ವೈದ್ಯರು
ತುಮಕೂರು, ಜನವರಿ 03: ಸಿದ್ದಗಂಗಾ ಶ್ರೀಗಳ ಶ್ವಾಸಕೋಶದಲ್ಲಿ ಕಾಣಿಸಿಕೊಂಡಿದ್ದ ಸೋಂಕು ನಿಧಾನವಾಗಿ ನಿವಾರಣೆ ಆಗುತ್ತಿದೆ ಎಂದು ಅವರ ಚೆನ್ನೈನಿಂದ ಬಂದಿರುವ ವಿಶೇಷ ವೈದ್ಯ ಸುಭ್ರ ಅವರು ಹೇಳಿದ್ದಾರೆ.
ಶ್ರೀಗಳನ್ನು ಮಠದ ಆಸ್ಪತ್ರೆಯಲ್ಲಿ ಇಂದು ತಪಾಸಣೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಚಿಕಿತ್ಸೆಗಳಿಗೆ ಸ್ಪಂದಿಸುತ್ತಿದ್ದಾರೆ, ಅವರ ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ಹೇಳಿದ್ದಾರೆ.
ಶ್ರೀಗಳ ಆರೋಗ್ಯದ ವಿಚಾರದಲ್ಲಿ ಎಲ್ಲರಿಗೂ ತಾಳ್ಮೆಯ ಅಗತ್ಯವಿದೆ. ಶ್ರೀಗಳಿಗೆ ವಯಸ್ಸು ಹೆಚ್ಚಾಗಿರುವ ಕಾರಣ ಚೇತರಿಕೆ ಶೀಘ್ರವಾಗಿ ಕಾಣಿಸದು ಎಂದು ಅವರು ಹೇಳಿದ್ದಾರೆ.

ಶ್ರೀಗಳ ಆಪ್ತ ವೈದ್ಯರು ಸಮಯೋಚಿತ ಚಿಕಿತ್ಸೆ ನೀಡುತ್ತಲೇ ಬರುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ರವಾನಿಸುವ ಅಗತ್ಯ ಇಲ್ಲ ಎಂದು ಹೇಳಿದ ಅವರು, ಅವರಿಗೆ ಇಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುವುದು ಅಗತ್ಯ ಬಿದ್ದರಷ್ಟೆ ಚೆನ್ನೈಗೆ ಕಳುಹಿಸಲಾಗುವುದು ಎಂದರು.
ಶ್ರೀಗಳ ಆತ್ಮಸ್ಥರ್ಯ ಅದ್ಭುತವಾಗಿದೆ, ಹಾಗಾಗಿ ನಮಗೆ ಚಿಕಿತ್ಸೆ ನೀಡುವುದು ಸುಲಭವಾಗುತ್ತಿದೆ. ಶ್ರೀಗಳು ಚಿಕಿತ್ಸೆಗೆ ತುಂಬ ಧನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications