ಸಂಸದ, ಶಾಸಕರನ್ನು ಹುಡುಕಿಕೊಟ್ಟವರಿಗೆ ಬಹುಮಾನ!

ತುಮಕೂರು, ನವೆಂಬರ್ 17 : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಜನರು ಫೇಸ್‌ಬುಕ್‌ನಲ್ಲಿ ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ. 2013ರ ಚುನಾವಣೆಯ ನಂತರ ಸಂಸದರು ಮತ್ತು ಶಾಸಕರು ಕಾಣೆಯಾಗಿರುತ್ತಾರೆ ಎಂದು ಜಾಹೀರಾತು ನೀಡಿದ್ದು, ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.

Narthanapuri Kunigal ಎಂಬ ಫೇಸ್‌ಬುಕ್ ಪುಟದಲ್ಲಿ ಇವರು ಕೈಗೆ ಸಿಗದ 'ಎತ್ತರ', ಬದಲಾಗುವ 'ಬಣ್ಣ' ಮತ್ತು ಮಾಯವಾಗುವ 'ಮೈಕಟ್ಟು' ಹೊಂದಿದ್ದು 'ಪೊಳ್ಳು ಭರವಸೆ' ಎಂಬ ಭಾಷೆ ಮಾತನಾಡುತ್ತಾರೆ. ಇವರು ಸಿಕ್ಕಿದ್ದಲ್ಲಿ ಧೂಳು ತುಂಬಿರುವ ಕುಣಿಗಲ್ ಪಟ್ಟಣದ ಕೆಸರುಮಯ ರಸ್ತೆಯ ಗುಂಡಿಗಳಲ್ಲಿ ತಂದು ನಿಲ್ಲಿಸತಕ್ಕದ್ದು ಎಂದು ಜಾಹೀರಾತು ಹಾಕಲಾಗಿದೆ. [ನಮ್ಮ ಶಾಸಕರ ವೇತನವೆಷ್ಟು?]

kunigal

ಸಂಸದ ಡಿ.ಕೆ.ಸುರೇಶ್ (ಕಾಂಗ್ರೆಸ್) ಮತ್ತು ಕುಣಿಗಲ್ ಶಾಸಕ ಡಿ.ನಾಗರಾಜಯ್ಯ (ಜೆಡಿಎಸ್)ಅವರು 2013ರ ಚುನಾವಣೆ ಬಳಿಕ ಕಾಣೆಯಾಗಿದ್ದಾರೆ. ಇವರು ಸಿಕ್ಕಿದ್ದಲ್ಲಿ ಧೂಳು ತುಂಬಿರುವ ಕುಣಿಗಲ್ ಪಟ್ಟಣದ ಕೆಸರುಮಯ ರಸ್ತೆಯ ಗುಂಡಿಗಳಲ್ಲಿ ತಂದು ನಿಲ್ಲಿಸತಕ್ಕದ್ದು ಎಂದು ಫೇಸ್‌ ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

ಜಾಹೀರಾತಿನಲ್ಲಿ ಏನಿದೆ? : ಜಾಹೀರಾತಿನಲ್ಲಿ ಭಾವಚಿತ್ರದಲ್ಲಿರುವ ಕುಣಿಗಲ್ ಜನತೆಯ ಪ್ರತಿನಿಧಿಗಳಾದ 1. MP ಶ್ರೀ ಡಿ.ಕೆ ಸುರೇಶ್ 2. MLA ಶ್ರೀ ಡಿ.ನಾಗರಾಜಯ್ಯ ಹಾಗೂ ಎಲ್ಲಾ ಪುರಸಭಾ ಸದಸ್ಯರುಗಳು ಕಳೆದ 2013ರ ಚುನಾವಣೆಯ ನಂತರ ಕುಣಿಗಲ್ ನಿಂದ ಕಾಣೆಯಾಗಿರುತ್ತಾರೆ.

Share maadrappaಪ್ರಕಟಣೆ:ಭಾವಚಿತ್ರದಲ್ಲಿರುವ ಕುಣಿಗಲ್ ಜನತೆಯ ಪ್ರತಿನಿಧಿಗಳಾದ 1. mp ಶ್ರೀ ಡಿ.ಕೆ ಸುರೇಶ್ 2. mla ಶ್ರೀ ಡಿ.ನಾಗರಾಜಯ್ಯ ಹ...

Posted by Narthanapuri Kunigal onFriday, November 13, 2015

ಇವರು ಕೈಗೆ ಸಿಗದ 'ಎತ್ತರ', ಬದಲಾಗುವ 'ಬಣ್ಣ' ಮತ್ತು ಮಾಯವಾಗುವ 'ಮೈಕಟ್ಟು' ಹೊಂದಿದ್ದು 'ಪೊಳ್ಳು ಭರವಸೆ' ಎಂಬ ಭಾಷೆ ಮಾತನಾಡುತ್ತಾರೆ. ಇವರು ಸಿಕ್ಕಿದ್ದಲ್ಲಿ ಧೂಳು ತುಂಬಿರುವ ಕುಣಿಗಲ್ ಪಟ್ಟಣದ ಕೆಸರುಮಯ ರಸ್ತೆಯ ಗುಂಡಿಗಳಲ್ಲಿ ತಂದು ನಿಲ್ಲಿಸತಕ್ಕದ್ದು.

ವಿ.ಸೂ : ನೀವು ಸದಸ್ಯರನ್ನು ಕರೆತಂದು ನಿಲ್ಲಿಸುವ ಗುಂಡಿಯ ಗಾತ್ರಕ್ಕೆ ತಕ್ಕಂತೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಫೇಸ್ ಬುಕ್ ಪುಟದಲ್ಲಿ ಹೇಳಲಾಗಿದೆ.

ಅಂದಹಾಗೆ ಕುಣಿಗಲ್ ತುಮಕೂರು ಜಿಲ್ಲೆಯಲ್ಲಿದ್ದರೂ ಅದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಕುಣಿಗಲ್ ಜನರಿಗೆ ಡಿ.ಕೆ.ಸುರೇಶ್ ಅವರು ಸಂಸದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+