ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಸಂಸದ ಮುದ್ದಹನುಮೇಗೌಡ: ಆರೋಪ

Recommended Video

      ತುಮಕೂರು : ಸಂಸದ ಮುದ್ದ ಹನುಮೇಗೌಡ ವಿರುದ್ದ ಗಂಭೀರ ಆರೋಪ | Oneindia Kannada

      ತುಮಕೂರು, ಏಪ್ರಿಲ್ 18: ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಹೊನ್ನಗಿರಿಗೌಡ ಅವರು ಸಂಸದ ಮುದ್ದಹನುಮೇಗೌಡ ಅವರ ಮೇಲೆ ಲಂಚ ಪಡೆದ ಆರೋಪ ಹೊರಿಸಿದ್ದಾರೆ.

      ತಮಗೆ ಗುಬ್ಬಿ ಕ್ಷೇತ್ರದ ಟಿಕೆಟ್ ತಪ್ಪಲು ಸಂಸದ ಮುದ್ದಹನುಮೇಗೌಡ ಅವರೇ ಕಾರಣ ಎಂದಿರುವ ಹೊನ್ನಗಿರಿಗೌಡ. ಮುದ್ದಹನುಮೇಗೌಡ ಅವರು ಹಣ ಪಡೆದು ಕೆ.ಕುಮಾರ್ ಅವರಿಗೆ ಗುಬ್ಬಿ ಕ್ಷೇತ್ರದ ಟಿಕೆಟ್ ಕೊಡಿಸಿದ್ದಾರೆ ಎಂದಿದ್ದಾರೆ.

      Karnataka elections: Gubbi congress ticket aspirant alleged on MP Muddahanumegowda

      ಮುದ್ದಹನಮೇಗೌಡರು ಹಣ ಪಡೆದು ಟಿಕೆಟ್ ಕೊಡಿಸಿದ್ದಾರೆ ಎಂದು ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿರುವ ಕೆ.ಕುಮಾರ್ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಮೂರು ತಿಂಗಳು ಆಗಿದೆಯಷ್ಟೆ ಅಷ್ಟರಲ್ಲೇ ಅವರಿಗೆ ಟಿಕೆಟ್ ಕರುಣಿಸಲಾಗಿದೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬಂದಿರುವುದು ಕಾಂಗ್ರೆಸ್‌ ಅನ್ನು ಮುಗಿಸಲು ಎಂದು ಅವರು ಕಿಡಿಕಾರಿದರು.

      ಸಂಸದ ಮುದ್ದಹನುಮೇಗೌಡ ಅವರ ಈ ನಡೆಯಿಂದ ನಾನೂ ಸೇರಿದಂತೆ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+