Get Updates
Get notified of breaking news, exclusive insights, and must-see stories!

Chikkanayakanahalli: ಮೂರು ಪಕ್ಷಗಳ ನಡುವೆ ಸಮಬಲದ ಸ್ಪರ್ಧೆ! ಸಚಿವರಿಗೆ ಕಾದಿದ್ಯಾ ಸೋಲಿನ ಆಘಾತ?

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಎದುರಾಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಇಲ್ಲಿನ ರಾಜಕೀಯ ರಂಗೇರಿದೆ. ಹಾಲಿ ಬಿಜೆಪಿ ಶಾಸಕ, ಸಚಿವ ಜೆ ಮಾಧುಸ್ವಾಮಿ ಮರು ಆಯ್ಕೆ ಬಯಸಿದ್ದರೆ, ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಲ್ಲಿದೆ ಜೆಡಿಎಸ್.

ಜೆಡಿಎಸ್‌ನಿಂದ ಮಾಜಿ ಶಾಸಕ ಸಿಬಿ ಸುರೇಶ್ ಬಾಬು ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಕಿರಣ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ. ಚಿಕ್ಕನಾಯಕನಹಳ್ಳಿ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಸುರೇಶ್ ಬಾಬು ಅವರನ್ನು ಹೊರತು ಪಡಿಸಿ ಉಳಿದ ಯಾವ ನಾಯಕ ಕೂಡ ಇಲ್ಲಿ ಸತತವಾಗಿ ಎರಡು ಬಾರಿ ಗೆಲುವು ಕಂಡಿಲ್ಲ, ಅದೇ ಸಂಪ್ರದಾಯ ಈ ಬಾರಿ ಕೂಡ ಮುಂದುವರೆಯುತ್ತಾ ಎನ್ನುವ ಕುತೂಹಲ ಎದುರಾಗಿದೆ.

Karnataka Election, Chikkanayakanahalli Fight: J Madhuswamy vs Kiran Kumar vs C.B Suresh Babu

ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಚಿಕ್ಕನಾಕನಹಳ್ಳಿಯಲ್ಲಿ ಮೊದಲ ಬಾರಿ ಕಮಲ ಅರಳಿಸುವಲ್ಲಿ ಮಾಧುಸ್ವಾಮಿ ಯಶಸ್ವಿಯಾಗಿದ್ದರು. ಈ ಬಾರಿ ಎರಡನೇ ಬಾರಿ ಗೆಲ್ಲುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡ್ತಾರ ಎಂದು ನೋಡಬೇಕಿದೆ. ಮಾಧುಸ್ವಾಮಿ ಗೆಲುವಿಗೆ ಕ್ಷೇತ್ರದಲ್ಲಿ ದೊಡ್ಡ ಹಿನ್ನಡೆಯಾಗಿರುವುದು ಆಡಳಿತ ವಿರೋಧಿ ಅಲೆ ಎಂದರೆ ತಪ್ಪಾಗಲಾರದು.

ಜೆ. ಮಾಧುಸ್ವಾಮಿಯವರಿಗೆ ತಮ್ಮ ಲಿಂಗಾಯತ ಸಮುದಾಯದ ಬೆಂಬಲವಿದ್ದರೂ, ಹೆಚ್ಚಿನ ಜನಮನ್ನಣೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಕ್ಷೇತ್ರದ ಜನ ಅಭಿಪ್ರಾಯಪಟ್ಟಿದ್ದಾರೆ. ಸಚಿವರಾಗಿದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎನ್ನುವ ಆರೋಪ ಮತದಾರನದ್ದಾಗಿದೆ.

ಮೂರು ಪಕ್ಷಗಳ ನಡುವೆ ನೇರ ಹಣಾಹಣಿ

ಚಿಕ್ಕನಾಯಕನಹಳ್ಳಿಯಲ್ಲಿ ಲಿಂಗಾಯತ ಮತ್ತು ಕುರುಬ ಮತಗಳೇ ನಿರ್ಣಾಯಕವಾಗುತ್ತವೆ, ಮುಸ್ಲಿಂ ಮತಗಳು ಕೂಡ ಇಲ್ಲಿ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಸ್ಪಷ್ಟ. ಮೇಲ್ನೋಟಕ್ಕೆ ಈ ಬಾರಿ ಚುನಾವಣೆಯಲ್ಲಿ ಹಾಲಿ ಶಾಸಕ ಮಾಧುಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್ ಬಾಬು ನಡುವಿನ ನೇರ ಹಣಾಹಣಿ ಎನಿಸಿದರೂ, ಕಾಂಗ್ರೆಸ್‌ನ ಕಿರಣ್ ಕುಮಾರ್ ಕೂಡ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಚಂದ್ರರನ್ನು ಕಣಕ್ಕಿಳಿಸಿ ತಪ್ಪು ಮಾಡಿತ್ತು, ಈ ಬಾರಿ ಟಿ.ಬಿ. ಜಯಚಂದ್ರ ಶಿರಾ ಕ್ಷೇತ್ರಕ್ಕೆ ವಾಪಸ್ ತೆರಳಿದ್ದರಿಂದ ಕಿರಣ್ ಕುಮಾರ್ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಮಾಧುಸ್ವಾಮಿಗೆ ಮುಂಚಿನಿಂದಲೂ ಬಿಜೆಪಿಯಲ್ಲಿದ್ದ ಕಿರಣ್ ಕುಮಾರ್ ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕ್ಷೇತ್ರದಲ್ಲಿ ಓಡಾಡಿಕೊಂಡು ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದು, ಜನಾಶೀರ್ವಾದ ಸಿಗುವ ಉತ್ಸಾಹದಲ್ಲಿದ್ದಾರೆ.

ಸಿಬಿ ಸುರೇಶ್ ಬಾಬು ಕುರುಬರ ಮತಗಳನ್ನು ಹೆಚ್ಚಾಗಿ ನಂಬಿಕೊಂಡಿದ್ದಾರೆ, ಜೊತೆಗೆ ಮುಸ್ಲಿಂ ಮತಗಳು ಕೂಡ ಜೆಡಿಎಸ್‌ ಕಡೆಗೆ ವಾಲಿದರೆ, ಮಾಧುಸ್ವಾಮಿ ಗೆಲುವು ನಿಜಕ್ಕೂ ಕಷ್ಟವಾಗಲಿದೆ. ಸದ್ಯ ಮೂರು ಪಕ್ಷಗಳ ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಮೇ 13ರಂದು ಮತದಾರ ಯಾರ ಕೈ ಹಿಡೀತಾನೆ ಎನ್ನುವುದು ತಿಳಿಯಲಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜೆ. ಮಾಧುಸ್ವಾಮಿ ಜೆಡಿಎಸ್‌ನ ಸುರೇಶ್ ಬಾಬು ವಿರುದ್ಧ 10,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಾಧುಸ್ವಾಮಿ 69,612 ಮತಗಳನ್ನು ಪಡೆದಿದ್ದರೆ, ಸುರೇಶ್ ಬಾಬು 59,335 ಮತಗಳನ್ನು ಪಡೆದುಕೊಂಡಿದ್ದರು.

ಚಿಕ್ಕನಾಯಕನಹಳ್ಳಿ ಮತದಾರರ ಬಗ್ಗೆ ಮಾಹಿತಿ

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,277 ಮತಗಳಿವೆ. ಇದರಲ್ಲಿ 1,05,614 ಪುರುಷ ಮತದಾರರಿದ್ದು, 1,04,638 ಮಹಿಳಾ ಮತದಾರರಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಮತದಾರರು 8 ಮಂದಿ ಇದ್ದಾರೆ. ಪ್ರತಿ ಬಾರಿ ಚುನಾವಣೆಯಾದಾಗಲು ಇಲ್ಲಿ ಲಿಂಗಾಯತ ಮತ್ತು ಕುರುಬ ಸಮುದಾಯಗಳ ನಡುವೆ ಪೈಪೋಟಿ ಇರುತ್ತದೆ. ಇದುವರೆಗೂ ಇಲ್ಲಿ ಆಯ್ಕೆಯಾದವರು ಬಹುತೇಕ ಈ ಎರಡು ಸಮುದಾಯದವರೇ ಆಗಿದ್ದಾರೆ. ಈ ಬಾರಿ ಮತದಾರ ಯಾರ ಕಡೆ ಒಲವು ತೋರುತ್ತಾನೆ ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+