ಜೆಡಿಎಸ್ ಬದಲು ಕಾಂಗ್ರೆಸ್ ಗುರುತು ತೋರಿಸಿದ ಸಿಬ್ಬಂದಿ
ತುಮಕೂರು, ಮೇ 12: ಜೆಡಿಎಸ್ ಬದಲು ಕಾಂಗ್ರೆಸ್ ಚಿನ್ಹೆ ತೋರಿಸಿದ ಮತಗಟ್ಟೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವೃದ್ಧೆಯೊಬ್ಬರು, ಸಿಬ್ಬಂದಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕಾಟಗೊಂಡನಹಳ್ಳಿಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.
ಮತಚಲಾಯಿಸಲು ಬಂದ ವೃದ್ಧೆಯೊಬ್ಬರಿಗೆ ಇವಿಎಂನಲ್ಲಿನ ಆಯ್ಕೆಗಳು ಸರಿಯಾಗಿ ತಿಳಿಯಲಿಲ್ಲ. ಜೆಡಿಎಸ್‌ಗೆ ಮತನೀಡಲು ಬಯಸಿದ್ದ ಅವರು ತೆನೆಹೊತ್ತ ಮಹಿಳೆಯ ಗುರುತು ಎಲ್ಲಿದೆ ಎಂಬುದನ್ನು ಮತಗಟ್ಟೆ ಸಿಬ್ಬಂದಿಯನ್ನು ಕೇಳಿದ್ದರು. ಸಿಬ್ಬಂದಿ ಜೆಡಿಎಸ್‌ನ ಗುರುತಿನ ಬದಲು ಕಾಂಗ್ರೆಸ್ ಗುರುತು ತೋರಿಸಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ.

ಸಿಬ್ಬಂದಿಯ ವರ್ತನೆಯಿಂದ ಕೋಪಗೊಂಡಿರುವ ವೃದ್ಧೆ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಎಂ.ವಿ. ವೀರಭದ್ರಯ್ಯ, ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಮತ್ತು ಬಿಜೆಪಿಯ ಎಸ್.ಇ. ರಮೇಶ್ ಕಣದಲ್ಲಿದ್ದಾರೆ.












Click it and Unblock the Notifications