ದೇವೇಗೌಡರದು ರಾಕ್ಷಸ ಕುಟುಂಬ ಎಂದು ಹೊಗಳಿದ ಸಚಿವ ಎಸ್.ಆರ್.ಶ್ರೀನಿವಾಸ್

Recommended Video

      ಮಂಡ್ಯ ಕಾಂಗ್ರೆಸ್ ಮುಖಂಡರ ವಿರುದ್ಧ ಗರಂ ಆದ ಎಚ್ ಡಿ ಕುಮಾರಸ್ವಾಮಿ

      ತುಮಕೂರು, ಮಾರ್ಚ್ 21: ಮಾಜಿ ಪ್ರಧಾನಿ ದೇವೇಗೌಡರದು ರಾಕ್ಷಸ ಕುಟುಂಬ. ಅವರು ಯಾವುದಕ್ಕೂ ಹೆದರುವುದಿಲ್ಲ. ಗೆಲ್ಲಲಿ, ಸೋಲಲಿ ಹೋರಾಟ ಮಾಡುತ್ತಾರೆ ಎಂದು ಹೇಳುವ ಮೂಲಕ ಗುಬ್ಬಿ ಶಾಸಕ- ಸಚಿವ ಎಸ್.ಆರ್.ಶ್ರೀನಿವಾಸ್ ಗುರುವಾರ ಹೊಗಳಿದ್ದಾರೆ. ಆ ಮೂಲಕ ತಮ್ಮ ವಿಲಕ್ಷಣ ಹೇಳಿಕೆಗಳಿಗೆ ಇನ್ನೊಂದು ಸೇರ್ಪಡೆ ಮಾಡಿಕೊಂಡಿದ್ದಾರೆ.

      ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಹೆದರಿಕೊಂಡು ದೇವೇಗೌಡರು ತುಮಕೂರಿಗೆ ಬರುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಎಸ್.ಆರ್. ಶ್ರೀನಿವಾಸ್ ಹೀಗೆ ಉತ್ತರಿಸಿದ್ದಾರೆ. ಮಾರ್ಚ್ ಇಪ್ಪತ್ನಾಲ್ಕು- ಇಪ್ಪತ್ತೈದನೇ ತಾರೀಕು ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆ ನಡೆಯಲಿದೆ. ಆ ದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.

      ಎಸ್.ಆರ್. ಶ್ರೀನಿವಾಸ್ ಅವರು ದೇವೇಗೌಡರನ್ನು ಹೊಗಳುವ ಭರದಲ್ಲಿ ಈ ರೀತಿ ವಿಚಿತ್ರ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2017ರ ಡಿಸೆಂಬರ್ ನಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ನಮ್ಮ ಹಿಂದಿನ ಪ್ರಧಾನಮಂತ್ರಿಗಳು ಆರಾಮವಾಗಿ ಮನೆಯಲ್ಲಿದ್ದು, ಎಲ್ಲ ಸೌಕರ್ಯ ಅನುಭವಿಸುತ್ತಿದ್ದಾರೆ. ಸರಕಾರ ಎಲ್ಲ ಸೌಲಭ್ಯ ಒದಗಿಸಿ ಬಿಳಿಯಾನೆಯ ಹಾಗೆ ಸಾಕುತ್ತಿದೆ.

      HD Deve Gowdas family is demon family, praised by minister SR Srinivas

      ಆದರೆ, ಈ ಮನುಷ್ಯ (ಎಚ್.ಡಿ.ದೇವೇಗೌಡ) ಹುಚ್ಚು ನಾಯಿ ಸುತ್ತಿದ ಹಾಗೆ ಇಡೀ ರಾಜ್ಯದಲ್ಲಿ ಸುತ್ತಾಡುತ್ತಿದ್ದಾರಲ್ರೀ ಎಂದಿದ್ದರು ಎಸ್.ಆರ್.ಶ್ರೀನಿವಾಸ್. ಸ್ವತಃ ದೇವೇಗೌಡರ ಸಮ್ಮುಖದಲ್ಲೇ ಆ ಮಾತು ಆಡಿದ್ದರು. ಆಗಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ರಾಕ್ಷಸ ಕುಟುಂಬ ಎಂಬುದು ಕೂಡ ದೇವೇಗೌಡರ ಬಗ್ಗೆ ಹೊಗಳಿಕೆ ಅನ್ನೋದರಲ್ಲಿ ಅನುಮಾನ ಬೇಡ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+