ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ಬಲಿ ಪಡೆದ ತ್ಯಾಜ್ಯ ಘಟಕ, ಬುದ್ಧಿ ಕಲಿಯದ ಜಿಲ್ಲಾಡಳಿತ

By Mahesh
|
Google Oneindia Kannada News

ತುಮಕೂರು, ಡಿ.21: ಇಲ್ಲಿನ ಅಜ್ಜಗೊಂಡನಹಳ್ಳಿ ಸಮೀಪದ ತ್ಯಾಜ್ಯ ಘಟಕಕ್ಕೆ ವಿರೋಧಿಸಿದ್ದ ಸಂತ್ರಸ್ತ ರೈತ ಕಮ್ ವಿಶ್ವವಿದ್ಯಾಲಯದ ಅರೆ ಕಾಲಿಕ ಉದ್ಯೋಗಿ ಶಿವಕುಮಾರ್ ಸಾವಿನ ಸೂತಕ ಎಲ್ಲೆಡೆ ವ್ಯಾಪಿಸುತ್ತಿದೆ. ಪ್ರಾಣ ಹೋದರೂ ಹೋಗಲಿ ತ್ಯಾಜ್ಯ ಘಟಕ ಸ್ಥಾಪಿಸಲು ಬಿಡುವುದಿಲ್ಲ ಎಂದು ಹಳ್ಳಿಗರು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಶಿವಕುಮಾರ್ ಸಾವಿಗೆ ಸಂತಾಪ ಸೂಚಿಸಿರುವ ಡಿಸಿ ಕೆಎಸ್ ಸತ್ಯಮೂರ್ತಿ ಅವರು ಮಾತನಾಡಿ, ಮೃತರ ಕುಟುಂಬಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು, ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಗ್ರಾಮಸ್ಥರು ಹಿಂಸಾತ್ಮಕ ಹೋರಾಟ ಕೈಬಿಡುವುದು ಒಳ್ಳೆಯದು ಎಂದಿದ್ದಾರೆ.

ಏನಿದು ಗೊಂದಲ?: ಅಜ್ಜಗೊಂಡನಹಳ್ಳಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳೀಯರು ವಿರೋಧಿಸಿದ್ದರು. ಇವರಲ್ಲಿ ಕಟ್ಟಿಗೆಹಳ್ಳಿ ನಿವಾಸಿ ತುಮಕೂರು ವಿಶ್ವವಿದ್ಯಾಲಯದ ಅರೆ ಕಾಲಿಕ ಸಿಬ್ಬಂದಿಯಾಗಿದ್ದ ಶಿವಕುಮಾರ್ ಪ್ರಮುಖರಾಗಿದ್ದರು. ದೈಹಿಕ ನೂನ್ಯತೆಯಿದ್ದರೂ ಗ್ರಾಮದ ಪರವಾಗಿ ಹೋರಾಟಕ್ಕೆ ಮುಂದಾಗಿದ್ದ ಶಿವಕುಮಾರ್ ಗೆ ತನ್ನ ಬಳಿ ಇದ್ದ ಒಂದೂವರೆ ಎಕರೆ ಭೂಮಿ ಬೆಲೆ ಕಳೆದುಕೊಳ್ಳುವ ಭೀತಿ ಕಾಡಿತ್ತು.

Tumakuru: Garbage Woes Man Kills Self

ಆತ್ಮಹತ್ಯೆಗೆ ಶರಣಾದ ಶಿವಕುಮಾರ್: ಘಟಕ ಸ್ಥಾಪನೆಗೊಂಡರೆ ತನ್ನ ಜೀವನ ದುಸ್ತರವಾಗುತ್ತದೆ ಎಂದು ಮುಖ್ಯಮಂತ್ರಿ, ಮಹಾನಗರ ಪಾಲಿಕೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರಿಗೆ ಹಲವು ಮನವಿಗಳನ್ನು ನೀಡಿ ಅಲವತ್ತುಕೊಂಡಿದ್ದ. ಅವರ ಮನವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಯಾವುದೇ ಮನ್ನಣೆ ದೊರೆಯದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದಾರೆ.

ಕ್ಯಾತ್ಸಂದ್ರ ಹಿರೇಹಳ್ಳಿ ನಡುವೆ ರೈಲು ಹಳಿಯಲ್ಲಿ ಮೃತದೇಹ ಪತೆಯಾಗಿತ್ತು.ಶಿವಕುಮಾರ್ ಸಾವಿಗೆ ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಹೊತ್ತಿ ಉರಿದ ಗ್ರಾಮ: ಶವಾಗಾರದಿಂದ ಶಿವಕುಮಾರ್ ಮೃತದೇಹವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಇಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ, ಆಸ್ಪತ್ರೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿ ಶವಾಗಾರದ ಮುಂದೆಯೇ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಕಾರರು ಮೃತದೇಹವನ್ನು ಮೆರವಣಿಗೆಯ ಮೂಲಕ ಊರಿಗೆ ಕೊಂಡೊಯ್ಯುವುದಾಗಿ ಕೇಳಿಕೊಂಡರು. ಅದರೆ, ಪೊಲೀಸರು ಅವಕಾಶ ನೀಡಲಿಲ್ಲ.

ಮೃತದೇಹದೊಂದಿಗೆ ಗ್ರಾಮಕ್ಕೆ ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಕಾರರು ಸಶಸ್ತ್ರ ಪೊಲೀಸ್ ಪಡೆಯ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಸಿಪಿಐಗಳಾದ ರವಿ ಮತ್ತು ಅಬ್ದುಲ್ ಖಾದರ್ ಎಂಬವರಿಗೆ ತೀವ್ರ ಗಾಯಗಳಾಗಿದೆ. ಖಾದರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದ್ದು, ಇವರಿಗೆ ಪ್ರಜ್ಞೆ ಮರಳಿಲ್ಲ ಎಂದು ತಿಳಿದು ಬಂದಿದೆ.

English summary
Garbage Woes Man Kills Self, Protest against waste segregation unit. Tension prevailed at Katigenahalli in Tumakuru taluk late on Saturday night when police opened fire in the air to disperse agitators who set fire to a police van and threw stones at police vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X