Tumkuru: ರಸ್ತೆ ಪಕ್ಕದ ಅಂಗಡಿಯಲ್ಲಿ ಚಹಾ ಕುಡಿದು ಚಕ್ಕುಲಿ ತಿಂದ ಜಿ.ಪರಮೇಶ್ವರ: ವಿಡಿಯೋ
ತುಮಕೂರು, ಮಾರ್ಚ್ 27: ತುಮಕೂರಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳಿ ಬೆಂಗಳೂರಿನತ್ತ ಬರುವಾಗ ಗೃಹ ಸಚಿವ ಡಾ.ಜಿ.ಪಮರೇಶ್ವರ್ ಅವರು ಸಣ್ಣ ಚಹಾದಂಗಡಿಗೆ ದಿಢೀರ್ ಭೇಟಿ ನೀಡಿದ್ದು, ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.
ಜನಪ್ರತಿನಿಧಿಗಳು ರಾಜಕಾರಣದಲ್ಲಿ ಹೆಚ್ಚು ಬ್ಯೂಸಿಯಾಗಿರುತ್ತಾರೆ. ಅವರು ಕೈಗೆ ಸಿಗುವುದು ಅಪರೂಪ. ಅದರಲ್ಳೂ ಚುನಾವಣೆ ವೇಳೆ ಮತ್ತಷ್ಟು ಬ್ಯೂಸಿ ಇರುತ್ತಾರೆ. ಇಂತಯ ನಾಯಕರು ಮೆಟ್ರೋ ಸಂಚಾರ, ರಸ್ತೆ ಬದಿ ತಿಂಡಿ ತಿನ್ನುವುದು, ಜನಸಾಮಾನ್ಯರ ಜೊತೆ ಕೆಲ ಕಾಲ ಕಳೆಯುವ ಮೂಲಕ ಸುದ್ದಿಯಾಗುತ್ತಾರೆ.

ಅದೇ ರೀತಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ತುಮಕೂರಿನಿಂದ ಬೆಂಗಳೂರಿಗೆ ಬರುವಾಗ ದಿಢೀರ್ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಪಕ್ಕದಲ್ಲೇ ಇದ್ದ ಚಹಾದ ಅಂಗಡಿಗೆ ಭೇಟಿ ನೀಡಿದ್ದಾರೆ.
ಸಚಿವರ ಸರಳತೆಗೆ ಮೆಚ್ಚುಗೆ
ಕೊರಟಗೆರೆ ತಾಲ್ಲೂಕಿನ ತಣ್ಣೇನಹಳ್ಳಿಯ ರಸ್ತೆ ಬದಿ ಅಂಗಡಿಯಲ್ಲಿ ಚಹಾ ಸವಿದಿದ್ದಾರೆ. ಚಹಾ ಜೊತೆಗೆ ಅವರು ಚಕ್ಕುಲಿ ತಿಂದ ಗೃಹ ಸಚಿವ ಪರಮೇಶ್ವರ್ ಸರಳತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪ್ತಕ ಮೆಚ್ಚುಗೆ ವ್ಯಕ್ತವಾಗಿದೆ.

ಸಚಿವರ ಅಂಗಡಿ ಭೇಟಿ ವೇಳೆ ಅವರ ಬೆಂಗಾವಲು ಸಿಬ್ಬಂದಿ, ಮುಖಂಡರು ಸ್ಥಳದಲ್ಲಿದ್ದರು. ಅಂಗಡಿಯಲ್ಲಿ ಚಹಾ ಪಡೆದು ಎಲ್ಲರು ಸವಿದಿದ್ದಾರೆ. ಅಂಗಡಿಯ ಕಟ್ಟೆ ಮೇಲೆ ಕುಳಿತ ಸಚಿವ ಪರಮೇಶ್ವರ ಅವರು, ಅಂಗಡಿ ಮಾಲೀಕರನ್ನು ಮಾತನಾಡಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಅಂಗಡಿಗೆ ಎಂದಿನಂತೆ ಬರುವ ಸ್ಥಳೀಯ ಗ್ರಾಹಕರೊಟ್ಟಿಗೆ ಕೂತ ರಾಜಕೀಯ ವಿದ್ಯಮಾನಗಳನ್ನು ಮಾತನಾಡಿದ್ದಾರೆ. ಕೆಲ ಹೊತ್ತು ಅಲ್ಲಿ ಇದ್ದು, ಬಳಿಕ ಅಲ್ಲಿಂದ ಅವರು ಬೆಂಗಳೂರಿಗೆ ತೆರಳಿದ್ದಾರೆ.
ಮಂಗಳವಾರ ತುಮಕೂರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆದಿತ್ತು. ಮಹಿಳಾ ಕಾರ್ಯರ್ತರ ಸಭೆ ಇಆಗಿದ್ದು, ಅಲ್ಲಿ ಮಹಿಳೆಯುರನ್ನು ಸರ್ಕಾರ ಸಮಾನವಾಗಿ ಕಾಣುತ್ತಿರುವುದು, ಅವರಿಗಾಗಿ ಸರ್ಕಾರ ತಂದ ಯೋಜನೆಗಳು ಕುರಿತು ಗೃಹ ಸಚಿವರು ಮಾತನಾಡಿದ್ದರು. ಈ ಸಭೆ ಸೇರಿದಂತೆ ಜಿಲ್ಲೆಯಲ್ಲಿನ ರಾಜಕೀಯ ಕಾರ್ಯಕ್ರಮ ಮುಗಿಸಿ ಬರುವಾಗ ಈ ಚಹಾ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ.












Click it and Unblock the Notifications