ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿ

|
Google Oneindia Kannada News

ತುಮಕೂರು, ಸೆಪ್ಟೆಂಬರ್ 25 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪಾವಗಡದ ಸೋಲಾರ್ ಪಾರ್ಕ್ ಕಾಮಗಾರಿಯನ್ನು ಪರಿಶೀಲಿಸಿದರು. ನವೆಂಬರ್ ತಿಂಗಳ ವೇಳೆಗೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿಯಲ್ಲಿ ಸೋಲಾರ್ ಪಾರ್ಕ್‌ ನಿರ್ಮಾಣವಾಗುತ್ತಿದೆ. ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಪಾರ್ಕ್ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿದೆ.

ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62

2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ದೊಡ್ಡ ಸೋಲಾರ್ ಪಾರ್ಕ್ ಇದಾಗಿದೆ. ಈ ಪಾರ್ಕ್‌ನಿಂದ ವಿದ್ಯುತ್ ಖರೀದಿ ಮಾಡಲು ರಾಜ್ಯದ ವಿದ್ಯುತ್ ಸರಬರಾಬು ಕಂಪನಿಗಳು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿವೆ.

ನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆ

ಸೋಲಾರ್ ಮತ್ತು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸುವ ಹೈಬ್ರಿಡ್ ಪಾರ್ಕ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಪ್ರಸ್ತಾವನೆ ಸಲ್ಲಿಸಿದೆ. ವೆಂಕಟಮ್ಮನಹಳ್ಳಿಯಲ್ಲಿ ರೈತರು 600 ಎಕರೆ ಜಮೀನು ನೀಡಲು ಮುಂದೆ ಬಂದಿದ್ದು, ಈ ಜಾಗದಲ್ಲಿ ಹೈಬ್ರಿಡ್ ಪಾರ್ಕ್ ನಿರ್ಮಾಣವಾಗಲಿದೆ.

ಎಚ್ಡಿಕೋಟೆ ಹಳ್ಳಿಗಳಲ್ಲಿ 'ಸೌರ ಬೆಳಕು' ಆದರ್ಶ ಯೋಜನೆಎಚ್ಡಿಕೋಟೆ ಹಳ್ಳಿಗಳಲ್ಲಿ 'ಸೌರ ಬೆಳಕು' ಆದರ್ಶ ಯೋಜನೆ

400 ಕೋಟಿ ಅನುದಾನ ನೀಡಿದ ಕೇಂದ್ರ

400 ಕೋಟಿ ಅನುದಾನ ನೀಡಿದ ಕೇಂದ್ರ

ಪಾವಗಡದ ಸೋಲಾರ್ ಪಾರ್ಕ್ ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ 400 ಕೋಟಿ ರೂ. ಅನುದಾನ ನೀಡಿದೆ. 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನು ಇದು ಹೊಂದಿದೆ.

600 ಮೆಗಾವಾಟ್ ವಿದ್ಯುತ್

600 ಮೆಗಾವಾಟ್ ವಿದ್ಯುತ್

ಈ ಸೋಲಾರ್ ಪಾರ್ಕ್ ಕಾಮಗಾರಿ 2018ರಲ್ಲಿ ಪೂರ್ಣಗೊಂಡು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ನಿರೀಕ್ಷೆ ಇದೆ. 2017ರ ನವೆಂಬರ್ ತಿಂಗಳ ವೇಳೆಗೆ 600 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿದೆ.

25 ಸಾವಿರ ಬಾಡಿಗೆ ಪಾವತಿ

25 ಸಾವಿರ ಬಾಡಿಗೆ ಪಾವತಿ

ಸೋಲಾರ್ ಪಾರ್ಕ್‌ಗಾಗಿ ಪಾವಗಡ ತಾಲೂಕಿನ ರಾಯಚೆರ್ಲು, ತಿರುಮಣಿ, ವೆಂಕಟಮ್ಮನಹಳ್ಳಿಯ ರೈತರ 12 ಸಾವಿರ ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಈ ಪೈಕಿ 9 ಸಾವಿರ ಎಕರೆ ಬಳಕೆ ಮಾಡಿಕೊಳ್ಳಲು ರೈತರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಎಕರೆಗೆ ವರ್ಷಕ್ಕೆ ತಲಾ 25 ಸಾವಿರ ರೂ. ಬಾಡಿಗೆ ಪಾವತಿ ಮಾಡಲಾಗುತ್ತದೆ.

ಹೆಚ್ಚುವರಿ ಖರೀದಿ ಬಗ್ಗೆ ಹಂತ-ಹಂತದ ಒಪ್ಪಂದ

ಹೆಚ್ಚುವರಿ ಖರೀದಿ ಬಗ್ಗೆ ಹಂತ-ಹಂತದ ಒಪ್ಪಂದ

ಈ ಪಾರ್ಕ್‌ನಿಂದ ವಿದ್ಯುತ್ ಖರೀದಿ ಮಾಡಲು ರಾಜ್ಯದ 5 ವಿದ್ಯುತ್ ಸರಬರಾಬು ಕಂಪನಿಗಳು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿವೆ. ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲು ಹಂತ-ಹಂತವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಸೆ.28ರಂದು ಸಿದ್ದರಾಮಯ್ಯ ಭೇಟಿ

ಸೆ.28ರಂದು ಸಿದ್ದರಾಮಯ್ಯ ಭೇಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.28ರಂದು ಸೋಲಾರ್ ಪಾರ್ಕ್‌ಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ.

English summary
Karnataka Energy minister DK Shiva Kumar inspected Tumakuru district Pavagada solar park work. The Pavagada solar park, which is the word's biggest is coming up on nearly 12,000 acres of land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X