ಎಂ.ಬಿ.ಪಾಟೀಲರಿಗೆ ಡಿಸಿಎಂ ಸ್ಥಾನ ಕೊಡಲ್ಲ ಎಂದ ಕಾಂಗ್ರೆಸ್ ಸಚಿವ

ತುಮಕೂರು, ಜೂನ್ 11: ಸಂಪುಟ ವಿಸ್ತರಣೆ ಬಗ್ಗೆ ಅತೃಪ್ತ ವ್ಯಕ್ತಪಡಿಸುತ್ತಿರುವ ಎಂ.ಬಿ.ಪಾಟೀಲರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಪ್ರಶ್ನೆಯೇ ಇಲ್ಲ . ಇಂಥ ಎಂ.ಬಿ.ಪಾಟೀಲ್ ಅಂತವರು ಏನೇ ಮಾಡಿದರೂ ಈ ಮೈತ್ರಿ ಸರಕಾರಕ್ಕೆ ತೊಂದರೆ ಇಲ್ಲ. ಐದು ವಷ೯ಗಳ ಕಾಲ ಸರಕಾರ ಸುಭದ್ರವಾಗಿ ಇರಲಿದೆ ಎಂದು ಕಾಮಿ೯ಕ ಸಚಿವ ವೆಂಕಟರಮಣಪ್ಪ ಸೋಮವಾರ ತುಮಕೂರಿನಲ್ಲಿ ಹೇಳಿದರು.

ತುಮಕೂರಿನ ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಹಳೇ ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ವೆಂಕಟರಮಣಪ್ಪ ಮಾಧ್ಯಮ ಹೇಳಿಕೆ ನೀಡಿದರು. ಕಾರ್ಮಿಕ ಖಾತೆ ನನಗೆ ತೃಪ್ತಿ ತಂದಿದೆ. ಬಡವರಿಗೆ ಸಹಾಯ ಮಾಡುವ ಖಾತೆ ಇದು. ಹಾಗಾಗಿ ತೃಪ್ತಿ ತಂದಿದೆ. ಅಭಿವೃದ್ಧಿ ಎಂಬುದು ಖಾತೆಯಿಂದ ಮಾತ್ರವಲ್ಲ ಶಾಸಕನಾಗಿಯೂ ಮಾಡಬಹುದು ಎಂದು ಹೇಳಿದರು.

ಬರಪೀಡಿತ ತಾಲೂಕಾದ ಪಾವಗಡಕ್ಕೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಸಣ್ಣ ಕೈಗಾರಿಕೆಗಳು ಹಾಗೂ ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ಕೊಡುತ್ತೇವೆ ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ ಎಂದರು.

DCM post will not given to MB Patil, said minister Venkataramanappa

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲೆಗುಂಪಾಗಿಲ್ಲ. ಅವರೂ ನಮ್ಮ ನಾಯಕರೇ ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+