ತುಮಕೂರಲ್ಲಿ ಟೆಕ್ಕಿಗಳ ವೆಬ್ ಸೈಟ್ ಹೊಸ ದಾಖಲೆ
ತುಮಕೂರು, ಏ.12: ತುಮಕೂರು ಬಳಿಯ ಅಕ್ಷಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆಶ್ರಯದಲ್ಲಿ 8 ಜನರ ಯುವಕರ ತಂಡ 14 ಗಂಟೆಗಳಲ್ಲಿ 36 ವೆಬ್ ಸೈಟ್ ಗಳನ್ನು ಸಿದ್ಧಪಡಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ಸಜ್ಜಾಗಿದ್ದಾರೆ.
ಎಂಟು ಜನರ ತಂಡ 1 ಗಂಟೆ 17 ನಿಮಿಷ ವಿಶ್ರಾಂತಿ ಸೇರಿ ಕೇವಲ 14 ಗಂಟೆಗಳಲ್ಲಿ ಈ ವೆಬ್ ಸೈಟ್ ಗಳನ್ನು ಸಿದ್ಧ ಮಾಡಿದೆ. ಇದರ ಅಂಗವಾಗಿ ಅಕ್ಷಯ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ, ಸಬ್‍ಇನ್ಸ್ ಪೆಕ್ಟರ್ ಶೇಷಾದ್ರಿ, ಅಕ್ಷಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಮಂಜುನಾಥ್, ಆಡಳಿತಾಧಿಕಾರಿ ಆರ್.ಸಿ. ಶಿವಮೂರ್ತಿ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಇರ್ಫಾನ್ ಹಾಜರಿದ್ದು ಶುಭ ಕೋರಿದರು.

ತುಮಕೂರಿನ ಪ್ರತೀಕ್ ಜೈನ್, ಅಮೀಶ್ ಜೈನ್, ಅಕ್ಷಿತ್, ನರೇಂದ್ರ ಹಾಗೂ ಚೆನ್ನೈನ ಮೋಹಿತ್ ಜೈನ್, ವೀಕೇಶ್, ಪದ್ಮನಾಭನ್, ಅರುಣಾಚಲಂ ಅವರು ಈ ಕಾರ್ಯಕ್ರಮದಲ್ಲಿ ತೊಡಗಿ ಯಶಸ್ವಿಯಾದರು. ಆರು ಜನ ಉಪನ್ಯಾಸಕರು ಈ ಕಾರ್ಯದ ವೀಕ್ಷಕರಾಗಿದ್ದರು.

ಕೇವಲ ರು.1008 ಗಳಲ್ಲಿ ವೆಬ್ ಸೈಟ್ (ಡೊಮೈನ್, ವೆಬ್ ಹೋಸ್ಟಿಂಗ್, ಡಿಸೈನಿಂಗ್) ಮಾಡಿರುತ್ತೇವೆ. ಈ ಪರಿಕಲ್ಪನೆಯು ಮೋಹಿತ್ ಜೈನ್ (ಚೆನ್ನೈ) ಮತ್ತು ಪ್ರತೀಕ್ ಜೈನ್ (ತುಮಕೂರು) ಇವರದ್ದಾಗಿರುತ್ತದೆ. (ಒನ್ಇಂಡಿಯಾ ಕನ್ನಡ)












Click it and Unblock the Notifications