Copra Price: ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿಗೆ ಬಲು ಡಿಮ್ಯಾಂಡ್, ವಾರದ ಅವಧಿಯಲ್ಲಿ ಮೂರು ಬಾರಿ ದಾಖಲೆಯ ಏರಿಕೆ

Copra Price: ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿಯಲ್ಲಿ ಉಂಡೆ ಕೊಬ್ಬರಿ ಬೆಲೆ ಹಿಂದೆಂದಿಗಿಂತಲೂ ಭಾರಿ ಏರಿಕೆಯಾಗಿದೆ. ಕೇವಲ ಒಂದೇ ವಾರದಲ್ಲಿ ಮೂರು ಬಾರಿ ದಾಖಲೆ ಮಟ್ಟದಲ್ಲಿ ಬೆಲೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಗಾದ್ರೆ ಯಾವಾಗ ಎಷ್ಟಾಯ್ತು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ವಾರದ ಅವಧಿಯಲ್ಲಿ ಮೂರು ಬಾರಿ ಏರಿಕೆಯಾಗಿರುವುದು ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಏಪ್ರಿಲ್ 6ರಂದು ಕ್ವಿಂಟಲ್ ಕೊಬ್ಬರಿ ಧಾರಣೆ ₹32,218 ಇದ್ದರೆ, ಏಪ್ರಿಲ್ 9ರಂದು ₹36,006ಕ್ಕೆ ಜಿಗಿತ ಕಂಡಿದೆ ಹಾಗೂ ಏಪ್ರಿಲ್ 13ರಂದು ಐತಿಹಾಸಿಕ ದಾಖಲೆ ಬೆಲೆ ₹38,000ಕ್ಕೆ ಮಾರಾಟವಾಗಿದೆ.

Copra Prices Surge to Record High in Tiptur APMC for 3 Time in just one week Know Complete Details

ವಾರದ ಅವಧಿಯಲ್ಲೇ ಮೂರು ಬಾರಿ ಏರಿಕೆ

* ಏಪ್ರಿಲ್ 6ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿಗೆ ಗರಿಷ್ಠ ಧಾರಣೆ ₹32,218, ಮಾದರಿ ದರ ₹31,860 ಹಾಗೂ ಕನಿಷ್ಠ ದರ ₹30,000 ದಾಖಲಾಗಿತ್ತು.

* ಏಪ್ರಿಲ್ 9ರಂದು ಕೇವಲ ಮೂರು ದಿನಗಳ ಅಂತರದಲ್ಲಿ ಸುಮಾರು 4,000 ರೂಪಾಯಿಗಳ ಏರಿಕೆ ಕಂಡುಬಂದಿತು. ಗರಿಷ್ಠ ಬೆಲೆ ₹36,006ಕ್ಕೆ ಮುಟ್ಟಿತ್ತು. ಮಾದರಿ 32,000 ರೂಪಾಯಿ, ಕನಿಷ್ಠ ಬೆಲೆ 30,500 ಇತ್ತು.

* ಏಪ್ರಿಲ್ 13 ನಡೆದ ಹರಾಜಿನಲ್ಲಿ ಉಂಡೆ ಕೊಬ್ಬರಿ ಬೆಲೆ ಬರೋಬ್ಬರಿ ₹38,000ಕ್ಕೆ ಏರುವ ಮೂಲಕ ಇತಿಹಾಸದಲ್ಲೇ ಅತ್ಯಧಿಕ ಬೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕಳೆದ ವರ್ಷ ಅಂದರೆ 2025ರ ಜೂನ್ 30ರಂದು ಪ್ರತಿ ಕ್ವಿಂಟಲ್‌ಗೆ ₹31,606ಕ್ಕೆ ಮಾರಾಟವಾಗಿದ್ದೇ ಗರಿಷ್ಠ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಮುರಿದು ಕೊಬ್ಬರಿ ದರ ಹೊಸ ದಾಖಲೆ ಬರೆಯುತ್ತಲಿದೆ. ಈ ಬೆಲೆ ಏರಿಕೆಯ ಹಿಂದೆ ಪ್ರಮುಖವಾಗಿ ಆವಕದ ಕೊರತೆ ಎದ್ದು ಕಾಣುತ್ತಿದೆ. ತಜ್ಞರ ಪ್ರಕಾರ, ಕಳೆದ ವರ್ಷ ಮಳೆ ಕೊರತೆ ಮತ್ತು ಕೀಟಬಾಧೆಯಿಂದಾಗಿ ತೆಂಗಿನ ಇಳುವರಿ ಗಣನೀಯವಾಗಿ ಕಡಿಮೆಯಾಗಿದ್ದು, ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು

* ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕೊಬ್ಬರಿಗೆ ಬೇಡಿಕೆ ಹೆಚ್ಚಿದೆ, ಆದರೆ ಅದಕ್ಕೆ ತಕ್ಕಂತೆ ಸರಬರಾಜು ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.

* ತೆಂಗು ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಕಳೆದ ಸೀಸನ್‌ನಲ್ಲಿ ಮಳೆ ಕೊರತೆ ಅಥವಾ ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕುಸಿದಿದೆ. ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿಯ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ನೇರ ಕಾರಣವಾಗಿದೆ.

* ಸ್ಥಳೀಯ ಮಾರುಕಟ್ಟೆಗಳ ಜೊತೆಗೆ ಹೊರರಾಜ್ಯಗಳಲ್ಲಿಯೂ (ವಿಶೇಷವಾಗಿ ಉತ್ತರ ಭಾರತದಲ್ಲಿ) ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಇದೆ. ಹಬ್ಬಗಳು ಮತ್ತು ಶುಭ ಸಮಾರಂಭಗಳ ವೇಳೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

* ರೈತರು ಮತ್ತು ವ್ಯಾಪಾರಸ್ಥರ ಬಳಿ ಇದ್ದ ಹಳೆಯ ಕೊಬ್ಬರಿಯ ದಾಸ್ತಾನುಗಳು ಬಹುತೇಕ ಖಾಲಿಯಾಗಿವೆ. ಹೊಸ ಕೊಬ್ಬರಿ ಮಾರುಕಟ್ಟೆಗೆ ಬರಲು ಸಮಯ ಹಿಡಿಯುತ್ತಿರುವುದರಿಂದ ಲಭ್ಯವಿರುವ ಸ್ಟಾಕ್‌ಗೆ ಹೆಚ್ಚಿನ ಬೆಲೆ ಸಿಗುತ್ತಿದೆ.

* ತಿಪಟೂರು ಕೊಬ್ಬರಿ ತನ್ನ ವಿಶೇಷ ರುಚಿ ಮತ್ತು ಬಾಳಿಕೆಗೆ ಹೆಸರುವಾಸಿ. ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ 'ಗ್ರೇಡ್-1' ಕೊಬ್ಬರಿಯ ಕೊರತೆ ಇರುವುದರಿಂದ, ಸಿಗುತ್ತಿರುವ ಗುಣಮಟ್ಟದ ಈ ಕೊಬ್ಬರಿಗೆ ವ್ಯಾಪಾರಸ್ಥರು ಪೈಪೋಟಿಯ ಮೇಲೆ ಹೆಚ್ಚಿನ ದರ ನೀಡಿ ಖರೀದಿಸುತ್ತಿದ್ದಾರೆ.

* ಎಪಿಎಂಸಿ ಹರಾಜು ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಕಡಿಮೆ ಮತ್ತು ರೈತರು ಬೆಲೆ ಏರುವವರೆಗೂ ಕಾಯುವ ತಾಳ್ಮೆ ತೋರುತ್ತಿರುವುದು ಕೂಡ ದರ ಏರಿಕೆಗೆ ಕಾರಣವಾಗಿದೆ.

* ತೆಂಗಿನ ಎಣ್ಣೆ ಮತ್ತು ಇತರ ಉಪ ಉತ್ಪನ್ನಗಳಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವುದು ಸಹ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದೆ.

* ಅದರಲ್ಲೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಬೆಳೆಗಾರರು ಕೊಬ್ಬರಿ ಆಗುವವರೆಗೂ ಬಿಡದೇ, ಎಳನೀರು ಕಾಯಿಯನ್ನೇ ಮಾರಾಟ ಮಾಡುತ್ತಿದ್ದಾರೆ. ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಅಂದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಹೇಳುವುದಾದರೆ, ಕಳೆದ ಕೆಲವು ವರ್ಷಗಳಿಂದ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತಿಪಟೂರು ಮತ್ತು ಸುತ್ತಮುತ್ತಲಿನ ತಲ್ಲೂಕುಗಳ ಬೆಳೆಗಾರರಿಗೆ ಬೆಲೆ ಏರಿಕೆಯಿಂದ ಆನೆಯ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ಕೊಬ್ಬರಿ ಸಂಗ್ರಹದತ್ತ ಗಮನ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+