ಮೈತ್ರಾದೇವಿ ಹೆಸರಿನ ಕಲ್ಯಾಣ ಮಂಟಪ ಉದ್ಘಾಟಿಸಿದ ಯಡಿಯೂರಪ್ಪ
ತುಮಕೂರು, ಅಕ್ಟೋಬರ್ 13: ಪತ್ನಿ ಮೈತ್ರಾದೇವಿಯವರ ಹೆಸರಿನಲ್ಲಿ ಯಡಿಯೂರಿನಲ್ಲಿ ಬಡವರಿಗೆ ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ಬಹಳ ದಿನ ಕನಸು ನನಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತುಮಕೂರು ಜಿಲ್ಲೆಯ ಯಡಿಯೂರಿನಲ್ಲಿ ಪತ್ನಿಯ ಹೆಸರಿನ ಕಲ್ಯಾಣ ಮಂಟಪವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಂಕೇತಿಕವಾಗಿ ಹಣ ಕೊಟ್ಟು ಬಡವರು ಮದುವೆ ಮಾಡಿಕೊಳ್ಳಲು, ಸಾಮೂಹಿಕ ಕಲ್ಯಾಣವಾಗಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ. ಬಡವರಿಗಾಗಿ ಕಟ್ಟಿದ ಈ ಕಲ್ಯಾಣ ಭವನದಲ್ಲಿ ವರ್ಷದ 365 ದಿನವೂ ಮದುವೆ ಸಮಾರಂಭ ನಡೆದರೆ ನಮ್ಮ ಸೇವೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಭವನ ಹಿಂಭಾಗದಲ್ಲಿ ಅತಿಥಿ ಗೃಹ (ಗೆಸ್ಟ್‌ಹೌಸ್) ಕಟ್ಟಲು ತೀರ್ಮಾನಿಸಲಾಗಿದ್ದು, ಅದರ ಕಾಮಗಾರಿಯನ್ನು ಶ್ರೀಘ್ರವಾಗಿ ಆರಂಭಿಸುತ್ತೇವೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅವರು ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ. ಬಾದಾಮಿ ಎಂದು ಅರ್ಥವಾಗ್ತಿಲ್ಲ. ಅಲ್ಲಿ ಒಳ್ಳೆಯ ಕೆಲಸ ಮಾಡಿಲ್ಲವಾದ್ದರಿಂದ ಮುಂದೆ ಗೆಲ್ಲುವ ವಿಶ್ವಾಸ ಇಲ್ಲದೇ ಬೇರೆ ಕ್ಷೇತ್ರ
ಹುಡುಕುತ್ತಿದ್ದಾರೆ. ಹೀಗಾಗಿ ಅದಕ್ಕೆ ಟೀಕೆ ಟಿಪ್ಪಣಿ ಮಾಡುವುದಿಲ್ಲ, ಅದನ್ನು ಜನರೇ ನಿರ್ಧರಿಸುತ್ತಾರೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಆಮಂತ್ರಣ ಪತ್ರಿಕೆ ಮಾಡಿಲ್ಲ, ಆಹ್ವಾನಿಸಲಾಗಿದೆ: ಬಿಎಸ್‌ವೈ
ಅನಗತ್ಯವಾಗಿ ದೇವೇಗೌಡರನ್ನು ಆಹ್ವಾನಿಸಿಲ್ಲ ಎಂಬ ವಿಚಾರ ಚರ್ಚೆಯಾಗಿದೆ. ಆದರೆ ಇದನ್ನು ದೇವೇಗೌಡರು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ. ಯಾವುದಾದರೂ ಕಾರಣ ಇದ್ದ ಹಿನ್ನೆಲೆ ಅವರು ಪ್ರಗತಿ ಪ್ರತಿಮೆ ಅನಾವರಣಕ್ಕೆ ಬರಲು ಆಗಿಲ್ಲ ಎನ್ನಿಸುತ್ತದೆ. ಅದನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇನ್ನು ಟಿಪ್ಪು ಪ್ರತಿಮೆ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳಲಿದೆಯೋ ಎಂದು ಕಾದು ನೋಡೋಣ ಎಂದರು.

ದೇವೇಗೌಡರ ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ
ಅನಗತ್ಯವಾಗಿ ದೇವೇಗೌಡರನ್ನು ಆಹ್ವಾನಿಸಿಲ್ಲ ಎಂಬ ವಿಚಾರ ಚರ್ಚೆಯಾಗಿದೆ. ಆದರೆ ಇದನ್ನು ದೇವೇಗೌಡರು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ. ಯಾವುದಾದರೂ ಕಾರಣ ಇದ್ದ ಹಿನ್ನೆಲೆ ಅವರು ಪ್ರಗತಿ ಪ್ರತಿಮೆ ಅನಾವರಣಕ್ಕೆ ಬರಲು ಆಗಿಲ್ಲ ಎನ್ನಿಸುತ್ತದೆ. ಅದನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇನ್ನು ಟಿಪ್ಪು ಪ್ರತಿಮೆ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳಲಿದೆಯೋ ಎಂದು ಕಾದು ನೋಡೋಣ ಎಂದರು.

ವಿಧಾನಸೌಧದ ಮುಂದೆ ಬಸವಣ್ಣನ ಪ್ರತಿಮೆ
ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಸಚಿವ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ. ಆ ಬಗ್ಗೆ ಮುಖ್ಯಮಂತ್ರಿಗಳೇ ಬಹಿರಂಗವಾಗಿ ತಿಳಿಸಲಿದ್ದಾರೆ. ಯಡಿಯೂರಪ್ಪ ಹಿಂದೂ ಅಲ್ಲ ಎಂಬ ಮಾತಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆಮೇಲೆ ಜಾತಿ, ಉಪಪಂಗಡಗಳು. ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಎನ್ನುವಂತದ್ದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು. ಆ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಬೇಡ.

ಕಾಂಗ್ರೆಸ್ ಬಹುತೇಕರು ಹಿಂದು ಎಂದು ಒಪ್ಪಿಕೊಳ್ಳುತ್ತಾರೆ
ಕಾಂಗ್ರೆಸ್ ಪಕ್ಷ ಶೇ. 90ರಷ್ಟು ನಾಯಕರು ಕೂಡ ನಾವು ಮೊದಲು ಹಿಂದೂಗಳು ಎಂಬು ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಈ ಸಂಗತಿಯನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಮುಂದೆ ಹೋಗಬೇಕು. ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಅವರಿಗೆ ಪಕ್ಷದಿಂದ ಟಿಕೆಟ್ ಕೊಡುವುದಾಗಿ ನಾವು ಯಾರಿಗೂ ಭರವಸೆ ನೀಡಿಲ್ಲ. ಟಿಕೆಟ್ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರಿಸಿದರು.












Click it and Unblock the Notifications