ರಾಷ್ಟ್ರಧ್ವಜದಲ್ಲಿ ಕಟ್ಟಿದ ವಾಮಾಚಾರದ ವಸ್ತುಗಳು ತಿಪಟೂರಲ್ಲಿ ಪತ್ತೆ
ತಿಪಟೂರು, ಜುಲೈ 17 : ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲ್ದೂರಿನಲ್ಲಿ ವಾಮಾಚಾರ ಮಾಡಿರುವುದು ಪತ್ತೆಯಾಗಿದ್ದು, ಅದಕ್ಕೆ ರಾಷ್ಟ್ರಧ್ವಜವನ್ನು ಬಳಸಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ಧ್ವಜವನ್ನು ಹರಿದು, ಅದರೊಳಗೆ ಕುಡಿಕೆ, ನಿಂಬೆಹಣ್ಣು, ಅರಿಶಿಣ-ಕುಂಕುಮ ಮುಂತಾದ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಕಟ್ಟಿದ್ದು, ಇಂಥ ಕೆಲಸ ಮಾಡುವುದೇ ನೀಚ ಕೃತ್ಯ. ಅದರಲ್ಲೂ ರಾಷ್ಟ್ರಧ್ವಜವನ್ನು ಅದಕ್ಕಾಗಿ ಬಳಕೆ ಮಾಡಿರುವುದರಿಂದ ಮತ್ತೂ ಕೋಪಕ್ಕೆ ಕಾರಣವಾಗಿದೆ.

ಕೆಲವು ಧೈರ್ಯವಂತ ಯುವಕರು ಧ್ವಜದಿಂದ ಮುಚ್ಚಿದ್ದ ವಸ್ತುಗಳನ್ನೆಲ್ಲ ಬೇರ್ಪಡಿಸಿ, ವಿಡಿಯೋವೊಂದನ್ನು ಕೂಡ ಮಾಡಿದ್ದು, ಇದರ ಹಿಂದೆ ಇರುವ ವ್ಯಕ್ತಿಗಳ ಬಂಧನಕ್ಕೆ ಆಗ್ರಹ ಮಾಡಿದ್ದಾರೆ. ಆಲ್ದೂರು ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ಜಿಲ್ಲೆಯಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು ನಿರ್ದಿಷ್ಟ ಕೋಮಿನ ಬಗ್ಗೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ವಾಮಾಚಾರದಂಥ ಮೂಢನಂಬಿಕೆಗೆ ಪ್ರಾಶಸ್ತ್ಯ ಕೊಡಬಾರದು ಎಂಬ ಸಾಮಾನ್ಯ ತಿಳಿವಳಿಕೆ ಇದ್ದರೂ ವೈಯಕ್ತಿಕ ನೆಲೆಯಲ್ಲಿ ನಂಬಿಕೆ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ.

ಈ ಬಗ್ಗೆ ತನಿಖೆಯೊಂದನ್ನು ಮಾಡಿ, ತಪ್ಪಿತಸ್ಥರ ಬಂಧಿಸಬೇಕು. ಜನರಲ್ಲಿನ ಅತಂಕವನ್ನು ನಿವಾರಿಸಬೇಕು.












Click it and Unblock the Notifications