ನೆಲೆಯಿಲ್ಲದ ಕ್ಷೇತ್ರದಲ್ಲಿ ಖಂಡಿತವಾಗಿ ಈ ಬಾರಿ ಕೇಸರಿ ಅರಳಲಿದೆ!

ಬೆಂಗಳೂರು, ನ. 03: ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ಮತದಾನ ಮಾಡಿದ್ದಾರೆ. ಶಿರಾ ತಾಲೂಕಿನ ಚಿರತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಮತದಾನ ಮಾಡಿದರು. ಅದಕ್ಕೂ ಮೊದಲು ಆಂಜನೇಯ ಹಾಗೂ ಕರಿಯಮ್ಮ ದೇವಿಗೆ ಪೂಜೆ ನೆರವೇರಿಸಿದರು.

ಮತದಾನದ ಬಳಿಕ ಮಾತನಾಡಿದ ಡಾ. ರಾಜೇಶ್‌ಗೌಡ ಅವರು ಚುನಾವಣೆಯಲ್ಲಿ ಬಿಜೆಪಿ ನಾಯಕರ ಸಹಕಾರ ಸಂಪೂರ್ಣವಾಗಿ ಸಿಕ್ಕಿದೆ. ಕ್ಷೇತ್ರದ ಮತದಾರರು‌ ನನ್ನ ಕೈಹಿಡಿಯುವ ವಿಶ್ವಾಸವಿದೆ. ಹೀಗಾಗಿ ಹೆಚ್ಚಿನ ಮತಗಳ ಹಂತರದಿಂದ ನಾನು‌ ಗೆಲ್ಲುತ್ತೇನೆ. ಅಭಿವೃದ್ಧಿ ಕಾರ್ಯಗಳ ಗುರಿಯಿಟ್ಟುಕೊಂಡೇ ನಾನು ಬಂದಿದ್ದೇನೆ. ಎಲ್ಲಾ ಸಮುದಾಯಗಳು ನಮ್ಮ ಕೈಹಿಡಿಯಲಿವೆ.

ಅನುಕಂಪ, ಹಿರಿತನ ಎಲ್ಲದಕ್ಕಿಂತ ಅಭಿವೃದ್ಧಿಯೆ ಮುಖ್ಯವಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಮಾಡಲು ನಾನು ಬದ್ಧನಿದ್ದೇನೆ. ಹಣಬಲ, ತೋಳ್ಬಲ ಎಂಬುವುದೆಲ್ಲ ಸುಳ್ಳು

BJP candidate Dr Rajesh Gowda voted in higher primary school in Chirathanahalli

ಅಂತಹ ಯಾವುದೇ ಪ್ರಯತ್ನವನ್ನು ನಾವು ಮಾಡಿಲ್ಲ. ರಾಜಕಾರಣ ನನಗೆ ಹೊಸದೇನಲ್ಲ. ನೆಲೆಯಿಲ್ಲದ ಕ್ಷೇತ್ರದಲ್ಲಿ ಖಂಡಿತ ಕೇಸರಿ ಮೊಳಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+