ತುಮಕೂರು:ತೋಟದಲ್ಲಿ ನೀರು ಹಾಯಿಸುತ್ತಿದ್ದ ಯುವಕನ ಮೇಲೆ ಕರಡಿ ದಾಳಿ

ತುಮಕೂರು, ಜು.28: ತುಮಕೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಜಮೀನಿನಲ್ಲಿ ನೀರು ಹರಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗದಲ್ಲಿ ಈ ಘಟನೆ ನಡೆದಿದೆ, ದಿನೇಶ್‌(23) ದಾಳಿಗೆ ಒಳಗಾದವರು. ದಿನೇಶ್‌ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಕೊರಟಗೆರೆ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವಂತಾಗಿದೆ, ಚಿರತೆ, ಕರಡಿ, ಆನೆಯ ದಾಳಿಗಳು ಇಲ್ಲಿಯ ಜನಕ್ಕೆ ಹೊಸತೇನಲ್ಲ ಎನ್ನುವಂತಾಗಿದೆ.

Bear attacks man near Koratagere

ಕೊರಟಗೆರೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಾಲೆಗೆ ಹೋಗುವ ಪುಟ್ಟ ಮಕ್ಕಳಿದ್ದಾರೆ, ವೃದ್ಧರಿದ್ದಾರೆ ಏಕಾಏಕಿ ಪ್ರಾಣಿಗಳು ಕಾಡಿನಂದ ಬಂದರೆ ನಮ್ಮ ಗತಿಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+