ತುಮಕೂರು ಸಿದ್ಧಗಂಗಾ ಶ್ರೀ ಆಶೀರ್ವಾದ ಪಡೆದ ಅಣ್ಣಾ ಹಜಾರೆ
ತುಮಕೂರು, ಜ. 25: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭಾನುವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಅಣ್ಣಾ ಹಜಾರೆ, ಸಮಾಜದಲ್ಲಿ ಬದಲಾವಣೆ ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಯಿಂದಲೇ ಬದಲಾವಣೆ ಸಾಧ್ಯ. ಅಂಥ ಕೆಲಸವನ್ನು ಸಿದ್ಧಗಂಗಾ ಮಠ ಮಾಡುತ್ತಿದೆ ಎಂದು ಶ್ಲಾಘಿಸಿದರು.[ಕೆಲವರಿಗೆ ಜೈಲಿಗೆ ಹೋಗುವುದು ಫ್ಯಾಷನ್: ಅಣ್ಣಾ ಹಜಾರೆ]

ಮಕ್ಕಳೊಂದಿಗೆ ಬೆರೆತ ಅಣ್ಣಾ ಮಠದ ಸಾಮಾಜಿಕ ಸೇವೆಯನ್ನು ಎಲ್ಲ ಸಂಘ ಸಂಸ್ಥೆಗಳು ಮಾದರಿಯಾಗಿ ಸ್ವೀಕರಿಸಬೇಕಿದೆ. ದೇಶಲ್ಲಿಯೇ ಶಿಕ್ಷಣಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವುದು ಸಿದ್ಧಗಂಗಾ ಮಠ ಎಂದು ಹೇಳಿದರು. ಸ್ವಾಮೀಜಿಗಳಿಗೆ ದೇವರು ಇನ್ನು ಹೆಚ್ಚಿನ ಆರೋಗ್ಯ ಮತ್ತು ಶಕ್ತಿ ನೀಡಲಿ. ಅವರ ಸಮಾಜ ಸೇವೆ ಇಡೀ ದೇಶಕ್ಕೆ ವ್ಯಾಪಿಸಲಿ ಎಂದು ಆಶಿಸಿದರು.[ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]
ಕೇಜ್ರಿವಾಲ್ ಮತ್ತು ಕಿರಣ್‌ಬೇಡಿ ಇಬ್ಬರ ಬಗ್ಗೆಯೂ ಅಪಾರವಾದ ಗೌರವವಿದೆ. ದೆಹಲಿಯ ಜನತೆ ಯಾರಿಗೆ ಬೆಂಬಲ ವ್ಯಕ್ತಪಡಿಸುತ್ತಾರೋ ಅದು ಅವರಿಗೆ ಬಿಟ್ಟಿದ್ದು, ಮಾಧ್ಯಮದವರು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ ಎಂದು ಹೇಳಿದರು.
Dono humare karyakarta hain na? Mukhyamantri ban gaye to achi baat hai: Anna Hazare on Kiran Bedi & Arvind Kejriwal pic.twitter.com/xG0pP7mQBU
— ANI (@ANI_news) January 25, 2015 











Click it and Unblock the Notifications