Vijayalakshmi Darshan: ವಿಜಯಲಕ್ಷ್ಮೀ ದರ್ಶನ್ ಹೊಸ ಫೋಟೋ ವೈರಲ್: “ನಮ್ಮ ಅತ್ತಿಗೆ ದೇವತೆ” ಎಂದ ದರ್ಶನ್ ಅಭಿಮಾನಿಗಳು
Vijayalakshmi Darshan: ನಟ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮೀ ದರ್ಶನ್ ಅವರು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ ಲಕ್ಷ್ಮೀ ದರ್ಶನ್ ಅವರು ಮಿಂಚಿದ್ದಾರೆ. ಈ ಫೋಟೋಗಳಿಗೆ ದರ್ಶನ್ ಅವರ ಅಭಿಮಾನಿಗಳು ನಮ್ಮ ಅತ್ತಿಗೆ ಸೂಪರ್, ದೇವತೆ ಎಂದು ಕಮೆಂಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿಲುಕಿದ್ದಾರೆ. ಜಾಮೀನು ಕೋರಿ ನಟ ದರ್ಶನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ನಡುವೆ ನಟ ದರ್ಶನ್ ಅವರ ರಾಜಕೀಯ ಪ್ರವೇಶದ ಬಗ್ಗೆಯೂ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ವಿಜಯ್ ಅವರು ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲೂ ಯಾವ ನಟರು ರಾಜಕೀಯಕ್ಕೆ ಪ್ರವೇಶಿಸಿದರೆ ಮುಖ್ಯಮಂತ್ರಿ ಯಾಗಬಹುದು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಅದರಲ್ಲಿ ನಟ ದರ್ಶನ್ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಅಲ್ಲದೆ ಸುದೀಪ್ ಹಾಗೂ ಯಶ್ ಅವರ ಹೆಸರು ಸಹ ಹಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚರ್ಚೆಗಳ ನಡುವೆ ವಿಜಯ ಲಕ್ಷ್ಮೀ ಅವರ ಪೋಸ್ಟ್ ಜನರ ಗಮನ ಸೆಳೆದಿದೆ.

ವಿಜಯಲಕ್ಷ್ಮೀ ಅವರು ಲಕ್ಷಣವಾಗಿ ಸೀರೆಯನ್ನುಟ್ಟು, ಮಲ್ಲಿಗೆ ಹೂ ಮುಡಿದು ವಜ್ರಖಚಿತ ಚಿನ್ನದ ಆಭರಣಗಳನ್ನ ಧರಿಸಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಚಂದದ ಸೀರೆಯನ್ನುಟ್ಟು ಕ್ಯಾಮರಾಗೆ ವಿಜಯಲಕ್ಷ್ಮೀ ದರ್ಶನ್ ಅವರು ಪೋಸ್ ಕೊಟ್ಟಿದ್ದು, ಫೋಟೋಗಳು ವೈರಲ್ ಆಗುತ್ತಿವೆ. ವಿಜಯಲಕ್ಷ್ಮೀ ದರ್ಶನ್ ಅವರ ಹೊಸ ಫೋಟೋಗಳನ್ನು ನೋಡಿ ದರ್ಶನ್ ಅಭಿಮಾನಿಗಳು ನಮ್ಮ ಅತ್ತಿಗೆ ದೇವತೆ ಅಂತ ಹೇಳಿದ್ದಾರೆ.
ವಿಜಯಲಕ್ಷ್ಮೀ ಅವರು ರೇಷ್ಮೆ ಸೀರೆಯನ್ನುಟ್ಟ ಕಂಗೊಳಿಸಿದ್ದಾರೆ. ಚಿನ್ನ ಮತ್ತು ನೀಲಿ ಬಣ್ಣ ಮಿಶ್ರಿತವಿರುವ ರೇಷ್ಮೆ ಸೀರೆ ಧರಿಸಿದ್ದಾರೆ. ಕಿವಿಗೆ ಜುಮುಕಿ, ಕತ್ತಿಗೆ ನೆಕ್‌ಲೆಸ್, ಕೈಗೆ ಬಳೆಗಳನ್ನು ತೊಟ್ಟು ಮಿಂಚಿದ್ದಾರೆ. ಇದರೊಂದಿಗೆ ಮಲ್ಲಿಗೆ ಹೂ ಮುಡಿದು ಸಂಭ್ರಮಿಸಿದ್ದಾರೆ.
Vijayalakshmi Darshan: ನೆಟ್ಟಿಗರು ಹೇಳಿದ್ದೇನು
ಇನ್ನು ವಿಜಯ ಲಕ್ಷ್ಮೀ ದರ್ಶನ್ ಅವರು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ನಮ್ಮ ಅತ್ತಿಗೆ ಮಾ... ನಮ್ಮ ಅತ್ತಿಗೆ ದೇವತೆ ಎಂದು ಫ್ಯಾನ್ಸ್‌ಗಳು ಕಮೆಂಟ್ ಮಾಡಿದ್ದಾರೆ.
ಹಲವು ದರ್ಶನ್ ಅಭಿಮಾನಿಗಳು ನಟ ದರ್ಶನ್ ಅವರನ್ನು ಹೇಗಾದರೂ ಮಾಡಿ ವಾಪಸ್ ಕರೆದುಕೊಂಡು ಬನ್ನಿ ಅತ್ತಿಗೆ ಅವರಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಆದಷ್ಟು ಬೇಗ ನಟ ದರ್ಶನ್ ಅವರಿಗೆ ಜಾಮೀನು ಸಿಗುವಂತಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications