ಮಧುಗಿರಿಯಲ್ಲಿ ಭೀಕರ ಅಪಘಾತ ಬೆಂಗಳೂರಿನ ಐವರು ಸಾವು
ತುಮಕೂರು, ಜುಲೈ 04: ತುಮಕೂರು ಜಿಲ್ಲೆಯ ಮಧುಗಿರಿಯ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಐವರು ಸಾವನ್ನಪ್ಪಿದ್ದಾರೆ.
ಪಾವಗಡದಲ್ಲಿ ಆಯೋಜಿತವಾಗಿದ್ದ ಮದುವೆ ನಿಶ್ಚಿತಾರ್ಥ ಮುಗಿಸಿ ವಾಪಾಸ್ಸಾಗುತ್ತಿದ್ದ ನಗರದ ಬೈಪ್ಪನಹಳ್ಳಿ ನಿವಾಸಿಗಳಿದ್ದ ಕಾರು ಸಿಮೆಂಟ್ ಹೊತ್ತು ಬರುತ್ತಿದ್ದ ಲಾರಿಗೆ ಡಿಕ್ಕಿಯಾದ ಕಾರಣ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯು ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಮಧುಗಿರಿಯ ಕೆರೆ ಪಾಳ್ಯದ ಬಳಿ ನಡೆದಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.












Click it and Unblock the Notifications