Get Updates
Get notified of breaking news, exclusive insights, and must-see stories!

ದೇಶದ ಅತ್ಯಂತ ಕಿರಿಯ ಮೇಯರ್, ಕೇರಳದ ಅತ್ಯಂತ ಕಿರಿಯ ಶಾಸಕರೊಂದಿಗೆ ವಿವಾಹ

ತಿರುವನಂತಪುರಂ ಸೆಪ್ಟೆಂಬರ್ 05: ತಿರುವನಂತಪುರಂ ನಗರ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳ ಸಿಪಿಎಂ ಶಾಸಕ ಕೆ ಎಂ ಸಚಿಂದೇವ್ ಭಾನುವಾರ ಸಿಪಿಎಂ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವಿವಾಹವಾದರು. ಆರ್ಯ ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದರೆ, ಸಚಿಂದೇವ್ ಕೇರಳದ ಅತ್ಯಂತ ಕಿರಿಯ ಶಾಸಕರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಬ್ಬರೂ ಪಕ್ಷದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಅವರ ಕುಟುಂಬಗಳು ಮದುವೆಯನ್ನು ನಿಶ್ಚಯಿಸಿದ್ದರು. ಹಿರಿಯರ ನಿಶ್ಚಯದಂತೆ ಭಾನುವಾರು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇತರ ಸಿಪಿಎಂ ನಾಯಕರು ಮತ್ತು ಆರ್ಯ ಮತ್ತು ಸಚಿಂದೇವ್ ಅವರ ನಿಕಟ ಸಂಬಂಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಜೊತೆಗೆ ತಮ್ಮ ಮದುವೆಗೆ ಉಡುಗೊರೆಗಳನ್ನು ನೀಡಲು ಬಯಸುವ ಯಾರಾದರೂ ಯಾವುದಾದರೂ ದತ್ತಿ ಚಟುವಟಿಕೆಗಳಿಗೆ ಕೊಡುಗೆ ನೀಡಬಹುದು ಎಂದು ದಂಪತಿಗಳು ಮನವಿ ಮಾಡಿದ್ದಾರೆ.

ರಾಜೇಂದ್ರನ್‌ ತಿರುವನಂತಪುರಂ ಮೂಲದವರಾಗಿದ್ದು, ಸಚಿನ್‌ದೇವ್‌ ಕೋಯಿಕ್ಕೋಡ್‌ ಮೂಲದವರು. ರಾಜೇಂದ್ರನ್ ಅವರು 2020 ರಲ್ಲಿ 21 ನೇ ವಯಸ್ಸಿನಲ್ಲಿ ಮೇಯರ್ ಆಗುವಾಗ ತಮ್ಮ ಪದವಿ ಕೋರ್ಸ್ ಮಾಡುತ್ತಿದ್ದರು. 28 ರ ಹರೆಯದ ಸಚಿನ್‌ದೇವ್ ಅವರು ಇಂಗ್ಲಿಷ್ ಸಾಹಿತ್ಯ ಪದವೀಧರರಾಗಿದ್ದಾರೆ ಮತ್ತು ಅವರ ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದ್ದಾರೆ.

ಆರ್ಯ ರಾಜೇಂದ್ರನ್ ಮತ್ತು ಕೆ ಎಂ ಸಚಿಂದೇವ್ ವಿವಾಹ

ಆರ್ಯ ರಾಜೇಂದ್ರನ್ ಮತ್ತು ಕೆ ಎಂ ಸಚಿಂದೇವ್ ವಿವಾಹ

ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಅವರ ತಂದೆ ರಾಜೇಂದ್ರನ್ ಅವರು ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್ಐಸಿ ಏಜೆಂಟ್ ಆಗಿದ್ದಾರೆ. ಡಿಸೆಂಬರ್ 2020 ರಲ್ಲಿ, ಆರ್ಯ ರಾಜೇಂದ್ರನ್ ಅವರು ಕೇರಳದ ತಿರುವನಂತಪುರಂ ಕಾರ್ಪೊರೇಶನ್‌ನ ಉಸ್ತುವಾರಿ ವಹಿಸಿಕೊಂಡಾಗ, ಅವರು ಭಾರತದ ಅತ್ಯಂತ ಕಿರಿಯ ಮೇಯರ್ ಎಂಬ ಹೆಸರು ಪಡೆದಿದ್ದಾರೆ.


ಅಧಿಕಾರ ಸ್ವೀಕರಿಸುವ ಸಮಯದಲ್ಲಿ, 21 ವರ್ಷದ ಆರ್ಯ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಓದುತ್ತಿದ್ದರು. ಕೆಲವು ತಿಂಗಳ ನಂತರ, ಸಚಿನ್ ದೇವ್ ಅವರು ಸಿಪಿಎಂ ಟಿಕೆಟ್‌ನಲ್ಲಿ ಬಾಲುಸ್ಸೆರಿ ವಿಧಾನಸಭಾ ಸ್ಥಾನವನ್ನು ಗೆದ್ದ ನಂತರ ಕೇರಳ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕರಾದರು. 28 ವರ್ಷದ ಸಚಿನ್ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ರಾಜ್ಯ ಕಾರ್ಯದರ್ಶಿಯಾಗಿದ್ದರೆ, ಆರ್ಯ ಅದರ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. ಅವರು ಎಡಪಕ್ಷಗಳ ಮಕ್ಕಳ ಘಟಕವಾದ ಬಾಲ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

ಒಟ್ಟಿಗೆ ಜೀವನ ನಡೆಸುವ ಆಸೆ

ಒಟ್ಟಿಗೆ ಜೀವನ ನಡೆಸುವ ಆಸೆ

ಆರ್ಯ ರಾಜೇಂದ್ರನ್ ತಿರುವನಂತಪುರದ ಮೇಯರ್. ಕಾಲೇಜು ವಿದ್ಯಾರ್ಥಿನಿಯಾಗಿದ್ದ ಆಕೆಗೆ 2020ರಲ್ಲಿ ಮಾರ್ಕ್ಸ್‌ವಾದಿ ಪಕ್ಷದಿಂದ ಮೇಯರ್ ಹುದ್ದೆ ನೀಡಲಾಗಿತ್ತು. ಕಳೆದ ಸ್ಥಳೀಯ ಚುನಾವಣೆಯಲ್ಲಿ ಕೇರಳ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಅದರ ಮೂಲಕ ಅಧಿಕಾರಕ್ಕೆ ಬಂದವರು ಆರ್ಯ ರಾಜೇಂದ್ರನ್. ಆಗ ಅವರ ವಯಸ್ಸು 21. ಸಚಿನ್ ದೇವ್ (28) ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಆಗಿದ್ದಾರೆ. ಅವರು ಭಾರತೀಯ ವಿದ್ಯಾರ್ಥಿ ಸಂಘದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ. ಜೊತೆಗೆ ಸಂಸ್ಥೆಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಆಗಿದ್ದಾರೆ. ಆರ್ಯ ಮತ್ತು ಸಚಿನ್ ಚಿಕ್ಕ ವಯಸ್ಸಿನಿಂದಲೂ ಭಾರತೀಯ ವಿದ್ಯಾರ್ಥಿ ಒಕ್ಕೂಟದಲ್ಲಿ ಬೆಳೆದವರು. ಹಾಗಾಗಿ ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಇಬ್ಬರೂ ಒಂದೇ ತತ್ವವನ್ನು ಹೊಂದಿದ್ದಾರೆಂದು ತಿಳಿದಿದೆ. ಇದರಿಂದಾಗಿ ಇಬ್ಬರನ್ನೂ ಜೋಡಿ ಮಾಡಲು ಅವರ ಮನೆಯವರು ನಿರ್ಧರಿಸಿದ್ದಾರೆ.


ಸಚಿನ್ ದೇವ್ ಕೋಝಿಕೋಡ್‌ನ ನೆಲ್ಲಿಕೋಡು ಪ್ರದೇಶದವರು. ಅವರು ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. 'ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಒಂದೇ ಎಂದು ಆರ್ಯ ಹೇಳುತ್ತಾರೆ. ನಾವು ಒಳ್ಳೆಯ ಸ್ನೇಹಿತರು. ಇಬ್ಬರೂ ಭಾರತೀಯ ವಿದ್ಯಾರ್ಥಿ ಸಂಘದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ಇದನ್ನು ನಮ್ಮ ಪೋಷಕರಿಗೆ ಹೇಳಿದ್ದೆವು. ಅವರು ಒಪ್ಪಿದರು' ಎಂದಿದ್ದಾರೆ.

ದೇಶದ ಚಿಕ್ಕ ಪ್ರತಿನಿಧಿಗಳ ವಿವಾಹ

ದೇಶದ ಚಿಕ್ಕ ಪ್ರತಿನಿಧಿಗಳ ವಿವಾಹ

ನಾವಿಬ್ಬರೂ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಾಗಿರುವುದರಿಂದ ವದಂತಿಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಕ್ಷಕ್ಕೂ ತಿಳಿಹೇಳಿದ್ದೇವೆ ಎಂದಿದ್ದರು. 2020ರ ತಿರುವನಂತಪುರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಟ್ಟು 100 ವಾರ್ಡ್‌ಗಳಲ್ಲಿ 52 ವಾರ್ಡ್‌ಗಳನ್ನು ಮಾರ್ಕ್ಸ್‌ಸ್ಟ್ ಪಕ್ಷ ಗೆದ್ದಿದೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳುಚೇರಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದ ಸಚಿನ್ ದೇವ್ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸದ್ಯ ದೇಶದ ಯುವ ಮೇಯರ್ ಮತ್ತು ಕೇರಳ ವಿಧಾನಸಭೆಯ ಯುವ ಶಾಸಕ ಇಬ್ಬರು ಮದುವೆಯಾಗಿದ್ದಾರೆ.

ಆರ್ಯ ಅವರ ಚಿಕ್ಕ ವಯಸ್ಸನ ಬಗ್ಗೆ ಟೀಕೆ

ಆರ್ಯ ಅವರ ಚಿಕ್ಕ ವಯಸ್ಸನ ಬಗ್ಗೆ ಟೀಕೆ

ಜನರ ತೆರಿಗೆ ಹಣದಲ್ಲಿ ಲಕ್ಷಗಟ್ಟಲೆ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಮೇಯರ್ ಕುರ್ಚಿ ಎಲ್‌ಕೆಜಿ ಮಕ್ಕಳು ನಾಶ ಮಾಡುವ ವಸ್ತುಗಳಲ್ಲ" ಎಂದು ಆರ್ಯ ರಾಜೇಂದ್ರನ್ ಅವರನ್ನು ಬಿಜೆಪಿ ಪುರಸಭಾ ಸದಸ್ಯ ಕರಮನ ಅಜಿತ್ ಟೀಕಿಸಿದ್ದರು. ಅವರು ಆರ್ಯ ಅವರ ಚಿಕ್ಕ ವಯಸ್ಸನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್ಯ, "ಕಳೆದ ಆರು ತಿಂಗಳಿಂದ ನೀವು ನಾನಾ ಟೀಕೆಗಳನ್ನು ಮಾಡಿದ್ದೀರಿ. ನೀವು ಮಾತ್ರವಲ್ಲ, ಯಾರಾದರೂ ನ್ಯಾಯಯುತ ವಿಮರ್ಶೆಗಳನ್ನು ಪೋಸ್ಟ್ ಮಾಡಬಹುದು. ವಯಸ್ಸು ಮತ್ತು ಅನುಭವದ ಕಾರಣದಿಂದ ನೀವೆಲ್ಲರೂ ನನ್ನನ್ನು ವೈಯಕ್ತಿಕವಾಗಿ ಟೀಕಿಸಿದ್ದೀರಿ. ಈ ವಯಸ್ಸಿನಲ್ಲಿ ಮೇಯರ್ ಆಗುವುದಾದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಗೊತ್ತು ಎಂದರ್ಥ, ಅಂತಹ ಸಂಸ್ಥೆಯಿಂದ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ಮೇಯರ್ ನಿಮ್ಮ ಮನೆಯಲ್ಲಿ ಸಹೋದರಿ ಮತ್ತು ತಾಯಿಯಂತೆ ಎಂದು ನಿಮಗೆ ಅನಿಸುತ್ತದೆ. ಮಹಿಳೆಯರನ್ನು ಯಾರು ಟೀಕಿಸಿದರೂ ಅದು ತಪ್ಪು," ಎಂದು ಎದಿರೇಟು ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+