ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌, ಡೀಸೆ‌ಲ್‌ಗೆ ಏಕೆ ಜಿಎಸ್‌ಟಿ ವ್ಯಾಪ್ತಿಗೆ ಬರಲ್ಲ?: ಕೌನ್ಸಿಲ್‌ಗೆ ಕೇರಳ ಹೈಕೋರ್ಟ್ ನೋಟಿಸ್‌

|
Google Oneindia Kannada News

ತಿರುವನಂತಪುರಂ, ನವೆಂಬರ್‌ 09: ಪೆಟ್ರೋಲ್‌ ಹಾಗೂ ಡೀಸೆಲ್ ಯಾಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡುವಂತೆ ಕೇರಳ ಹೈಕೋರ್ಟ್ ಜಿಎಸ್‌ಟಿ ಕೌನ್ಸಿಲ್‌ಗೆ ಸೋಮವಾರ ನೋಟಿಸ್‌ ನೀಡಿದೆ. ಮುಖ್ಯ ನ್ಯಾಯಾಧೀಶರು ಎಸ್‌ ಮಣಿಕುಮಾರ್‌ ಹಾಗೂ ಜಸ್ಟಿಸ್‌ ಶಾಜಿ ಪಿ ಚಲಿರನ್ನು ಒಳಗೊಂಡ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಪೆಟ್ರೋಲ್‌ ಹಾಗೂ ಡೀಸೆಲ್ ಯಾಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಡಿಯಲ್ಲಿ ಬರುವುದಿಲ್ಲ ಎಂದು ಹತ್ತು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಹೇಳಿದೆ.

ಜಿಎಸ್‌ಟಿ ಕೌನ್ಸಿಲ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ಅಡಿಗೆ ತರದಿರುವುದನ್ನು ಪ್ರಶ್ನಿಸಿ ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಗೊಂಡ ಎಸ್‌ ಮಣಿಕುಮಾರ್‌ ಹಾಗೂ ಜಸ್ಟಿಸ್‌ ಶಾಜಿ ಪಿ ಚಲಿರನ್ನು ಒಳಗೊಂಡ ವಿಭಾಗೀಯ ಪೀಠವು ಜಿಎಸ್‌ಟಿ ಕೌನ್ಸಿಲ್‌ಗೆ ನೋಟಿಸ್‌ ನೀಡಿದೆ. ಹಾಗೆಯೇ ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ಹತ್ತು ದಿನಗಳ ಗಡುವನ್ನೂ ನೀಡಿದೆ.

ಪೆಟ್ರೋಲ್, ಡೀಸೆಲ್ ಜಿಎಸ್‌ಟಿಗೆ ಸೇರಿಸಲು ಬಯಸುವ ಶೇ.77 ಭಾರತೀಯರು: ಸಮೀಕ್ಷೆಪೆಟ್ರೋಲ್, ಡೀಸೆಲ್ ಜಿಎಸ್‌ಟಿಗೆ ಸೇರಿಸಲು ಬಯಸುವ ಶೇ.77 ಭಾರತೀಯರು: ಸಮೀಕ್ಷೆ

ಅರ್ಜಿದಾರರಾದ ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಪರವಾಗಿ ವಕೀಲ ಅರುಣ್‌ ವರ್ಗೀಸ್‌ ಹೈಕೋರ್ಟ್‌ನಲ್ಲಿ ವಾದ ಮಂಡನೆ ಮಾಡಿದ್ದಾರೆ. "ತೆರಿಗೆ ನೀತಿಯಂತೆ ರಾಜ್ಯ ಸರ್ಕಾರಗಳು ಬೇರೆ ಬೇರೆ ರೀತಿಯಲ್ಲಿ ತೆರಿಗೆಯನ್ನು ವಿಧಿಸುತ್ತಿರುವ ಕಾರಣದಿಂದಾಗಿ ಪ್ರಸ್ತುತ ದೇಶದ ಎಲ್ಲಾ ಭಾಗಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಬೇರೆ ಬೇರೆ ರೀತಿಯಾಗಿದೆ," ಎಂದು ಕೇರಳ ಪ್ರದೇಶ ಗಾಂಧಿ ದರ್ಶನವೇದಿ ಪರವಾಗಿ ವಕೀಲ ಅರುಣ್‌ ವರ್ಗೀಸ್‌ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.

Why Petrol & Diesel Excluded From GST?, Kerala High Court issues notice to GST council

"ಸಂವಿಧಾನದ ಆರ್ಟಿಕಲ್ 279 ರ ಅಡಿಯಲ್ಲಿ ನಾವು ಪರಿಶೀಲನೆ ಮಾಡುವುದಾದರೆ ಈ ರೀತಿ ಬೇರೆ ಬೇರೆ ರೀತಿಯಲ್ಲಿ ದರವು ಇರುವುದು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಅಡ್ಡಿಯಾಗುತ್ತದೆ," ಎಂಬುವುದು ಕೇರಳ ಪ್ರದೇಶ ಗಾಂಧಿ ದರ್ಶನವೇದಿ ವಾದವಾಗಿದೆ.

ಇಂಧನದ ದರ ಏರಿಕೆಯಿಂದ ಜನರ ಜೀವನ ವೆಚ್ಚ ಏರಿಕೆ

"ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯು ಅಧಿಕವಾಗುತ್ತಿರುವುದು ಜನ ಸಾಮಾನ್ಯರ ಜೀವನಕ್ಕೆ ತೊಂದರೆಯನ್ನು ಉಂಟು ಮಾಡುತ್ತಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲ ಹೆಚ್ಚಾಗಿ ಜನರಿಗೆ ದೈನಂದಿನ ಖರ್ಚು ಅಧಿಕವಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಕೂಡಾ ತೀರಾ ಅಧಿಕವಾಗುತ್ತದೆ. ಜನರ ಜೀವನ ವೆಚ್ಚವೂ ಹೆಚ್ಚಾಗುತ್ತದೆ," ಎಂದು ಒಂದಕ್ಕೆ ಒಂದನ್ನು ನಂಟು ಮಾಡಿಕೊಂಡು ಅರ್ಜಿದಾರರು ನ್ಯಾಯಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಿಚಾರವನ್ನು ಪ್ರಸ್ತುತ ಪಡಿಸಿದ್ದಾರೆ. "ಪೆಟ್ರೋಲ್‌ ಹಾಗೂ ಡೀಸೆಲೆ ಬೆಲೆಯು ಈ ರೀತಿಯಾಗಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿರುವ ಹಿನ್ನೆಲೆ ಜನರಿಗೆ ತೀರಾ ಆರ್ಥಿಕ ಸಂಕಷ್ಟವನ್ನು ಉಂಟಾಗಿದೆ. ಜನರನ್ನು ಅಪಾಯಕ್ಕೆ ತಳ್ಳಿದೆ. ಈ ಮೂಲಕ ಜನರ ಬದುಕುವ ಹಕ್ಕಿಗೆ ಚ್ಯುತಿ ಉಂಟು ಮಾಡಲಾಗಿದೆ," ಎಂದು ಈ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ: ಸೀತಾರಾಮನ್ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ: ಸೀತಾರಾಮನ್

ಇಂಧನ ಜಿಎಸ್‌ಟಿಗೆ ಸೇರಿಸಲು ಬಯಸುವ ಶೇ.77 ಭಾರತೀಯರು'

ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರವು ಹಿಂದೆಂದಿಗಿಂತಲೂ ಭಾರೀ ಅಧಿಕವಾಗಿದೆ. ಈ ನಡುವೆ ಶೇಕಡ 77 ಮಂದಿ ಪೆಟ್ರೋಲ್‌ ಹಾಗೂ ಡೀಸೆಲ್ ಸರಕು ಹಾಗೂ ಸೇವೆ ತೆರಿಗೆ (ಜಿಎಸ್‌ಟಿ) ಅಡಿಗೆ ಸೇರಿಸಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ನಿರಂತರವಾಗಿ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲಯು ಏರಿಕೆ ಆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಈ ಬೆನ್ನಲ್ಲೇ ಹಲವಾರು ರಾಜ್ಯಗಳು ವ್ಯಾಟ್‌ ಅನ್ನು ಕಡಿತ ಮಾಡಿದೆ. ಇದರಿಂದಾಗಿ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಯು ಇಳಿಕೆ ಕಂಡಿದೆ. ಆದರೆ ಈ ನಡುವೆಯೂ ಹೆಚ್ಚಿನ ಸಂಖ್ಯೆಯ ಭಾರತೀಯರು ಪೆಟ್ರೋಲ್‌, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಬಯಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಲೋಕಲ್ ಸರ್ಕಲ್ಸ್ ಈ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಶೇಕಡ 77 ಮಂದಿ ಪೆಟ್ರೋಲ್‌ ಹಾಗೂ ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬರಬೇಕು ಎಂದು ಬಯಸಿದ್ದಾರೆ. ಇನ್ನು ಈ ನಡುವೆ ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ ಎಂದು ಹೇಳಿದ್ದಾರೆ.

Recommended Video

ಅಪ್ಪುಅನ್ನಸಂತರ್ಪಣೆಯಲ್ಲಿ ಅಭಿಮಾನಿಗಳಿಗೆ ಊಟ ಬಡಿಸಿದ ಶಿವಣ್ಣ & ಪನೀತ್ ಪತ್ನಿ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Kerala High Court issues notice to GST council asking Why Petrol & Diesel Excluded From GST?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X