• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಗೆದ್ದ ಕೇರಳ ರಾಜ್ಯಕ್ಕೆ ಈಗ ಹೊಸ ಸವಾಲು!

|

ತಿರುವನಂತಪುರಂ, ಮೇ 12 : ಕೊರೊನಾ ನಿಯಂತ್ರಣ ವಿಚಾರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿರುವ ಕೇರಳ ರಾಜ್ಯಕ್ಕೆ ಹೊಸ ಸವಾಲು ಎದುರಾಗಿದೆ. ಮಳೆಗಾಲ ಆರಂಭವಾಗುವ ಮೊದಲು ರಾಜ್ಯ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಕೇರಳದಲ್ಲಿ ಲಾಕ್ ಡೌನ್ ಅವಧಿಯಲ್ಲಿ ವಿದ್ಯುತ್‌ಗೆ ಬೇಡಿಕೆ ಗಣನೀಯವಾಗಿ ತಗ್ಗಿದೆ. ಆದ್ದರಿಂದ, ಜಲ ವಿದ್ಯುತ್ ಉತ್ಪಾದನಾ ಘಟಕಗಳು ಇರುವ ಡ್ಯಾಂಗಳಲ್ಲಿ ನೀರಿನ ಸಂಗ್ರಹ ವಾಡಿಕೆಗಿಂತ ಹೆಚ್ಚಿದೆ.

ಮಳೆ ಅನಾಹುತಗಳ ತುರ್ತು ಕಾರ್ಯಾಚರಣೆಗೆ ಏರಿಯಾ ಮ್ಯಾಪಿಂಗ್

ಮುಂಗಾರು ಆರಂಭವಾಗುವುದಕ್ಕೂ ಮೊದಲೇ ಡ್ಯಾಂಗಳಿಂದ ನೀರು ಹೊರಬಿಡದಿದ್ದರೆ ಮಳೆಗಾಲದಲ್ಲಿ ಕೇರಳದಲ್ಲಿ ಪ್ರವಾಹ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ವರ್ಷದ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಆಸ್ಟ್ರೇಲಿಯಾದಲ್ಲಿ ಮಳೆ ಆಗೋದನ್ನು ಹೇಳುತ್ತೆ ಅದೊಂದು ರಾಡರ್!

ಒಂದು ವೇಳೆ ಕೇರಳದಲ್ಲಿ ಹೆಚ್ಚು ಮಳೆಯಾದರೆ ಇಡುಕ್ಕಿ ಸೇರಿದಂತೆ ಕೇರಳ ರಾಜ್ಯ ವಿದ್ಯುತ್‌ ಮಂಡಳಿ (ಕೆಎಸ್‌ಇಬಿ) ವ್ಯಾಪ್ತಿಗೆ ಬರುವ ಜಲಾಶಯಗಳಲ್ಲಿರುವ ಹೆಚ್ಚಿನ ನೀರನ್ನು ಹೊರಬಿಡುವುದು ಅನಿವಾರ್ಯವಾಗಲಿದೆ. ಆಗ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ.

ತವರಿಗೆ ವಾಪಸ್ ಆಗುವವರನ್ನು ಬರಮಾಡಿಕೊಳ್ಳಲು ಕೇರಳ ಸರ್ಕಾರ ಸಿದ್ಧ

ತಜ್ಞರಿಂದ ಸರ್ಕಾರಕ್ಕೆ ಪತ್ರ

ತಜ್ಞರಿಂದ ಸರ್ಕಾರಕ್ಕೆ ಪತ್ರ

ಪರಿಸರ ತಜ್ಞರು ಮತ್ತು ವಿಜ್ಞಾನಿಗಳು ಕೇರಳ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಮುಂಗಾರು ಆರಂಭವಾಗುವ ಮೊದಲೇ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಯೋಜನೆ ರೂಪಿಸಬೇಕು. ಡ್ಯಾಂನಿಂದ ಹೆಚ್ಚುವರಿ ನೀರು ಹೊರ ಬಿಟ್ಟಾಗ 2018ರ ಮಾದರಿಯಲ್ಲಿ ಪ್ರವಾಹ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂಗಾರು ಆಗಮನ

ಮುಂಗಾರು ಆಗಮನ

ಜೂನ್ ಮೊದಲ ವಾರ ಅಥವ ಅದಕ್ಕೂ ಮೊದಲು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆ ನೀಡಲಾಗಿದೆ. ಕೇರಳದಲ್ಲಿ ಮುಂಗಾರು ಮಾರುತಗಳಿಂದ ಪ್ರತಿ ವರ್ಷ ಒಳ್ಳೆಯ ಮಳೆಯಾಗುತ್ತದೆ. ಈ ಬಾರಿ ಮಳೆ ಆರಂಭವಾದ ಕೂಡಲೇ ಡ್ಯಾಂನಿಂದ ನೀರು ಹೊರಬಿಡಬೇಕಿದೆ ಎಂದು ತಜ್ಞರು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಡ್ಯಾಂಗಳಲ್ಲಿ ಹೆಚ್ಚುವರಿ ನೀರಿದೆ

ಡ್ಯಾಂಗಳಲ್ಲಿ ಹೆಚ್ಚುವರಿ ನೀರಿದೆ

ಕೇರಳದ ಜಲಸಂಪನ್ಮೂಲ ಇಲಾಖೆ ನೀಡಿರುವ ಮಾಹಿತಿಯಂತೆ ಜಲವಿದ್ಯುತ್ ಘಟಕಗಳು ಇರುವ ಜಲಾಶಯಗಳಲ್ಲಿ ಶೇ 36ರಷ್ಟು ನೀರಿದೆ. ಕಳೆದ ವರ್ಷ ಇದೇ ಸಮಯದಲ್ಲಿ 25.9ರಷ್ಟು ನೀರಿತ್ತು. ಬೇಸಿಗೆಯಲ್ಲಿ ಶೇ 20ರಷ್ಟು ನೀರು ವಿದ್ಯುತ್ ಉತ್ಪಾದನೆಗೆ ಬಳಕೆ ಆಗುತ್ತಿತ್ತು. ಆದರೆ, ಈ ಬಾರಿ ವಿದ್ಯುತ್‌ ಬೇಡಿಕೆ ತಗ್ಗಿದ್ದು, ನೀರು ಉಳಿತಾಯವಾಗಿದೆ.

ವಿದ್ಯುತ್‌ ಬೇಡಿಕೆ ಇಳಿಕೆ

ವಿದ್ಯುತ್‌ ಬೇಡಿಕೆ ಇಳಿಕೆ

ಕೇರಳ ರಾಜ್ಯ ವಿದ್ಯುತ್‌ ಮಂಡಳಿ (ಕೆಎಸ್‌ಇಬಿ) ನೀಡುವ ಮಾಹಿತಿಯಂತೆ ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ 70 ಮಿಲಿಯನ್ ಯೂನಿಟ್ ವಿದ್ಯುತ್‌ ಬಳಕೆಯಾಗುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ 82 ರಿಂದ 88 ಮಿಲಿಯನ್ ಯೂನಿಟ್ ಬಳಕೆ ಆಗುತ್ತಿತ್ತು. ಲಾಕ್ ಡೌನ್ ಪರಿಣಾಮ ಕೈಗಾರಿಕೆಗಳು ಬಾಗಿಲು ಹಾಕಿದ್ದು, ವಿದ್ಯುತ್ ಉತ್ಪಾದನೆ ಕುಸಿತವಾಗಿದೆ.

English summary
Due to lockdown power consumption in Kerala has reduced significantly. By this less water being drawn by hydroelectric dams. The storage capacity of the dams is higher than it was the previous year. Govt to release water from the dams before the monsoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X