ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್; ಕೇರಳದ ಟಿಡಿಬಿ ಆದಾಯ 21 ಕೋಟಿಗೆ ಕುಸಿತ!

|
Google Oneindia Kannada News

ತಿರುವನಂತಪುರಂ, ಮೇ 28; ಕೋವಿಡ್ ಹಿನ್ನಲೆಯಲ್ಲಿ ಕೇರಳದಲ್ಲಿನ ತಿರುವಾಂಕೂರು ದೇವಸ್ವಂ ಮಂಡಳಿ (​ಟಿಡಿಬಿ) ಅಡಿಯಲ್ಲಿನ ಹಲವು ದೇವಾಲಯಗಳಿಗೆ ಭಕ್ತರ ಪ್ರದೇಶ ನಿಷೇಧಿಸಲಾಗಿದೆ. ಇದರಿಂದಾಗಿ ಮಂಡಳಿಗೆ ಭಾರೀ ನಷ್ಟವಾಗಿದೆ.

ಕೇರಳ ರಾಜ್ಯದ ದಕ್ಷಿಣ ಭಾಗದಲ್ಲಿರುವ ಎಲ್ಲಾ ಪ್ರಮುಖ ದೇವಾಲಯಗಳು ಟಿಡಿಬಿ ವ್ಯಾಪ್ತಿಗೆ ಬರುತ್ತದೆ. ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯ ಸಹ ಮಂಡಳಿ ವ್ಯಾಪ್ತಿಯಲ್ಲೇ ಇದೆ.

ಕೇರಳ ಮಾದರಿ ಸರ್ಕಾರ - ಗಮನಿಸಬೇಕಾದ 3 ಅಂಶಗಳು ಕೇರಳ ಮಾದರಿ ಸರ್ಕಾರ - ಗಮನಿಸಬೇಕಾದ 3 ಅಂಶಗಳು

ಕೋವಿಡ್ ಪರಿಣಾಮ ಟಿಡಿಬಿ ಆದಾಯದಲ್ಲಿ ಭಾರೀ ಕುಸಿತವಾಗಿದೆ. ಇದರಿಂದಾಗಿ ಮಂಡಳಿ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ನೀಡಲು ಸಹ ಹಣದ ಕೊರತೆ ಎದುರಾಗಿದೆ.

ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ ತಮಿಳುನಾಡಲ್ಲಿ 'ಕೊರೊನಾ ದೇವಿ' ದೇವಾಲಯ; ವಿಶೇಷ ಪೂಜೆ

 Travancore Devasom Board Approached Kerala Govt For Funds

ವರದಿಗಳ ಪ್ರಕಾರ ಟಿಡಿಬಿ ಪ್ರತಿ ತಿಂಗಳು ವೇತನ, ಪಿಂಚಣಿಗಾಗಿ ಸುಮಾರು 40 ಕೋಟಿ ರೂ. ಖರ್ಚು ಮಾಡುತ್ತಿದೆ. ಈಗ ವೇತನ ಪಾವತಿಗೆ ತೊಂದರೆ ಉಂಟಾಗಿದ್ದು, ಅನುದಾನ ನೀಡುವಂತೆ ಮಂಡಳಿ ಕೇರಳ ಸರ್ಕಾರದ ಮೊರೆ ಹೋಗಿದೆ.

ಸಂಕ್ರಾತಿ ಸಂಭ್ರಮದ ನಡುವೆ ಭಣಗುಡುತ್ತಿದೆ ಶಬರಿಮಲೆಸಂಕ್ರಾತಿ ಸಂಭ್ರಮದ ನಡುವೆ ಭಣಗುಡುತ್ತಿದೆ ಶಬರಿಮಲೆ

ಟಿಡಿಬಿ ವ್ಯಾಪ್ತಿಯಲ್ಲಿರುವ ದೇವಾಲಯಗಳ ನಿರ್ವಹಣೆಗಾಗಿಯೇ ಪ್ರತಿ ತಿಂಗಳು 5 ಕೋಟಿ ರೂ. ಬೇಕು. ಮಂಡಳಿಯ ಆದಾಯ 261 ಕೋಟಿಯಿಂದ 21 ಕೋಟಿಗೆ ಕುಸಿತಕಂಡಿದೆ. ಇದರಿಂದಾಗಿ ಹಣದ ಮುಗ್ಗಟ್ಟು ಎದುರಾಗಿದೆ.

ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ನವೆಂಬರ್ ತಿಂಗಳಿನಲ್ಲಿ ಹಬ್ಬಗಳು ಆರಂಭವಾಗಲಿವೆ. ಆಗ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸಲಿದ್ದು, ಮಂಡಳಿ ಆದಾಯವೂ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಕೇರಳದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 24,48,555. ಸಕ್ರಿಯ ಪ್ರಕರಣಗಳ ಸಂಖ್ಯೆ 2,41,972. ಇದುವರೆಗೂ ರಾಜ್ಯದಲ್ಲಿ 8064 ಜನರು ಮೃತಪಟ್ಟಿದ್ದಾರೆ.

English summary
Travancore Devasom Board (TDB) approached the Kerala government for funds after revenue crash dives from Rs 261 crore to Rs 21 crore due to Covid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X