ಕೇರಳದಲ್ಲಿ ಈ ವರ್ಷ ದಾಖಲೆಯ ಸಾವುಗಳು: ಕೋವಿಡ್-19 ಸಹಿತ ಎಲ್ಲಾ ಕಾರಣಗಳೂ ಸೇರಿವೆ
ವಿಶ್ವದೆಲ್ಲೆಡೆ ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ಹರಡಿಕೊಳ್ಳುತ್ತಿದ್ದು ಇದರ ರೋಗಲಕ್ಷಣಗಳು ಸೌಮ್ಯವಾಗಿವೆ ಎಂದು ಡಬ್ಯೂಹೆಚ್‌ಒ ತಿಳಿಸಿದೆ. ಆದರೆ ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ಅಧಿಕ ಪ್ರಾಣ ಹಾನಿ ಸಂಭವಿಸಿದೆ. ಇದಲ್ಲದೆ ಕೊರೊನಾ ಸೇರಿದಂತೆ ಇತರ ಎಲ್ಲಾ ಕಾರಣಗಳಿಂದ ಅತೀ ಹೆಚ್ಚು ಸಾವು ಕೇರಳದಲ್ಲಿ ಸಂಭವಿಸಿವೆ. ಕೋವಿಡ್ -19 ರ ಎರಡನೇ ಅಲೆಯಲ್ಲಿ ಕೇರಳದ ಎಲ್ಲಾ ಕಾರಣಗಳ ಮರಣ ಸಂಖ್ಯೆಗಳು ದಾಖಲೆಯ ಎತ್ತರವನ್ನು ಮುಟ್ಟುವ ಸಾಧ್ಯತೆಯಿದೆ. ಈಗಾಗಲೇ 2021ರ ಜನವರಿ-ಜೂನ್ ನಲ್ಲಿ ಅತೀ ಹೆಚ್ಚು ಸಾವುಗಳೂ ದಾಖಲಾಗಿವೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ, ಕೇರಳದಲ್ಲಿ ಇತರ ಎಲ್ಲಾ ಕಾರಣಗಳಿಂದಾಗಿ ದಾಖಲಾದ ಸಾವುಗಳ ಸಂಖ್ಯೆ 1,55,520 ರಷ್ಟಿದೆ. 2020 ರಲ್ಲಿ ಅನುಗುಣವಾದ ಅವಧಿಯಲ್ಲಿ 1,15,081 ಸಾವುಗಳು ದಾಖಲಾಗಿವೆ. ಜೊತೆಗೆ 2019 ರ ಸಾಂಕ್ರಾಮಿಕ-ಪೂರ್ವ ವರ್ಷದ ಮೊದಲ ಆರು ತಿಂಗಳಲ್ಲಿ 1,28,667 ಸಾವುಗಳು ದಾಖಲಾಗಿವೆ. ಈ ಎಲ್ಲಾ ಕಾರಣಗಳ ಮರಣವು ಅಧಿಕೃತ ಕೋವಿಡ್ ಸಾವುಗಳನ್ನು ಒಳಗೊಂಡಂತೆ ಒಟ್ಟು ಸಾವಿನ ಸಂಖ್ಯೆಯಾಗಿದೆ. ರಾಜ್ಯದ ಜನನ ಮತ್ತು ಮರಣಗಳ ಮುಖ್ಯ ರಿಜಿಸ್ಟ್ರಾರ್‌ನ ದತ್ತಾಂಶವು ಈ ವರ್ಷದ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ನೋಂದಾಯಿತ ಸಾವುಗಳಲ್ಲಿ ತೀವ್ರ ಏರಿಕೆ ದಾಖಲಿಸಿದೆ ಎಂದು ತೋರಿಸುತ್ತದೆ.
ಕೇವಲ 2021ರ ಜೂನ್ ತಿಂಗಳಲ್ಲಿ ಮಾತ್ರ ಅಧಿಕ ಸಂಖ್ಯೆಯಲ್ಲಿ ಜನ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಕೊರೊನಾ ಸೇಂರಿದಂತೆ ನಾನಾ ಕಾರಣಗಳಿಂದ ಜೂನ್‌ನಲ್ಲಿ ಮಾತ್ರ 32,501 ಜನ ಸಾವನ್ನಪ್ಪಿದ್ದಾರೆ. ಜೂನ್ 2020 ರಲ್ಲಿ 20,640 ಮತ್ತು ಜೂನ್ 2019 ರಲ್ಲಿ 20,642 ಸಾವುಗಳು ದಾಖಲಾಗಿವೆ.

ಇನ್ನೂ ಈ ವರ್ಷ ಮೇ ತಿಂಗಳಲ್ಲಿ, ರಾಜ್ಯದಲ್ಲಿ 28,684 ಸಾವುಗಳನ್ನು ದಾಖಲಾಗಿವೆ. 2020 ರ ಮೇ ತಿಂಗಳಲ್ಲಿ 21,488 ಸಾವುಗಳು ದಾಖಲಾದರೆ ಮತ್ತು 2019 ರ ಮೇ ತಿಂಗಳಲ್ಲಿ 22,984 ಸಾವುಗಳು ಸಂಭವಿಸಿವೆ. ಮತ್ತೊಂದು ವಿಚಾರ ಅಂದರೆ ಈ ಎರಡು ತಿಂಗಳುಗಳಲ್ಲಿ, ಕೇರಳವು ಅತಿ ಹೆಚ್ಚು ದೈನಂದಿನ ಕೋವಿಡ್ -19 ಸಾವುಗಳನ್ನು ವರದಿ ಮಾಡಿದೆ. ದಿನಕ್ಕೆ ಸುಮಾರು 150-200 ಸಾವುಗಳು ಸಂಭವಿಸಿವೆ. ಮೇ 1 ರಿಂದ ಜುಲೈ 1 ರವರೆಗೆ ರಾಜ್ಯವು 7,927 ಸಾವುಗಳನ್ನು ದಾಖಲಿಸಿದೆ. ಈ ದಾಖಲಾತಿಯಲ್ಲಿ ಆರೋಗ್ಯ ಇಲಾಖೆಯ ಮಾಹಿತಿಯಾಗಿದೆ. ಇನ್ನೂ ಮಾಹಿತಿ ಇಲ್ಲದ ಸಾವುಗಳ ಸಂಖ್ಯೆ ಇದರಲ್ಲಿ ಒಳಗೊಂಡಿಲ್ಲ.
ಈ ಹಿಂದೆ, ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರ ತಂಡವು ನಡೆಸಿದ ತನಿಖೆಯು ದೇಶದಾದ್ಯಂತ ಅಧಿಕೃತ ಕೋವಿಡ್ ಸಾವುಗಳಲ್ಲಿ ಕಡಿಮೆ ಎಣಿಕೆಯನ್ನು ಸೂಚಿಸಿತ್ತು. ಹೀಗಾಗಿ ಭಾರತದಲ್ಲಿ ನಿಖರ ಸಾವಿನ ಸಂಖ್ಯೆ ಗುರುತಿಸಲು ತಿಳಿಸಿತ್ತು. ತನಿಖೆಯ ಭಾಗವಾಗಿ ಪತ್ರಿಕೆಯು ಹಲವಾರು ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿದೆ. ಅವರಲ್ಲಿ ಕೇರಳ ಸೇರಿದಂತೆ ಎಂಟು ಜನರು ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯ ಪ್ರಕಾರ ನೋಂದಾಯಿಸಿದ ಸಾವಿನ ದಾಖಲೆಗಳನ್ನು ಒದಗಿಸಿದ್ದಾರೆ. 2021 ಏಪ್ರಿಲ್ 1 ರಿಂದ ಮೇ 30 ರವರೆಗೆ ದಾಖಲಾದ ಸಾವಿನ ಸಂಖ್ಯೆ 2019 ರ ಅನುಗುಣವಾದ ಅವಧಿಯ ಅಂಕಿಅಂಶಗಳಿಗಿಂತ 1.23 ಪಟ್ಟು ಹೆಚ್ಚು ಎಂದು ಕೇರಳದ ಅಂಕಿಅಂಶಗಳು ತೋರಿಸಿವೆ.

2020 ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೇರಳದಲ್ಲಿ ಸಾವುಗಳ ಮೇಲೆ ಲಾಕ್‌ಡೌನ್ ಪರಿಣಾಮವು ಸ್ಪಷ್ಟವಾಗಿದೆ. ರಾಜ್ಯವು ಕ್ರಮವಾಗಿ 16,176 ಮತ್ತು 13,338 ಸಾವುಗಳನ್ನು ಮಾತ್ರ ವರದಿ ಮಾಡಿದೆ. ಆದಾಗ್ಯೂ, ಈ ವರ್ಷದ ಅನುಗುಣವಾದ ತಿಂಗಳುಗಳಲ್ಲಿ ಅಂಕಿಅಂಶಗಳು ಕ್ರಮವಾಗಿ 24,632 ಮತ್ತು 21,231 ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗುತ್ತದೆ.
ಸಾಂಕ್ರಾಮಿಕ ರೋಗದ ಮೊದಲ ವರ್ಷವಾದ 2020 ರಲ್ಲಿ ಕೇರಳದಲ್ಲಿ ಎಲ್ಲಾ ಕಾರಣಗಳ ಮರಣ ಸಂಖ್ಯೆ 2019 ರಲ್ಲಿ 2,70,567 ರಿಂದ 2,53,638 ಕ್ಕೆ ಇಳಿದಿದೆ ಎಂದು ಡೇಟಾ ತೋರಿಸಿದೆ. ಆದರೆ ಈ ವರ್ಷದ ಮೊದಲ ಒಂಬತ್ತು ತಿಂಗಳುಗಳು ಸೆಪ್ಟೆಂಬರ್ 30 ರವರೆಗೆ ಈಗಾಗಲೇ ನೋಂದಾಯಿತ ಸಾವಿನ ಸಂಖ್ಯೆ 2,12,712 ಕ್ಕೆ ಏರಿಕೆಯಾಗಿದೆ. 2009 ರಿಂದ ಎಲ್ಲಾ ಕಾರಣಗಳ ಸಾವಿನ ಅಂಕಿಅಂಶಗಳು 2015 ರಿಂದ ವಾರ್ಷಿಕ ಅಂಕಿಅಂಶವು 2.50 ಲಕ್ಷಕ್ಕಿಂತ ಹೆಚ್ಚಿದೆ ಎಂದು ತೋರಿಸುತ್ತದೆ. ಇದಕ್ಕೆ ಕಾರಣ ವಯಸ್ಸಾದವರ ಸಂಖ್ಯೆ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ.












Click it and Unblock the Notifications