• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಸಿಎಂ ಕಿರುಕುಳ ನೀಡುತ್ತಿದ್ದಾರೆ ಎಂದ ಸ್ವಪ್ನಾ ಸುರೇಶ್

|
Google Oneindia Kannada News

ತಿರುವನಂತಪುರ ಜುಲೈ 7: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸತ್ಯ ಹೊರತರುತ್ತಿರುವ ಕಾರಣ ನನಗೆ ಮುಖ್ಯಮಂತ್ರಿ ತಿರುವನಂತಪುರ ಕಿರುಕುಳ ನೀಡುತ್ತಿದ್ದಾರೆ ಎಂದು ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.

"ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಕೇರಳ ಸಿಎಂ ಈಗ ನನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಸತ್ಯವನ್ನು ಹೊರತರಲು ಪ್ರಯತ್ನಿಸುತ್ತಿರುವ ಕಾರಣ ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅವನು ತನ್ನ ಮಗಳಿಗಾಗಿ ಮಾತ್ರ ಕೆಲಸ ಮಾಡಬಾರದು. ನಮ್ಮೆಲ್ಲರನ್ನೂ ಕೂಡ ಅವರ ಹೆಣ್ಣುಮಕ್ಕಳಂತೆ ಪರಿಗಣಿಸಬೇಕು" ಎಂದು ಸ್ವಪ್ನಾ ಸುರೇಶ್ ಹೇಳಿದರು.

ತನ್ನ ವಿರುದ್ಧ ದಾಖಲಾದ ಪಿತೂರಿ ಪ್ರಕರಣದಲ್ಲಿ ಕ್ರೈಂ ಬ್ರಾಂಚ್ ತನ್ನನ್ನು ವಿಚಾರಣೆ ನಡೆಸಿದೆ ಎಂದು ಸ್ವಪ್ನಾ ಕೃಷ್ಣ ಹೇಳಿದರು. "ಈ ವಿಚಾರಣೆ ನನಗೆ ಕಿರುಕುಳವಾಗಿತ್ತು. ತನಿಖಾ ತಂಡವು ಎಚ್‌ಆರ್‌ಡಿಎಸ್ ಇಂಡಿಯಾದಿಂದ ಕೆಳಗಿಳಿಯುವಂತೆ ಮತ್ತು ನನ್ನ ವಕೀಲ ಕೃಷ್ಣ ರಾಜ್ ಅವರನ್ನು ವಾದದಿಂದ ಕೈಬಿಡುವಂತೆ ಕೇಳಿದೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಿರುವನಂತಪುರಂನಲ್ಲಿರುವ ಯುಎಇ ರಾಯಭಾರ ಕಚೇರಿಗೆ ಕಳುಹಿಸಲಾದ ರಾಜತಾಂತ್ರಿಕ ರವಾನೆಯೆಂದು ಮರೆಮಾಚುವ ಬ್ಯಾಗ್‌ನಲ್ಲಿ15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ.ಯಷ್ಟು ಚಿನ್ನವನ್ನು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡ ನಂತರ ಜುಲೈ 2020 ರಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಬಂಧನ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 11, 2020 ರಂದು, ಕೇರಳದ ಯುಎಇ ರಾಯಭಾರ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್, ಬೆಂಗಳೂರಿನಿಂದ ಮತ್ತೊಬ್ಬ ಆರೋಪಿ ಸಂದೀಪ್ ನಾಯರ್ ಜೊತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರನ್ನು ವಶಕ್ಕೆ ತೆಗೆದುಕೊಂಡಿತು.

Swapna Suresh alleges on Pinarayi Vijayan Harassing Her

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಮತ್ತು ಇಲ್ಲಿನ ಯುಎಇ ರಾಯಭಾರ ಕಚೇರಿಯ ಮತ್ತೊಬ್ಬ ಮಾಜಿ ಉದ್ಯೋಗಿ ಸರಿತ್ ಪಿಎಸ್ ಸೇರಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ.

ಅಕ್ರಮ ಚಿನ್ನಸಾಗಣೆ ಪ್ರಕರಣ

ಜುಲೈ 5, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 15 ಕೋಟಿ ರುಪಾಯಿ ಮೌಲ್ಯದ ಚಿನ್ನ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದರು. ಈ ಬ್ಯಾಗ್‌ ಯುನೈಟೆಡ್ ಎಮಿರೇಟ್ಸ್ ರಾಯಭಾರ ಕಚೇರಿಯ ವಿಳಾಸ ಹೊಂದಿತ್ತು,

ಕಚೇರಿಯ ವಿಶೇಷ ಸೌಲಭ್ಯ ದುರ್ಬಳಕೆ ಮಾಡಿಕೊಂಡು ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ ಎಂದು ಬಂಧಿಸಿದ್ದರು.

English summary
Gold smuggling case accused Swapna Suresh alleged that Kerala Chief Minister Pinarayi Vijayan is “harassing” her. He is harassing me because I am trying to bring the truth out. She Added later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X