Breaking; 2 ವಾರದಲ್ಲಿ ಶರಣಾಗಿ ಕೇರಳದ ಕೈದಿಗಳಿಗೆ ಸುಪ್ರೀಂ ಸೂಚನೆ

ತಿರುವನಂತಪುರಂ, ಏಪ್ರಿಲ್ 29 ; ಕೋವಿಡ್ ಸಂದರ್ಭದಲ್ಲಿ ಪೆರೋಲ್ ಪಡೆದಿರುವ ಕೇರಳದ ಕೈದಿಗಳಿಗೆ ಎರಡು ವಾರಗಳಲ್ಲಿ ಶರಣಾಗುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಮಧ್ಯಂತರ ಪೆರೋಲ್ ಪಡೆದ ಕೈದಿಗಳು ಇನ್ನೂ ಜೈಲಿಗೆ ವಾಪಸ್‌ ಆಗಿಲ್ಲ.

ಶುಕ್ರವಾರ ನ್ಯಾಯಮೂರ್ತಿ ಎಲ್. ನಾಗೇಶ್ವರರಾವ್ ಮತ್ತು ನ್ಯಾಯಮೂರ್ತಿ ಪಿ. ಎಸ್. ನರಸಿಂಹ ಅವರು ದ್ವಿಸದಸ್ಯ ಪೀಠ ಈ ಕುರಿತು ಸೂಚನೆ ಕೊಟ್ಟಿದೆ. ಯಾವಾಗಲೂ ಪೆರೋಲ್ ಮೇಲೆ ಹೊರಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೋವಿಡ್ ಪರಿಸ್ಥಿತಿ ಸುಧಾರಿಸಿದೆ. ಈಗ ಪೆರೋಲ್ ಅವಧಿಯನ್ನು ವಿಸ್ತರಣೆ ಮಾಡಲು ಯಾವುದೇ ಕಾರಣಗಳಿಲ್ಲ. ಎರಡು ವಾರದಲ್ಲಿ ಕೈದಿಗಳು ಶರಣಾಗಬೇಕು ಎಂದು ಸುಪ್ರೀಂಕೋರ್ಟ್‌ ಕೈದಿಗಳಿಗೆ ಸೂಚನೆಯನ್ನು ನೀಡಿದೆ.

Surrender Within Two Weeks Supreme Court Directs Kerala Prisoners

ಪೆರೋಲ್ ಎಂದರೆ ಮುಂದಿನ ಐದು ವರ್ಷ ನೀವು ಜೈಲಿನಿಂದ ಹೊರಗೆ ಇರಬೇಕು ಎಂದು ಅರ್ಥವಲ್ಲ ಎಂದು ಹೇಳಿರುವ ಕೋರ್ಟ್‌ ಪೆರೋಲ್ ಅವಧಿಯನ್ನು ಎರಡು ವಾರ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಮಧ್ಯಂತರ ಪೆರೋಲ್ ಪಡೆದವರು ಎರಡು ವಾರದಲ್ಲಿ ಶರಣಾಗಬೇಕು ಎಂದು ಸೂಚನೆ ಕೊಟ್ಟಿದೆ.

ಕೋವಿಡ್ ಪರಿಸ್ಥಿತಿ ಬಳಿಕ ದೇಶದಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕೈದಿಗಳು ಎರಡು ವಾರದೊಳಗೆ ಶರಣಾಗಿ ಜೈಲಿನಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕೋರ್ಟ್‌ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+