• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆ ತೀರ್ಪಿಗೆ ತಡೆ ನೀಡಲು ಸುಪ್ರಿಂಕೋರ್ಟ್‌ ನಕಾರ

|

ನವದೆಹಲಿ, ನವೆಂಬರ್ 14: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸುವಂತೆ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರಿಂಕೋರ್ಟ್‌ ನಿರಾಕರಿಸಿದೆ.

ಸುಪ್ರಿಂ ತನ್ನ ತೀರ್ಪನ್ನು ಪರಾಮರ್ಶಿಸಲು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಿಸಲು ಒಪ್ಪಿಕೊಂಡಿದೆ ಆದರೆ, ತನ್ನ ತೀರ್ಪಿಗೆ ತಡೆ ನೀಡಲು ಸುಪ್ರಿಂಕೋರ್ಟ್‌ ನಿರಾಕರಿಸಿದೆ. ಹಾಗಾಗಿ ಮುಂದಿನ ಆದೇಶ ಬರುವವರೆಗೂ ಮಹಿಳೆಯರು ಶಬರಿಮಲೆಗೆ ತೆರಳಬಹುದಾಗಿದೆ.

ಮಹಿಳೆಯರಿಗೆ ಅಯ್ಯಪ್ಪನ ದರ್ಶನ ಮಾಡಿಸಲು ಕೇರಳ ಪೊಲೀಸರ ಹೊಸ ಐಡಿಯಾ

ತೀರ್ಪು ಪರಾಮರ್ಶೆ ಅರ್ಜಿಯನ್ನು ಮುಂದಿನ ಜನವರಿ 22 ರಂದು ವಿಚಾರಣೆ ನಡೆಸುವುದಾಗಿ ಸುಪ್ರಿಂಕೋರ್ಟ್‌ ಹೇಳಿದೆ. ವಿಚಾರಣೆ ನಡೆಯುವವರೆಗೂ ಆದೇಶಕ್ಕೆ ತಡೆ ಆಜ್ಞೆ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ಅದು ಅಲ್ಲಗಳೆದಿದೆ.

ನವೆಂಬರ್ 17 ರಿಂದ ಜನವರಿ 20 ರ ವರೆಗೆ ಅಯ್ಯಪ್ಪ ಸ್ವಾಮಿ ದೇಗುಲ ತೆರೆಯಲಿದ್ದು, ಈಗಾಗಲೇ 550 ಕ್ಕೂ ಹೆಚ್ಚು ಮಹಿಳೆಯರು ದೇವಾಲಯದ ಒಳಗೆ ಹೋಗಲು ತಮ್ಮ ಹೆಸರು ನೊಂದಾವಣಿ ಮಾಡಿಕೊಂಡಿದ್ದಾರೆ.

ನ.17ಕ್ಕೆ ಶಬರಿಮಲೆ ಯಾತ್ರೆ ಆರಂಭ; 10ರಿಂದ 50 ವರ್ಷದ 560 ಮಹಿಳೆಯರ ನೋಂದಣಿ

ಆದರೆ ಸಂಪ್ರದಾಯವಾದಿಗಳು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಮಹಿಳೆಯರು ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಪೊಲೀಸರು ಹೆಲಿಕಾಪ್ಟರ್‌ಗಳನ್ನು ಬಳಸಿ ಮಹಿಳೆಯರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗುವ ಯೋಜನೆ ಮಾಡಿದ್ದಾರೆ.

English summary
Supreme court refuses to stay Sabarimala women entry order. It says wait till January 22 on which supreme court will inquiry the review petition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X