Get Updates
Get notified of breaking news, exclusive insights, and must-see stories!

ಸೌರಶಕ್ತಿ ಫಲಕ ಹಗರಣ, ಚಾಂಡಿ, ವೇಣುಗೋಪಾಲ್ ವಿರುದ್ಧ ಎಫ್ಐಆರ್

ತಿರುವನಂತಪುರಂ, ಆಗಸ್ಟ್ 18: ಉಮ್ಮನ್ ಚಾಂಡಿ ಸರ್ಕಾರವನ್ನು ಅಲ್ಲಾಡಿಸಿದ್ದ ಸೌರಶಕ್ತಿ ಫಲಕ ಹಗರಣ ಮತ್ತೆ ಸುದ್ದಿಯಲ್ಲಿದೆ. ಬಹುಕೋಟಿ ಸೌರಶಕ್ತಿ ಫಲಕ ಯೋಜನೆ ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿ ಸರಿತಾ ನಾಯರ್‌ಗೆ ಶಿಕ್ಷೆಯಾಗಿದೆ. ನಾಲ್ಕು ವರ್ಷಗಳಿಂದ ಪ್ರಮುಖ ರಾಜಕೀಯ ಮುಖಂಡರ ವಿರುದ್ಧ ಸಾಕ್ಷಿ ಸಿಗದ ಕಾರಣ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಈ ಪ್ರಕರಣದಲ್ಲಿ ಬಿಜು ರಾಧಾಕೃಷ್ಣನ್ ಮೊದಲ ಆರೋಪಿಯಾಗಿದ್ದು, ವಿವಿಧ ಪ್ರಕರಣಗಳಲ್ಲಿ ಅಪರಾಧಿ ಎನಿಸಿ ಜೈಲಿನಲ್ಲಿದ್ದು, ಕೋವಿಡ್ ಕಾರಣ ಕ್ವಾರಂಟೈನ್‌ನಲ್ಲಿರಿಸಲಾಗಿದೆ.

ಕೇರಳ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆಸಿ ವೇಣುಗೋಪಾಲ್, ಅಡೂರ್ ಪ್ರಕಾಶ್, ಹಿಬಿ ಈಡನ್, ಎಪಿ ಅಬ್ದುಲ್ ಕುಟ್ಟಿ,ಎಪಿ ಅನಿಲ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ, ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸಲಾಗಿದ್ದು, ಸಿಬಿಐ ಅಧಿಕೃತ ತನಿಖೆ ಚುರುಕುಗೊಳಿಸಿದೆ.

ಹಗರಣದ ಆರೋಪಿಗಳಾಗಿದ್ದ ಸರಿತಾ ಎಸ್ ನಾಯರ್ ಮತ್ತು ಬಿಜು ರಾಧಾಕೃಷ್ಣರಿಗೆ ಜಿಲ್ಲಾ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ, 10 ಸಾವಿರ ದಂಡವನ್ನು ವಿಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿ ಶಾಲೂ ಮೆನನ್‌ ಮತ್ತು ಆಕೆಯ ತಾಯಿಯನ್ನು ಖುಲಾಸೆಗೊಳಿಸಲಾಗಿದೆ.

ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು

ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು

ಕೇರಳ ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಮೇಲೆ ಲಂಚಕ್ಕೆ ಬದಲಾಗಿ ಸೆಕ್ಸ್ ಆಫರ್ ಕೇಳಿದ್ರು ಎಂದು ಬಿಜು ರಾಧಾಕೃಷ್ಣನ್ ಆರೋಪಿಸಿದ್ದರು. ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಉಮ್ಮನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಆರೋಪ ಹೊತ್ತುಕೊಂಡಿದ್ದರು. ಸರ್ಕಾರದ ಬಹುತೇಕ ಭ್ರಷ್ಟರು ಸರಿತಾ ಕರೆಗೆ ಕುಣಿದಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ 60,000 ಕ್ಕೂ ಅಧಿಕ ಫೋನ್ ಕರೆ ದಾಖಲೆಯನ್ನು ಪೊಲೀಸರು ಪರೀಕ್ಷಿಸಿದ್ದರು. ಸರಿತಾ ಬಳಿಯಿದ್ದ 6 ಫೋನ್‌ಗಳಲ್ಲಿನ ಕರೆಗಳನ್ನು ತನಿಖೆಗೊಳಪಡಿಸಲಾಗಿತ್ತು.

ಯಾವ ರಾಜಕೀಯ ಮುಖಂಡರಿಗೆ ಕಂಟಕ

ಯಾವ ರಾಜಕೀಯ ಮುಖಂಡರಿಗೆ ಕಂಟಕ

ಕೇರಳದ ವಿಪಕ್ಷ ನಾಯಕರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಮಾಜಿ ಸಿಎಂ ಉಮ್ಮನ್ ಚಾಂಡಿ, ಕೆ.ಸಿ.ವೇಣುಗೋಪಾಲ್, ಎಪಿ ಅನಿಲ್ ಕುಮಾರ್ ಮತ್ತು ಅಡೂರ್ ಪ್ರಕಾಶ್ ಮತ್ತು ಹಿಬಿ ಈಡನ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಾ ಕುಟ್ಟಿ ಸೇರಿದಂತೆ ಹಲವು ನಾಯಕರ ಹೆಸರು ಹಗರಣದಲ್ಲಿ ಕೇಳಿಬಂದಿದೆ.ಈ ಹಿಂದಿನ ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹಿಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ, ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿಗಳು ಹಗರಣದ ಪ್ರಮುಖ ಅಪರಾಧಿ ಸರಿತಾ ನಾಯರ್‌ರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದರು.

ದೂರು ನೀಡಿದ್ದು ಯಾರು?

ದೂರು ನೀಡಿದ್ದು ಯಾರು?

ಬಿಜು ರಾಧಾಕೃಷ್ಣನ್, ಸರಿತಾ ಹಾಗೂ ಮಣಿಮೊನ್ ಎಂಬುವರ ವಿರುದ್ಧ ಕೋಳಿಕ್ಕೋಡ್ ಕಸಬಾ ಪೊಲೀಸರ ಬಳಿ ಅಬ್ದುಲ್ ಮಜೀದ್ ಎಂಬ ಉದ್ಯಮಿ ವಂಚನೆ ಪ್ರಕರಣ ದಾಖಲಿಸಿದ್ದ. ಈ ಮೂವರು 42 ಲಕ್ಷ ರು ಪಡೆದು ಸೌರಫಲಕ ಅಳವಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕೋಳಿಕ್ಕೋಡ್, ಕಣ್ಣೂರ್, ಮಲಪ್ಪುರಂ, ವಯನಾಡು ಸೇರಿದಂತೆ ಹಲವೆಡೆ ಬಿಜು- ಸರಿತಾ ಸೌರಶಕ್ತಿ ಫಲಕ ಕಚೇರಿ ಹೊಂದಿದ್ದರು ಹಾಗೂ ಉದ್ಯಮಿ, ರಾಜಕಾರಣಿಗಳನ್ನು ವಂಚಿಸಿದ್ದಾರೆ.

ಉದ್ಯಮಿ ಅಬ್ದುಲ್ ದೂರು ನೀಡಿದ್ದರು

ಉದ್ಯಮಿ ಅಬ್ದುಲ್ ದೂರು ನೀಡಿದ್ದರು

2018ರಿಂದ ಪ್ರಕರಣದ ವಿಚಾರಣೆ 2012ರಲ್ಲಿ ಉದ್ಯಮಿ ಅಬ್ದುಲ್ ದೂರು ನೀಡಿದ್ದರು. 2018ರಿಂದ ಮೂರನೇ ಆರೋಪಿ ಮಣಿಯೊನ್ ಖುಲಾಸೆಗೊಂಡಿದ್ದರೆ, ಸರಿತಾಗೆ ಶಿಕ್ಷೆಯಾಗಿದೆ. ಇನ್ನು 30ಕ್ಕೂ ಅಧಿಕ ವಂಚನೆ ಪ್ರಕರಣಗಳು ಸರಿತಾ ಹಾಗೂ ಬಿಜು ಮೇಲಿದೆ. ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಹಾಗೂ ಸರಿತಾ ಎಸ್ ನಾಯರ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪದ ಮೇಲೆ ಬಿಜು ಸದ್ಯ ಜೈಲಿನಲ್ಲಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಕ್ಲಿಫ್ ಹೌಸ್ ಅಧಿಕೃತ ನಿವಾಸದಲ್ಲಿ ಕಿರುಕುಳ

ಕ್ಲಿಫ್ ಹೌಸ್ ಅಧಿಕೃತ ನಿವಾಸದಲ್ಲಿ ಕಿರುಕುಳ

2012ರ ಆಗಸ್ಟ್ 19ರಂದು ಅಂದಿನ ಸಿಎಂ ಉಮ್ಮನ್ ಚಾಂಡಿ ಅವರು ಕ್ಲಿಫ್ ಹೌಸ್ ಅಧಿಕೃತ ನಿವಾಸದಲ್ಲಿ ಸರಿತಾ ನಾಯರ್ ಮೇಲೆ ಲೈಂಗಿಕ ಕಿರುಕುಳ ಮಾಡಿದ್ದಾರೆ. ಇದಲ್ಲದೆ, ನಂತರ ಸಚಿವರಾದ ಶಿಬು ಬೇಬಿ ಜಾನ್ ಮತ್ತು ಎ.ಪಿ.ಅನಿಲ್ ಕುಮಾರ,ಕಾಂಗ್ರೆಸ್ ಶಾಸಕರಾದ ಹೈಬಿ ಎಡೆನ್ ಮತ್ತು ಎ.ಪಿ.ಅಬ್ದುಲ್ಲಾ ಕುಟ್ಟಿ,ಕಾಂಗ್ರೆಸ್ ನಾಯಕ ಆರ್ಯದನ್ ಶೌಕತ್ತು ಮತ್ತು ಅನಿಲ್ ಕುಮಾರರ ಆಪ್ತ ಕಾರ್ಯದರ್ಶಿ ಕೂಡ ನಾಯರ್‌ಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಬಿಜು ಆರೋಪಿಸಿದ್ದರು. ಸರಿತಾ ಅವರು ಜಸ್ಟೀಸ್ ಶಿವರಾಜನ್ ಆಯೋಗದ ಎದುರು ಹೇಳಿಕೆ ನೀಡಿದ್ದರು. ಪೊಲೀಸ್ ತನಿಖಾಧಿಕಾರಿ, ನ್ಯಾಯಾಂಗ ಸಮಿತಿ ಎದುರು ಸರಿತಾ ಹಾಗೂ ಬಿಜು ಇಬ್ಬರೂ ಲಂಚ ನೀಡುವಂತೆ ಸಿಎಂ ಕಚೇರಿಯಿಂದ ಬಂದ ಆಫರ್ ಬಗ್ಗೆ ವಿವರವಾಗಿ ತಿಳಿಸಿದ್ದರು.

ಲಂಚದ ಮೊತ್ತ ಎಷ್ಟು

ಲಂಚದ ಮೊತ್ತ ಎಷ್ಟು

ದೆಹಲಿಯ ಚಾಂದಿನಿ ಚೌಕ್‌ನ ಶಾಪಿಂಗ್ ಮಾಲ್‌ನಲ್ಲಿ ಉದ್ಯಮಿ ಎಂ.ಕೆ ಕುರುವಿಲ್ಲಾಗೆ 1.10 ಕೋಟಿ ರು ನಾನೇ ಖುದ್ದು ಕೊಟ್ಟೆ ಎಂದು ಸರಿತಾ ಹೇಳಿದ್ದರು. ನಂತರ ದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 27, 2012ರಂದು ಸಿಎಂ ಚಾಂಡಿರನ್ನು ಭೇಟಿ ಮಾಡಿದೆ. ಎಲ್ಲಾ ಹೇಗೆ ನಡೆದಿದೆ ಎಂದು ಪ್ರಶ್ನಿಸಿದರು. ನಂತರ ಕುರುವಿಲ್ಲಾ ನನ್ನ ತವರು ಮನೆಯಿಂದಲೂ ಲಕ್ಷಾಂತರ ದುಡ್ಡು ಪಡೆದುಕೊಂಡಿದ್ದಾನೆ ಎಂದು ಸರಿತಾ ಹೇಳಿಕೆ ನೀಡಿದ್ದರು. ಚಾಂಡಿ ಹಾಗೂ ಅವರ ಕ್ಯಾಬಿನೆಟ್ ಸದಸ್ಯರಿಗೆ 1.90 ಕೋಟಿ ರು ಲಂಚ ನೀಡಿರುವುದಾಗಿ ನ್ಯಾಯಾಂಗ ಸಮಿತಿ ಮುಂದೆ ಹೇಳಿಕೆ ನೀಡಿದ್ದರು. ಉಮ್ಮನ್ ಚಾಂಡಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು. ಚಾಂಡಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು, ಎಫ್ಐಆರ್ ದಾಖಲಿಸಿದ್ದರು.

ಬೆಂಗಳೂರಿನ ಕೇಸಲ್ಲಿ ಚಾಂಡಿ ಬಚಾವ್

ಬೆಂಗಳೂರಿನ ಕೇಸಲ್ಲಿ ಚಾಂಡಿ ಬಚಾವ್

ಉದ್ಯಮಿ ಎಂ.ಕೆ.ಕುರುವಿಲ್ಲಾ ಎಂಬುವರಿಂದ ಸೋಲಾರ್ ಘಟಕ ಸ್ಥಾಪನೆಗಾಗಿ 1.36 ಕೋಟಿ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಆದರೆ ವ್ಯವಹಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಹಣ ವಾಪಸ್ ನೀಡುವಂತೆ ಕುರುವಿಲ್ಲಾ ಅವರು ಕೋರ್ಟ್ ಮೊರೆ ಹೋಗಿದ್ದರು.

ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಚಾಂಡಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿ 1.65 ಕೋಟಿ ರೂ. ಜೊತೆಗೆ ಶೇ.12ರಷ್ಟು ಬಡ್ಡಿ ಸೇರಿಸಿ ಹಿಂತಿರುಗಿಸಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಚಾಂಡಿ ಅವರು ಆದೇಶ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 2015ರಿಂದ ಈ ಪ್ರಕರಣದ ವಿಚಾರಣೆ ನಡೆದು, ಐದನೇ ಆರೋಪಿಯಾಗಿದ್ದ ಚಾಂಡಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿ ಆಂಡ್ರೂಸ್ ಮೂಲಕ ಸೋಲಾರ್ ಘಟಕ ಸ್ಥಾಪನೆಗೆ ಪ್ಯಾನಲ್ ಗುತ್ತಿಗೆ ಡೀಲ್ ಕುದುರಿಸಿದ್ದರು. ನಂತರ ಸರಿತಾ ಮೂಲಕ ಚಾಂಡಿ ಕಚೇರಿಯ ಸಂಪರ್ಕ ಸಿಕ್ಕಿತ್ತು. ಚಾಂಡಿ ಖಾತೆಗೆ ಹಣ ಸಂದಾಯವಾಗಿತ್ತು. 2013ರಿಂದ ಸೋಲಾರ್ ಹಗರಣದ ತನಿಖೆಯನ್ನು ಜಸ್ಟೀಸ್ ಶಿವರಾಜನ್ ಅವರು ತನಿಖೆ ನಡೆಸಿ ವರದಿಯನ್ನು ಸಿಎಂ ಪಿಣರಾಯಿ ವಿಜಯನ್‌ಗೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+