ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ

Recommended Video

      ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ | Oneindia Kannada

      ತಿರುವನಂತಪುರ, ಜನವರಿ 08: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದ ಬೆನ್ನಲ್ಲೆ ಅದಕ್ಕೆ ವಿರುದ್ಧವಾಗಿ ಮಸೀದಿ ಪ್ರವೇಶಿಸಲು ಆರು ಮಹಿಳೆಯರು ಯತ್ನಿಸಿದ್ದಾರೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

      ಶಬರಿಮಲೆಗೆ ಸಮೀಪದಲ್ಲಿ ಇರುವ ಎರುಮೇರಿಯಲ್ಲಿನ ವಾವರ್ ಮಸೀದಿಗೆ ಇಂದು ಆರು ಹಿಂದೂ ಮಹಿಳೆಯರು ಪ್ರವೇಶಿಸಲು ಯತ್ನಿಸಿದರು. ಆದರೆ ಅವರನ್ನು ತಡೆಯಲಾಯಿತು.

      ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಆರು ಮಂದಿ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಆರೂ ಮಂದಿ ಮಹಿಳೆಯರು ತಮಿಳುನಾಡಿನವರಾಗಿದ್ದು, 'ಹಿಂದೂ ಮಕ್ಕಳ್ ಕಚ್ಚಿ' ಸಂಸ್ಥೆಯ ಸದಸ್ಯರಾಗಿದ್ದಾರೆ.

      six women try to enter Vavor masjid in Sabarimala

      ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದಕ್ಕೆ ಈ ಮಹಿಳೆಯರು ಮಸೀದಿಗೂ ಮಹಿಳೆಯರು ಪ್ರವೇಶ ಮಾಡಬೇಕು ಅದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮಸೀದಿ ಪ್ರವೇಶಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

      ವಾವರ್ ಮಸೀದಿಯು ಶಬರಿಮಲೆಗೆ ಸಮೀಪವೇ ಇದ್ದು, ಶಬರಿಮಲೆಗೆ ಹೋಗುವ ಭಕ್ತಾದಿಗಳು ಈ ಮಸೀದಿಗೆ ಸುತ್ತು ಹೊಡೆದು ಹೋಗುವ ಸಂಪ್ರದಾಯವಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+