ಶಬರಿಮಲೆ ಮಹಿಳೆಯರಿಗೆ ಪ್ರವೇಶ: ಇದು ವಿವಾದದ ಅಂತ್ಯವಲ್ಲ, ಆರಂಭ!
Recommended Video

ಐತಿಹಾಸಿಕ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕಿದ್ದ ನಿಷಿದ್ದ ಸರ್ವೋಚ್ಚ ನ್ಯಾಯಾಲಯ ತೆರವುಗೊಳಿಸಿದ ನಂತರ, ಈ ಸಂಬಂಧ ಹಲವು ದಶಕಗಳ ವಿವಾದ ಅಂತ್ಯಗೊಂಡಿತೇ? ಕೇರಳದಲ್ಲಿ ಮತ್ತು ದೇಶಾದ್ಯಂತ ಆರಂಭವಾಗಿರುವ ಭಾರೀ ಅಪಸ್ವರವನ್ನು ಅವಲೋಕಿಸುವುದಾದರೆ, ವಿವಾದ ಮತ್ತೆ ಆರಂಭವಾಗಿದೆ.
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಸ್ತ್ರೀಯರೇ ರಸ್ತೆಗಿಳಿದಿರುವುದು ಕೇರಳ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಂಟು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಕೋರ್ಟ್ ರದ್ದು ಪಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ, ಕೇರಳದ ರಾಜಮನೆತನವೂ ಸ್ತೀಯರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ.
ಕೇರಳದಲ್ಲಿ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕೇರಳ ಸರಕಾರ, ಮರುಪರಿಶೀಲನಾ ಅರ್ಜಿ ಯಾವ ಕಾರಣಕ್ಕೂ ಹಾಕುವುದಿಲ್ಲ, ಮಹಿಳೆಯರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಪ್ರತಿಭಟನೆಯ ಕಾವು ಇನ್ನಷ್ಟು ತೀವ್ರಗೊಂಡಿದೆ.
ಕೇರಳದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಅಯ್ಯಪ್ಪ ಭಕ್ತರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ಮಹಿಳೆಯರೇ ಪ್ರತಿಭಟನೆ ನಡೆಸುತ್ತಿದ್ದಾರೆ. 10-50 ವಯೋಮಿತಿಯ ಮಹಿಳೆಯರ ಪ್ರವೇಶ ನಿಷಿದ್ದ, ದೇವರಿಗೆ ನಾವು ಕೊಟ್ಟ ಮಾತು ಎಂದು, ಘೋಷಣೆ ಕೂಗುತ್ತಿದ್ದಾರೆ.
ನಿಜವಾದ ಮಹಿಳಾ ಭಕ್ತರು ದೇವಾಲಯದ ಸಂಪ್ರದಾಯವನ್ನು ಮೀರಲು ಸಿದ್ದರಿರುವುದಿಲ್ಲ, ಪ್ರಗತಿಪರ ಹೋರಾಟಗಾರರೂ ಮಾತ್ರ ' ದೇವಾಲಯಕ್ಕೆ ಪ್ರವೇಶಿಸಿದರೆ ಏನಾಗುತ್ತದೆ, ನೋಡೇ ಬಿಡೋಣ' ಎನ್ನುವುದಕ್ಕಾಗಿ ಬರಬಹುದೇ ಹೊರತು, ಇವರೆಲ್ಲಾ ನಿಜವಾದ ಭಕ್ತರಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೊಗಾಡಿಯಾ ನೇತೃತ್ವದ ಅಂತರಾಷ್ಟ್ರೀಯ ಹಿಂದೂ ಪರಿಷತ್
ವಿಎಚ್ಪಿಯ ಹಿಂದಿನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ನೇತೃತ್ವದ ಅಂತರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದ್ದಾರೆ. ರಾಜಧಾನಿ ತಿರುವನಂತಪುರಂನಲ್ಲಿ ಬುಧವಾರ (ಅ 3) ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ದ ಭಾರೀ ಸಂಖ್ಯೆಯಲ್ಲಿ ಜನರು ಹೋರಾಟಕ್ಕೆ ಧುಮುಕಿದ್ದಾರೆ, ಅದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.

ನ್ಯಾಯಾಲಯದ ತೀರ್ಪು ಅಯ್ಯಪ್ಪನಿಗಿಂತ ದೊಡ್ಡದೇನಲ್ಲ
ನ್ಯಾಯಾಲಯದ ತೀರ್ಪು ಅಯ್ಯಪ್ಪನಿಗಿಂತ ದೊಡ್ಡದೇನಲ್ಲ ಎಂದು ಭಿತ್ತಿಪತ್ರ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ರಾಜ್ಯ ಮತ್ತು ಮೋದಿ ಸರಕಾರ ಈ ಕೂಡಲೇ ಮಧ್ಯಪ್ರವೇಶಿಸಿ, ಸುಪ್ರೀಂಕೋರ್ಟಿಗೆ ಮರುಪರಿಶೀಲನಾ ಅರ್ಜಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಗೆ ಇಡುಕ್ಕಿ ಜಿಲ್ಲೆಯಿಂದ ಬಂದ ಮಹಿಳೆಯೊಬ್ಬರು, ಸೀಮೆಎಣ್ಣೆ ಮೈಗೆ ಸುರಿದುಕೊಂಡು ಆತ್ಮಾಹುತಿ ಮಾಡಿಕೊಳ್ಳಲು ಮುಂದಾದಾಗ, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ನಡೆದ ಪ್ರತಿಭಟನೆ
ಕೇರಳ ಸರಕಾರಕ್ಕೆ ಭಾರೀ ಇರಿಸುಮುರಿಸು ತಂದಿದ್ದು ಪಂಡಾಳಂ ರಾಜಮನೆತನದ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಗಾಂಧಿ ಜಯಂತಿಯ ದಿನದಂದು ಪ್ರತಿಭಟನೆ ನಡೆಸಿದ್ದಾರೆ. ಅವರವರ ನಂಬಿಕೆಯ ವಿಚಾರದಲ್ಲಿ ಆಟವಾಡಬೇಡಿ ಎನ್ನುವುದು ಅವರ ಒಕ್ಕೂರಿಲಿನ ಕೂಗಾಗಿತ್ತು. ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ರಾಜಮನೆತನ ಹೇಳಿರುವುದು ಪಿಣರಾಯಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಅಯ್ಯಪ್ಪನ ವಿಗ್ರಹದ ಮೇಲೆ ರಾರಾಜಿಸುವುದು ಪಂಡಾಳಂ ಆಭರಣ
ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಮಕರ ವಿಳಕ್ಕು (ಮಕರ ಸಂಕ್ರಾಂತಿ ಜ್ಯೋತಿ ದರ್ಶನ) ವೇಳೆ, ಗರ್ಭಗುಡಿಯಲ್ಲಿ ಅಯ್ಯಪ್ಪನ ವಿಗ್ರಹ ಮತ್ತು ಉತ್ಸವ ಮೂರ್ತಿಯ ಮೇಲೆ ರಾರಾಜಿಸುವುದು ಪಂಡಾಳಂ ರಾಜಮನೆತನದ ಸುಪರ್ದಿಯಲ್ಲಿರುವ ಆಭರಣಗಳು. ಸಂಕ್ರಾಂತಿ ಹಬ್ಬದ ವೇಳೆ, ಭಾರೀ ಬಂದೋಬಸ್ತಿನಿಂದ ಈ ಆಭರಣಗಳನ್ನು ಶಬರಿಮಲೆ ದೇವಾಲಯಕ್ಕೆ ತರುವ ಪದ್ದತಿಯಿದೆ. ಈಗ, ಆ ರಾಜಮನೆತನದವರೇ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಅಪಸ್ವರ ಎತ್ತಿರುವುದರಿಂದಲೇ, ಶಬರಿಮಲೆ ಮಹಿಳೆಯರಿಗೆ ಪ್ರವೇಶಕ್ಕೆ ತೆರೆಬಿದ್ದಿಲ್ಲ, ಬದಲಿಗೆ ಆರಂಭವಾಗಿದೆ ಎಂದು ವಾಖ್ಯಾನಿಸಬಹುದಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಧ್ಯಪ್ರವೇಶ
ಕೊಲ್ಲಂ, ಅಲಾಪ್ಜಾ, ಪಾಲಕ್ಕಾಡ್, ಕೊಚ್ಚಿ, ಇಡುಕ್ಕಿ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ತೀವ್ರವಾಗಿದೆ. ಕೇರಳ ಸರಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಖಾಡಕ್ಕೆ ಇಳಿದಿದ್ದು, ಆಧ್ಯಾತ್ಮಿಕ ಮತ್ತು ಹಿಂದೂ ಮುಖಂಡರು ಈ ಸಂಬಂಧ ತಮ್ಮ ನಿಲುವನ್ನು ಸ್ಪಷ್ಟ ಪಡುವಂತೆ ಕೋರಿದೆ. ಸುಪ್ರೀಂ ತೀರ್ಪನ್ನು ನಾವು ಗೌರವಿಸುತ್ತೇವೆ, ಹಾಗೆಯೇ, ದೇಶದ ವಿವಿಧ ದೇವಾಲಯಗಳ ಸಂಪ್ರದಾಯವನ್ನೂ ನಾವು ಗೌರವಿಸಬೇಕಲ್ಲವೇ ಎಂದು ಆರ್ ಎಸ್ ಎಸ್ ಹೇಳಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications