ಮಂಡಲ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ ದೇವಾಲಯ
Recommended Video

ತಿರುವನಂತಪುರಂ, ನವೆಂಬರ್ 16 : ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ 62 ದಿನಗಳ ಮಂಡಲ ಪೂಜೆ ಅಂಗವಾಗಿ ದೇವಾಲಯದ ಬಾಗಿಲು ತೆರಯಲಾಗಿದೆ.
ಶುಕ್ರವಾರ ಸಂಜೆ ಸಂಪ್ರದಾಯಿಕ ಪೂಜೆಗಳ ಬಳಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರಯಲಾಗಿದೆ. ಭಕ್ತಾದಿಗಳು ಶನಿವಾರದಿಂದ ದೇವರ ದರ್ಶನವನ್ನು ಪಡೆಯಬಹುದಾಗಿದೆ.
ದೇವಾಲಯದಲ್ಲಿ 62 ದಿನಗಳ ಕಾಲ 'ಮಂಡಲ ಪೂಜೆ ಮಹೋತ್ಸವ' ನಡೆಯಲಿದ್ದು ಡಿಸೆಂಬರ್ 27ರ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ. ಮಹಿಳೆಯರಿಗೆ ದೇವಾಲಯ ಪ್ರವೇಶ ಮಾಡಲು ಅವಕಾಶ ಸಿಗಲಿದೆಯೇ? ಎಂದು ಕಾದು ನೋಡಬೇಕು.

ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ 3ನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಎರಡೂ ಬಾರಿಯೂ ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಲು ಭಾರಿ ವಿರೋಧ ವ್ಯಕ್ತವಾಗಿತ್ತು.
#Kerala: Devotees throng to #SabarimalaTemple as it opens for 62-day long Mandala Pooja-Magaravilaku annual pilgrimage season. pic.twitter.com/wzOcekQzbh
— ANI (@ANI) November 16, 2018
ಶಬರಿಮಲೆ ದೇವಾಲಯದ ಬಾಗಿಲು ತೆರೆಯುವುದಕ್ಕೂ ಮುನ್ನ ದೇವಾಲಯದ ಸುತ್ತ-ಮುತ್ತಲೂ ಕೇರಳ ಪೊಲೀಸರು 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.












Click it and Unblock the Notifications